Advertisement

ಅರುಣ್ ಸಿಂಗ್ ಭೇಟಿ ಹಿನ್ನೆಲೆ : ಎಲ್ಲಾರು ಸಭೆಗೆ ಬರುವಂತೆ ಆಹ್ವಾನ ಇದೆ : ಬಿ.ಸಿ ಪಾಟೀಲ್

01:52 PM Jun 16, 2021 | Team Udayavani |

ಮೈಸೂರು : ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆ ಇಂದು ಸಂಜೆ ಸಭೆ ಇದೆ. ಎಲ್ಲಾರು ಸಭೆಗೆ ಬರುವಂತೆ ಆಹ್ವಾನ ಇದೆ ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

Advertisement

ಪ್ರತ್ಯೇಕವಾಗಿ ಮಾತನಾಡುವ ಬಗ್ಗೆ ನನಗೆ ಗೊತ್ತಿಲ್ಲ. ಅವಕಾಶ ಸಿಕ್ಕರೆ ಪ್ರತ್ಯೇಕ ಭೇಟಿ ಅವರು ಹೇಗೆ ಮಾಡುತ್ತಾರೆ ನೋಡೋಣ. ಹೊರಗಿನಿಂದ ಬಂದವರು ಒಳಗಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ. ಮನೆಗೆ ಒಂದು ಸಾರಿ‌ ಸೊಸೆ ಬಂದ ಮೇಲೆ ಮೊಳೆ ಬಡಿದು ಬಂದಾ ಹಾಗೇ. ಆ ತರಹದ ಯಾವ ಭಾವನೆಗಳು ಇಲ್ಲ.

ಟೀಕೆ ಟಿಪ್ಪಣಿಗಳು ಸಹಜ ಐದು ಬೆರಳುಗಳ ಸಮಾನಗಿರುವುದಿಲ್ಲ. ಮನೆಯಲ್ಲಿ‌ ಅಣ್ಣ ತಮ್ಮಂದರ ನಡುವೆ ವ್ಯತ್ಯಾಸಗಳು ಇರುತ್ತದೆ. ನನ್ನ ಅಧಿಕಾರ ನನ್ನ ಮಗ ಚಲಾಯಿಸುವುದು ನನಗೆ ಇಷ್ಟ ಇಲ್ಲ ಸಚಿವ ಸಿ ಪಿ ಯೋಗೇಶ್ವರ್ ಹೇಳಿಕೆ ವಿಚಾರ ಯೋಗೇಶ್ವರ ಅಡ್ಡಗೊಡೆ ಮೇಲೆ ದೀಪವಿಟ್ಟಂತೆ ಮಾತನಾಡಬಾರದು. ಏನಾದರೂ ಹೇಳುವುದಿದ್ದರೆ ಸ್ಪಷ್ಟವಾಗಿ ಹೇಳಲಿ.

ಯಡಿಯೂರಪ್ಪ ಪರವಾಗಿ ಸಹಿ ಸಂಗ್ರಹ ವಿಚಾರ. ಸಹಿ ಸಂಗ್ರಹ ಸರಿಯಲ್ಲ. ಇಂತಹ ಸಂಧರ್ಭದಲ್ಲಿ ಈ ರೀತಿಯ ಯಾವ ಬೆಳವಣಿಗೆಗಳೂ ಸರಿಯಲ್ಲಾ. ಬಿಜೆಪಿ ರಾಷ್ಟ್ರೀಯ ಪಕ್ಷ ಪಕ್ಷದ ಚೌಕಟ್ಟಿನಲ್ಲೇ ಚರ್ಚೆಯಾಗಬೇಕು. ಹಾದಿ ಬೀದಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆಗಬಾರದು ಸಚಿವ ಬಿ.ಸಿ ಪಾಟೀಲ್ ಎಂದರು.

ಬಾಂಬೆ ಟೀಂ ಮೊದಲು ಇತ್ತು, ಈಗ ಇಲ್ಲ. ಈಗಲೂ 16 ಜನರಿಂದಲೇ ಗೊಂದಲ ಎನ್ನುವ ವಿಚಾರ. ಆ ರೀತಿ ಏನೇ ಇದ್ದರೂ ಇವತ್ತು ಈಶ್ವರಪ್ಪ ಸಿಗ್ತಾರೆ ಮಾತಾಡುತ್ತೇನೆ. ಈಶ್ವರಪ್ಪ ಯಾವತ್ತು ನಮ್ಮ ಪರ ಮಾತಾಡಿಕೊಂಡು ಬಂದಿದ್ದಾರೆ. ಅವರು ಆ ರೀತಿ ಮಾತನಾಡಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ಸಚಿವ ಬಿಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next