ಕಂಪ್ಲಿ: ಅತ್ಯಂತ ಶ್ರೇಷ್ಠವಾದ ಮನುಷ್ಯ ಜನ್ಮದಲ್ಲಿ ಜನಿಸಿರುವ ಪ್ರತಿಯೊಬ್ಬರೂ ಉತ್ತಮ ಜೀವನಕ್ಕಾಗಿ ಮನಸ್ತಾಪ, ಕ್ರೋಧದಿಂದ ಮುಕ್ತರಾಗುವ ಸಂಕಲ್ಪ ವನ್ನು ಮಾಡಬೇಕಾಗಿದೆ ಎಂದು ಪ್ರಜಾ ಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲ ಯ ಗದಗ ಕೇಂದ್ರ ಮುಖ್ಯಸ್ಥರಾಗಿರುವ ರಾಜಯೋಗಿನಿ, ಬ್ರಹ್ಮಕುಮಾರಿ ಜಯಂತಿ ಅಕ್ಕ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಮತ್ತು ಪಟ್ಟಣದ ಖ್ಯಾತ ಸಂಗೀತಗಾರ ಚಿನ್ಮಯ ಜ್ಯೋಷಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯವನ್ನು ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ನಾನು ಬದಲಾಗಿಲ್ಲ ಎಂದರೆ ಸಂಸ್ಕಾರ, ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಹೇಗೆ ಆದ್ದರಿಂದ ಮೊದಲು ನಾವು ಬದಲಾಗಬೇಕು. ಆಗ ನಮ್ಮಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ ನಮ್ಮ ಮೇಳೈಸುತ್ತವೆ.
ಕ್ರೋಧ, ದುಖಃ ಮನುಷ್ಯನ ವ್ಯಕ್ತಿತ್ವಕ್ಕೆ ಶೋಭೆಯಲ್ಲ, ಭಗವಂತನ ಧ್ಯಾನದಲ್ಲಿ ಮಾನಸಿಕ ಸದೃಢತೆಯನ್ನು ಪಡೆದುಕೊಂಡು ಶಾಂತಿ ನೆಮ್ಮದಿಯ ಜೀವನ ಸಾಗಿಸಬೇಕೆಂದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಂಪ್ಲಿ ಕೇಂದ್ರದ ಸಂಚಾಲಕಿ ಬ್ರ.ಕು. ಸಕಲೇಶ್ವರಿ ಅಕ್ಕ ಮಾತನಾಡಿದರು. ನಂತರ ಯುವ ಗಾಯಕ ಚಿನ್ಮಯ ಜ್ಯೋಷಿಯವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನೂತನ ವಾರ್ಷಿಕ ದಿನದರ್ಶಿಕೆಯನ್ನು ಪಟ್ಟಣದ ಅಧ್ಯಾತ್ಮಿಕ ಚಿಂತಕರು, ಕನ್ನಡಪರ ಹೋರಾಟಗಾರರು, ರಾಜ್ಯ ಅಕ್ಕಿಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಲೋಕಾರ್ಪಣೆಗೊಳಿಸಿದರು.
ಖ್ಯಾತ ಸಂಗೀತಗಾರ ಚಿನ್ಮಯಜ್ಯೋಷಿ ಸುಮಧುರ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಕವಿತಕ್ಕ, ರತ್ನಕ್ಕ, ಶ್ರೀನಿವಾಸಪ್ಪ, ಅಚ್ಚಪ್ಪ ಶರಣಪ್ಪ, ರಾಮಣ್ಣ, ಗಂಗಾಧರಗೌಡ, ಪದ್ಮಕ್ಕ ಇದ್ದರು. ಕೊನೆಯಲ್ಲಿ ಬ್ರಹ್ಮಭೋಜನ ಜರುಗಿತು.