Advertisement
ನಷ್ಟಪರಿಹಾರ ಲಭಿಸಿಲ್ಲವೆಂದು ಹೇಳಿ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಹೆಸರು ಸೇರಿರುವವರ ನಾಲ್ವರು ತಾಯಂದಿರಾದ ಪಿ. ರಮ್ಯಾ, ಜಮೀಲಾ, ಸಿಸಿಲಿ, ಮಾಧವಿ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪೋಲ್ ಆ್ಯಂಟನಿ ಅವರು ಸರಕಾರದ ಪರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ಈ ನಿಲುವು ವ್ಯಕ್ತಪಡಿಸಲಾಗಿದೆ.
2010 ಮತ್ತು 2012ರಲ್ಲಿ ಸಿದ್ಧಪಡಿಸ ಲಾದ ಆ ಯಾದಿಗಳಲ್ಲಿ ಹಲವು ಮಂದಿ ಅನರ್ಹರು ಒಳಗೊಂಡಿದ್ದಾರೆಂದು ವಿಜಿ ಲೆನ್ಸ್ ವಿಭಾಗವು ಪತ್ತೆಹಚ್ಚಿತ್ತು. ಮಾನವ ಹಕ್ಕು ಆಯೋಗದ ಆದೇಶದ ಪ್ರಕಾರ 2013ರ ದಾಖಲೆಗಳ ಆಧಾರದಲ್ಲಿ ವೈದ್ಯರುಗಳು ತಯಾರಿಸಿದ ಯಾದಿಯಂತೆ ಅದರಲ್ಲಿ ಒಳಗೊಂಡಿರುವ ಹೆಚ್ಚು ಕಡಿಮೆ ಎಲ್ಲ ಸಂತ್ರಸ್ತರಿಗೂ ತಲಾ ಮೂರು ಲಕ್ಷ ರೂ. ಗಳಂತೆ ನಷ್ಟಪರಿಹಾರ ನೀಡಲಾಗಿದೆ.
Related Articles
ಆದರೆ ಈ ಯಾದಿಯಲ್ಲಿ ಹೆಸರು ಸೇರಿರುವ ಮೃತ ವ್ಯಕ್ತಿಗಳ ಪೈಕಿ ಹಲವರಿಗೆ ಅವರ ಕಾನೂನುಪರ ವಾರೀಸುದಾರರು ಇಲ್ಲದ ಕಾರಣ ಆ ಹಣ ವಿತರಿಸಲಾಗಿಲ್ಲ. ಕಾನೂನು ಪರವಾಗಿ ವಾರೀಸುದಾರರು ಬಂದಲ್ಲಿ ಅವರಿಗೆ ನಷ್ಟಪರಿಹಾರ ಮೊತ್ತ ನೀಡಲಾಗುವುದು ಎಂದು ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿದವಿತ್‌ನಲ್ಲಿ ಸ್ಪಷ್ಟಪಡಿಸಿದೆ.
Advertisement
ನಷ್ಟಪರಿಹಾರ ದೊರಕಿಲ್ಲವೆಂದು ದೂರಿ ಸುಪ್ರಿಂಕೋರ್ಟ್‌ಗೆ ಮನವಿ ಸಲ್ಲಿಸಿದ ಅರ್ಜಿದಾರರು 2010 ಮತ್ತು 2011ರ ಎಂಡೋ ಬಾಧಿತ ಯಾದಿಯಲ್ಲಿ ಸೇರಿದವರಾಗಿದ್ದಾರೆ. ಇವರ ಮಕ್ಕಳಿಗೆ ಆರ್ಥಿಕ ಸಹಾಯ ಲಭಿಸುತ್ತಿಲ್ಲವೆಂದು ತೋರಿಸಿ ಜಿಲ್ಲಾಧಿಕಾರಿಯ ಗಮನಕ್ಕೂ ತರಲಾಗಲಿಲ್ಲ. ಆದರೂ ನಾಲ್ವರು ಸಂತ್ರಸ್ತರಿಗೆ ಚಿಕಿತ್ಸೆ ಇತ್ಯಾದಿಗಳಿಗೆ ಕೇರಳ ಸರಕಾರವು ಹಣ ವಿನಿಯೋಗಿಸಿದೆ. ಆದ್ದರಿಂದ ಈ ವಿಷಯದಲ್ಲಿ ನ್ಯಾಯಾ ಲಯದ ಕ್ರಮವನ್ನು ಹೊರತು ಪಡಿಸ ಬೇಕೆಂದು ಮುಖ್ಯ ಕಾರ್ಯ ದರ್ಶಿ ಅಫಿದವಿತ್‌ನಲ್ಲಿ ವಿನಂತಿಸಿಕೊಂಡಿದ್ದಾರೆ.
ಕಾನೂನು ಹೋರಾಟ ಮುಂದುವರಿಕೆ ಕಾಸರಗೋಡು ಜಿಲ್ಲೆಯ ಅರ್ಹ ಎಲ್ಲ ಎಂಡೋಸಲ್ಫಾನ್ ಬಾಧಿತರಿಗೂ ಸೂಕ್ತ ನಷ್ಟಪರಿಹಾರ ಮೊತ್ತ ವಿತರಿಸಬೇಕು. ಇಲ್ಲದಿದ್ದಲ್ಲಿ ಕಾನೂನು ರೀತ್ಯಾ ಹೋರಾಟ ಮುಂದುವರಿಸಲಾಗುವುದು. ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಕೇರಳ ಸರಕಾರ ಕೂಡ ಮೀನಮೇಷ ಎಣಿಸುವುದನ್ನು ಬಿಟ್ಟು ನೋವಿನಿಂದ ಬದುಕು ಸಾಗಿಸುವವರ ನೆರವಿಗೆ ಧಾವಿಸಬೇಕು. ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಬಾರದು.
ಪದಾಧಿಕಾರಿಗಳು ಎಂಡೋಸಲ್ಫಾನ್ ವಿರುದ್ಧ ಹೋರಾಟ ಕ್ರಿಯಾ ಸಮಿತಿ