Advertisement

ಶಬರಿಮಲೆ ಪ್ರವೇಶ ಮಹಿಳೆಯರ ಹಕ್ಕು

06:00 AM Jul 19, 2018 | |

ಹೊಸದಿಲ್ಲಿ: ಶಬರಿಮಲೆ ದೇಗುಲದಲ್ಲಿ ಪೂಜೆ ಮಾಡಲು ಪುರುಷರಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಮಹಿಳೆಯರಿಗೂ ಇದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೂ ಪ್ರವೇಶ ನೀಡಲು ಅವಕಾಶ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ| ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳುಳ್ಳ ಸಾಂವಿಧಾನಿಕ ಪೀಠವು ಎಲ್ಲೂ ಖಾಸಗಿ ದೇಗುಲವೆಂಬ ವಿಚಾರವೇ ಅಸ್ತಿತ್ವದಲ್ಲಿ ಇಲ್ಲ ಎಂದು ಹೇಳಿದೆ.

Advertisement

ಎಲ್ಲೆಲ್ಲಿ ಪುರುಷರು ಹೋಗಬಹುದೋ ಅಲ್ಲಿಗೆ ಮಹಿಳೆಯರೂ ತೆರಳಬಹುದು. ಪುರುಷರಿಗೆ ಅನ್ವಯಿ ಸುವ ಸಂಗತಿಗಳೆಲ್ಲವೂ ಮಹಿಳೆಯರಿಗೂ ಅನ್ವಯಿಸುತ್ತವೆ. ದೇಗುಲಕ್ಕೆ ಪ್ರವೇಶಿಸುವುದು ಶಾಸನವನ್ನು ಆಧರಿಸಿಲ್ಲ. ಇದು ಸಾಂವಿಧಾನಿಕ ಹಕ್ಕು. ಇದಕ್ಕೆ ಸಂಬಂಧಿಸಿದಂತೆ ಸಂವಿಧಾನದ 25 ಹಾಗೂ 26ನೇ ಕಲಂನಲ್ಲಿ ವಿವರಿಸ ಲಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಯ್ಯಪ್ಪ ಸ್ವಾಮಿ ದೇಗುಲದ ಆಡಳಿತ ವಹಿಸಿರುವ ತಿರುವಾರುಕೂರು ದೇವಸ್ವಂ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ, ಯಾವ ಆಧಾರದ ಮೇಲೆ ನಿಷೇಧ ಹೇರಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ನ್ಯಾಯಪೀಠದಲ್ಲಿದ್ದ ಮತ್ತೂಬ್ಬ ಹಿರಿಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ “ಪ್ರತಿ ಮಹಿಳೆಯೂ ದೇವರ ಸೃಷ್ಟಿ. ಹೀಗಾಗಿ ಉದ್ಯೋಗ ಅಥವಾ ಪ್ರಾರ್ಥನೆ ಸಲ್ಲಿಕೆಯಲ್ಲಿ ತಾರತಮ್ಯವೇಕೆ?’ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ದೇಗುಲ ಪ್ರವೇಶಿಸದಂತೆ ತಡೆದಿರುವುದು ಸಂವಿಧಾನವನ್ನು ಉಲ್ಲಂ ಸಿದಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿತು.

ಕೇರಳ ಸರಕಾರದ ವೈರುಧ್ಯ: ಕೇರಳ ಸರಕಾರ ಬದಲಾದಂತೆ ತನ್ನ ನಿಲುವಿನಲ್ಲೂ ಬದಲಾವಣೆ ಮಾಡುತ್ತಿರುವುದಕ್ಕೆ ಕೋರ್ಟ್‌ ತರಾಟೆಗೆ ತೆಗೆದು ಕೊಂಡಿದೆ. 2015ರಲ್ಲಿ ದೂರು ಸಲ್ಲಿಸಿದ ಸಮಯದಲ್ಲಿ ಮಹಿಳೆಯರ ಪ್ರವೇಶದ ಪರ ನಿಲುವನ್ನು ಕೇರಳ ಸರಕಾರ ಹೊಂದಿತ್ತು. ಆದರೆ 2017ರಲ್ಲಿ ಸರಕಾರ ಬದಲಾಗುತ್ತಿದ್ದಂತೆ ವಿರೋಧಿಸಿ ಅಫಿಡವಿಟ್‌ ಸಲ್ಲಿಸಿತ್ತು. ಈಗ ಪುನಃ ಮಹಿಳೆಯರ ಪ್ರವೇಶವನ್ನು ಬೆಂಬಲಿಸುವುದಾಗಿ ಹೇಳಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋರ್ಟ್‌, ನೀವು ಕಾಲ ಬದಲಾದಂತೆ ನಿಲುವನ್ನೂ ಬದಲಿಸುತ್ತಿದ್ದೀರಿ ಎಂದಿದೆ. 

ಇಂಡಿಯನ್‌ ಯಂಗ್‌ ಲಾಯರ್ಸ್‌ ಅಸೋಸಿಯೇಶನ್‌ ಹಾಗೂ ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆ ಗುರುವಾರವೂ ಮುಂದುವರಿಯಲಿದೆ. ಕಳೆದ ಅ.13ರಂದು ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು. ಮಹಿಳೆಯರು ಎಂಬುದೇ ಕಾರಣವಲ್ಲ: ಶಬರಿಮಲೆ ದೇಗುಲಕ್ಕೆ 15 ರಿಂದ 50 ವರ್ಷಗಳವರೆಗಿನ ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವುದು ಮಹಿಳೆ ಎಂಬ ಕಾರಣಕ್ಕಾಗಿರದೆ ಆಕೆ ಋತುಮತಿಯಾಗುತ್ತಾಳೆ ಎಂಬ ಕಾರಣಕ್ಕೆ ಎಂದು ಅರ್ಜಿದಾರರ ಪರ ವಾದಿಸಿದ ವಕೀಲ ಇಂದಿರಾ ಜೈಸಿಂಗ್‌ ಹೇಳಿದ್ದಾರೆ.

Advertisement

ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿಷೇಧ ಅಸಾಂವಿಧಾನಿಕ ಎಂಬ ಸುಪ್ರೀಂ ಕೋರ್ಟ್‌ ಅಭಿಪ್ರಾಯ ಸ್ವಾಗತಾರ್ಹ. ಮಹಿಳೆಗೆ ಸಮಾಜದಲ್ಲಿ ಅನ್ಯಾಯ ಆದಾಗಲೆಲ್ಲ ನ್ಯಾಯಾಲಯದಿಂದ ಆಕೆಗೆ ನ್ಯಾಯ ಸಿಕ್ಕಿದೆ.
ಡಾ| ಜಯಮಾಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next