ಮಂಡ್ಯ: ರಕ್ತದಾನ ಶ್ರೇಷ್ಠದಾನವಾಗಿದ್ದು, ಪ್ರತಿಯೊಬ್ಬರೂ ಇದರ ಅರಿವು ಮೂಡಿಸಿಕೊಂಡು ರಕ್ತದಾನದ ಮೂಲಕ ಸಾವಿರಾರು ರೋಗಿಗಳ ಜೀವ ಉಳಿಸಲು ಮುಂದಾಗಬೇಕು ಎಂದು ಡೀಸಿ ಡಾ. ಎಂ.ವಿ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ರಕ್ತವನ್ನು ಸ್ವಯಂ ಪ್ರೇರಿತ ದಾನಮಾಡಿ ಮತ್ತು ಕೋವಿಡ್ ವಿರುದ್ಧದ ಹೋರಾಟಕ್ಕೆ ಕೊಡುಗೆಯಾಗಲಿ ಎಂಬ ಘೋಷ ವಾಕ್ಯದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಜಾಗೃತರಾಗಿ ರಕ್ತದಾನ ಮಾಡಲು ಸ್ವಯಂ ಪ್ರೇರಿತರಾಗಬೇಕು. ರಕ್ತದಾನ ಮಾಡುವ ವ್ಯಕ್ತಿಗಳಿಗೂ ಅನುಕೂಲವಾಗುತ್ತದೆ. ರಕ್ತವನ್ನು ತೆಗೆದು ಕೊಳ್ಳುವ ರೋಗಿಗೂ ಕೂಡ ಅನು ಕೂಲವಾಗುತ್ತದೆ.ಯಾವುದೇಕಾರಣಕ್ಕೂ ರಕ್ತವನ್ನು ಮಾರಾಟ ಮಾಡಲು ಹೋಗಬಾರದು ಎಂದರು.
ರಕ್ತದಾನಕ್ಕೆ ಅವಕಾಶ: ಮಂಡ್ಯ ಜಿಲ್ಲೆಯಲ್ಲಿ ಸುಸಜ್ಜಿತವಾದ ರಕ್ತ ಸಂಗ್ರಹ ನಿಧಿ ಇದ್ದು, ನಮ್ಮ ತಂಡ ಎಲ್ಲಕಾಲೇಜುಗಳಲ್ಲಿ ಹೋಬಳಿ ಮಟ್ಟದಲ್ಲಿ ಕ್ಯಾಂಪ್ ನಡೆಸಿ ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಪ್ರೇರಣೆ ನೀಡುತ್ತಿದೆ. ವಿಶ್ವ ಸ್ವಯಂ ಪ್ರೇರಿತ ರಕ್ತದಾನದಿನಾಚರಣೆಯನ್ನುಅಕ್ಟೋಬರ್ 1 ರಂದು ಮಾಡಲಾಗುತ್ತಿದ್ದು. 18 ವರ್ಷ ತುಂಬಿದ ಎಲ್ಲ ಆರೋಗ್ಯ ವ್ಯಕ್ತಿಗಳೂ ರಕ್ತದಾನ ಮಾಡಲು ಅವಕಾಶವಿದೆ ಎಂದು ಹೇಳಿದರು.
ರಕ್ತದಾನದಿಂದ ಜೀವ ಉಳಿವು: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡಮಾತನಾಡಿ, ಪ್ರತಿಯೊಬ್ಬರೂ 18 ವರ್ಷ ದಿಂದ 45 ವರ್ಷದವರೆಗೂ ಹಾಗೂಆರೋಗ್ಯವಂತರಾಗಿದ್ದರೆ 60 ವರ್ಷ ದವರು ರಕ್ತದಾನ ಮಾಡಬಹುದಾಗಿದೆ. ರೋಗ ನಿರೋಧಕ ಶಕ್ತಿ ಇರುವ ವ್ಯಕ್ತಿಯ ರಕ್ತದಾನದಿಂದ ಕೋವಿಡ್ ಪಾಸಿಟಿವ್ ಇರುವ ಅನೇಕ ಜೀವಗಳನ್ನು ಉಳಿಸಬಹುದು. ಒಬ್ಬ ಆರೋಗ್ಯ ವ್ಯಕ್ತಿ ರಕ್ತದಾನ ಮಾಡುವುದರಿಂದ3ಜೀವಗಳನ್ನು ಉಳಿ ಸಬಹುದು ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಆರ್‌ಸಿಎಚ್ ಅಧಿಕಾರಿ ಡಾ.ಸೋಮಶೇಖರ್, ಎನ್ ಎಸಿಂ ಅಧಿಕಾರಿ ಡಾ.ಅನಿಲ್‌ಕುಮಾರ್, ಸರ್ಕಾರಿ ಮತ್ತು ಸಂಜೀವಿ ರಕನಿಧಿಯ ವೈದ್ಯಾಧಿಕಾರಿಗಳು ಮತ್ತು ವಿವಿಧಇಲಾಖೆ ಅಧಿಕಾರಿಗಳು ಹಾಜರಿದ್ದರು.