Advertisement

ಗ್ರಾಮ ಸ್ವಚ್ಛತೆಗೆ ಎಲ್ಲರೂ ಕೈ ಜೋಡಿಸಿ: ಜಕ್ಕಪ್ಪಗೋಳ

01:27 PM Jun 17, 2019 | Team Udayavani |

ರಾಯಬಾಗ: ಭಾರತವನ್ನು ಬಯಲು ಶೌಚ ಮುಕ್ತವನ್ನಾಗಿ ಮಾಡಿ ಸ್ವಚ್ಛ ಭಾರತ ಮಾಡುವ ಉದ್ದೇಶದಿಂದ ಸರ್ಕಾರ ರಾಜ್ಯದಲ್ಲಿ ಪ್ರಚಾರ ಆಂದೋಲನ ಹಮ್ಮಿಕೊಂಡಿದೆ ಎಂದು ತಾಪಂ ಇಒ ಡಿ.ಎಂ. ಜಕ್ಕಪ್ಪಗೋಳ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ‌ ಸ್ವಚ್ಛಮೇವ ಜಯತೇ ಆಂದೋಲನ ರಥ ಯಾತ್ರೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಈ ಪ್ರಚಾರ ರಥವು ತಾಲೂಕಿನಲ್ಲಿ ಜು.10ರವರೆಗೆ ಸಂಚರಿಸಿ, ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದರು.

ತಾಪಂ ಲೇಕ್ಕಾಧಿಕಾರಿ ಉಮೇಶ ಪೋಳ ಮಾತನಾಡಿ, ಸ್ವಚ್ಛ ಭಾರತ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ವೈಯಕ್ತಿ ಶೌಚಾಲಯ ನಿರ್ಮಿಸಲು, ನೀರಿನ ಮೀತ ಬಳಕೆ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ಈ ಆಂದೋಲನಲ್ಲಿ ಕೈ ಜೋಡಿಸಿ, ಸ್ವಚ್ಛ ಭಾರತ ಮಿಷನ್‌ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಸ್ವಚ್ಛ ಮೇವ ಜಯತೇ ಆಂದೋಲನ ಪ್ರಯುಕ್ತ ತಾಪಂ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ತಾಪಂ ಸದಸ್ಯ ನಾಮದೇವ ಕಾಂಬಳೆ, ಐ.ಆರ್‌.ನದಾಫ್‌, ತೋಟಗಾರಿಕೆ ಅಧಿಕಾರಿ ಎಂ.ಆರ್‌. ಕಳ್ಳಿಮನಿ, ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಎಸ್‌. ಪಾಟೀಲ, ಡಾ| ಎಸ್‌.ಎಂ. ಪಾಟೀಲ, ಬಸವರಾಜ ಕಾಂಬಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next