Advertisement

ಪ್ರತಿ ವರ್ಷ 10 ಮಿಲಿಯನ್‌ ಜನತೆ ಕ್ಯಾನ್ಸರ್‌ನಿಂದ ಸಾವು

11:49 AM Feb 08, 2023 | Team Udayavani |

ತಾಳಿಕೋಟೆ: ಕ್ಯಾನ್ಸರ್‌ ಸಂಬಂಧಿತ ಸಾವುಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಪ್ರಕರಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವ ಮೂಲಕ ಸುಲಭವಾಗಿ ತಡೆಯಬಹುದಾಗಿದೆ. ಜೀವನದ ಬದಲಾವಣೆಗಳು ಮತ್ತು ನಿಯಮಿತ ತಪಾಸಣೆಯಿಂದ ಕ್ಯಾನ್ಸರ್‌ ಬರದಂತೆ ನೋಡಿಕೊಳ್ಳಬಹುದಾಗಿದೆ ಎಂದು ಎನ್‌ಸಿಡಿ ಕೌನ್ಸಿಲರ್‌ ಸಿದ್ದಮ್ಮ ಬ್ಯಾಲಾಳ ನುಡಿದರು.

Advertisement

ವಿಶ್ವ ಕ್ಯಾನ್ಸರ್‌ ದಿನಾಚರಣೆ ನಿಮಿತ್ತ ಜನಜಾಗೃತಿ ಮೂಡಿಸುವ ಕುರಿತು ಜೆಎಸ್‌ ಎಸ್‌ ಕಾಲೇಜ್‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಎನ್‌ಸಿಡಿ ಘಟಕದ ವತಿಯಿಂದ ಏರ್ಪಡಿಸಿದ್ದ ವಿಶ್ವ ಕ್ಯಾನ್ಸರ್‌ ದಿನಾಚರಣೆಯ ಜನಜಾಗೃತಿ ಹಾಗೂ ತಡೆಗಟ್ಟುವ ಕುರಿತು ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ಯಾನ್ಸರ್‌ ಜಾಗೃತಿ ಮೂಡಿಸಲು ಮತ್ತು ಜನರನ್ನು ಜಾಗೃತರನ್ನಾಗಿ ಮಾಡಲು ಪ್ರತಿ ವರ್ಷ ಫೆ. 4ರಂದು ವಿಶ್ವ ಕ್ಯಾನ್ಸರ್‌ ದಿನವೆಂದು ಆಚರಿಸಲಾಗುತ್ತದೆ. ಸರ್ಕಾರಗಳು ಆರೋಗ್ಯ ತಜ್ಞರು ಮತ್ತು ಸಾರ್ವಜನಿಕರು ಸೇರಿದಂತೆ ಹಲವಾರು ಮಧ್ಯಸ್ತಗಾರರನ್ನು ಒಗ್ಗೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ ಎಂದರು.

ಟಿಬಿ ಮೇಲ್ವಿಚಾರಕ ಶಿವರಾಜ್‌ ದಿಕ್ಷೀತ ಮಾತನಾಡಿ, ಮಾರಣಾಂತಿಕ ಖಾಯಿಲೆಯ ಪ್ರಮುಖ ಕಾರಣಗಳೆನೆಂದರೆ ತಂಬಾಕು ಬಳಕೆ. ಸೂರ್ಯನ ನೆರಳಾತೀತ ಕಿರಣ ಮತ್ತು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದು ಅಲ್ಲದೇ ಧೂಮಪಾನವು ಕ್ಯಾನ್ಸರ್‌ ಮತ್ತು ಇತರ  ಧೀರ್ಘ‌ ಕಾಲದ ಕಾಯಿಲೆಗೆ ಕಾರಣವಾಗಬಹುದು ಎಂಬುದು ಆಶ್ಚರ್ಯವೇನಿಲ್ಲ ಎಂದರು. ಧೂಮಪಾನವು ಶ್ವಾಸಕೋಶದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಜೊತೆಗೆ ಹಲವಾರು ಮಾರಣಾಂತಿಕತೆಗಳ ಅಪಾಯವನ್ನು ಹೆಚ್ಚಿಸುತ್ತದೆ. ತಕ್ಷಣ ಧೂಮಪಾನ ಮಾಡುವುದನ್ನು ನಿಲ್ಲಿಸಿದರೆ ಕ್ಯಾನ್ಸರ್‌ ಬರುವ ಅಪಾಯ ಕಡಿಮೆಯಾಗುತ್ತದೆ ಎಂದರು.

ಕ್ಯಾನ್ಸರ್‌ಗೆ ಮುಖ್ಯ ಕಾರಣವೆನೆಂದರೆ, ಬೊಜ್ಜು, ಸ್ತನ ಕ್ಯಾನ್ಸರ್‌, ಕರುಳಿನ ಕ್ಯಾನ್ಸರ್‌, ಯಂಡೊಮೆಟ್ರಿಯಲ್‌ ಕ್ಯಾನ್ಸರ್‌, ಅನ್ನನಾಳದ ಕ್ಯಾನ್ಸರ್‌, ಅಲ್ಲದೇ ಮೂತ್ರಪಿಂಡದ ಕ್ಯಾನ್ಸರ್‌ ಇವುಗಳು ಅಪಾಯವನ್ನು ಹೆಚ್ಚಿಸುವ ಕೆಲವು ಕ್ಯಾನ್ಸರ್‌ ಗಳಾಗಿವೆ ಎಂದು ತಿಳಿಹೇಳಿದ ಅವರು, ಕ್ಯಾನ್ಸರ್‌ ಬೆಳವಣಿಗೆಯನ್ನು ಬೆಂಬಲಿಸುವ ಎರಡು ರಾಸಾಯನಿಕಗಳು ಆರೋಗ್ಯಕರ ದೇಹದ ತೂಕವನ್ನು ಸಾ ಧಿಸುವ ಅಥವಾ ನಿರ್ವಹಿಸುವ ಮೂಲಕ ಅಪಾಯಗಳನ್ನು ಕಡಿಮೆ ಮಾಡಬಹುದಾಗಿದೆ ಎಂದರು.

ಇದೇ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಿದ್ದಮ್ಮ ಬ್ಯಾಲ್ಯಾಳ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಜೆಎಸ್‌ ಎಸ್‌ ಕಾಲೇಜ್‌ ಪ್ರಾಚಾರ್ಯ ಗಿರೀಶ ಪಿ.ಆರ್‌., ಕಾರ್ಯದರ್ಶಿಗಳಾದ ಶ್ರೀಕಾಂತ ಪತ್ತಾರ ಹಾಗೂ ಕಾಲೇಜ್‌ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಜನಜಾಗೃತಿ ಜಾಥಾ ಮೂಡಿಸುವುದರೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next