Advertisement

ಪ್ರತಿ ವಾಹನ ತಪಾಸಣೆ ಕಡ್ಡಾಯ

03:42 PM Nov 20, 2019 | Team Udayavani |

ಚಿಕ್ಕಬಳ್ಳಾಪುರ: ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಚಿಕ್ಕಬಳ್ಳಾಪುರದ ವಿವಿಧೆಡೆಗಳಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳ ಕಾರ್ಯವೈಖರಿಯನ್ನು ಮಂಗಳವಾರ ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್‌, ಕೆಲವು ಚೆಕ್‌ ಪೋಸ್ಟ್‌ಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ತಾಲೂಕಿನ ಚದಲುಪುರ, ಕಣಿವೆ ನಾರಾ ಯಣಪುರ, ಗೊಲ್ಲಹಳ್ಳಿ ಮತ್ತಿತರ ಕಡೆ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಿ.ಫೌಜಿಯಾ ತರುನ್ನುಮ್‌, ಭದ್ರತಾ ಸಿಬ್ಬಂದಿಗೆ ಸಲಹೆ, ಸೂಚನೆ ನೀಡಿದರು. ಮಾದರಿ ನೀತಿ ಸಂಹಿತೆ ಭಾಗವಾಗಿ ತೆರೆದಿರುವ ಚೆಕ್‌ ಪೋಸ್ಟ್‌ಗಳಲ್ಲಿ ಸಿಬ್ಬಂದಿ ಕಾಲಕಾಲಕ್ಕೆ ವಾಹನಗಳನ್ನು ಪರಿಶೀಲಿಸ ಬೇಕು. ಅನು ಮಾನ ಬರುವ ವಾಹನ ಹಾಗೂ ವ್ಯಕ್ತಿ ಯನ್ನು ತಪಾಸಣೆ ನಡೆ ಸಿಯೇ ಕಳುಹಿಸ ಬೇಕು. ನಗದು ಅಥವಾ ಬೆಲೆ ಬಾಳುವ ವಸ್ತುಗಳು ಸಿಕ್ಕಿದ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕೆಂದರು. ಚೆಕ್‌ ಪೋಸ್ಟ್‌ ಸಿಬ್ಬಂದಿ ಪಾಳಿಯಂತೆ ದಿನದ 24 ಗಂಟೆ ಕೆಲಸ ಮಾಡಬೇಕು, ಚುನಾವಣೆ ನೈತಿಕವಾಗಿ ಹಾಗೂ ನ್ಯಾಯ ಸಮ್ಮತವಾಗಿ ನಡೆಯ ಬೇಕಾದರೆ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದರು.

ಮೂಲ ಸೌಕರ್ಯ ಪರಿಶೀಲನೆ: ಇದೇ ವೇಳೆ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವ  ಹಿಸುತ್ತಿರುವ ಅಧಿಕಾರಿಗಳ ಹಾಗೂ ಭದ್ರತಾ ಸಿಬ್ಬಂದಿಗೆ ಒದಗಿಸಿರುವ ಮೂಲ ಸೌಕರ್ಯಗಳ ಬಗ್ಗೆಯು ಸಿಇಒ ಗಮನ ಸೆಳೆದು ಪರಿಶೀಲಿಸಿ ಅಧಿಕಾರಿಗಳು ಅಹವಾಲು ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next