Advertisement
ಬೈಂದೂರು ಕ್ಷೇತ್ರದ ವಿವಿಧೆಡೆಗಳಲ್ಲಿ ಅವರು ಶುಕ್ರವಾರ ಹಾಗೂ ಗುರುವಾರ ನಡೆದ ಬೃಹತ್ ರೋಡ್ ಶೋಗಳಲ್ಲಿ ಪಾಲ್ಗೊಂಡು, ಮಾತನಾಡಿದರು.
ನನ್ನ ಮೂಲಕ ಬೈಂದೂರಿನ ಅಭಿವೃದ್ಧಿ ಇನ್ನೊಂದು ಮಗ್ಗುಲಿಗೆ ಸಾಗಲಿದೆ. ಬೈಂದೂರಿನ ಜನರ ಆಶೀರ್ವಾದ ಮಾಡುವ ನಿರೀಕ್ಷೆಯಿದೆ. ರಸ್ತೆ, ನೆಟÌರ್ಕ್‌ನಂತಹ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಕೊನೆಗೊಳ್ಳಬೇಕು ಎನ್ನುವುದೇ ನನ್ನ ಪ್ರಥಮ ಆದ್ಯತೆ. ಅದಲ್ಲದೆ ಶಿಕ್ಷಣ ಪಡೆದು ದೂರ-ದೂರದ ಊರುಗಳಲ್ಲಿ ಉದ್ಯೋಗಕ್ಕೆ ತೆರಳದಂತೆ ಇಲ್ಲಿಯೇ ಉದ್ಯೋಗ ಸೃಷ್ಟಿ, ಉದ್ಯಮ ಆರಂಭಕ್ಕೆ ಪೂರಕ ವಾತಾವರಣ ನಿರ್ಮಿಸಿ ಕೊಡಲು ಪ್ರಯತ್ನ ಪಡುವೆ ಎಂದವರು ಭರವಸೆ ನೀಡಿದರು. ಬೈಂದೂರಿನಾದ್ಯಂತ ರೋಡ್ ಶೋ
ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಪರ ಬೈಂದೂರು ಕ್ಷೇತ್ರದಾದ್ಯಂತ ಕಳೆದೆರಡು ದಿನಗಳಿಂದ ಬೃಹತ್ ರೋಡ್ ಶೋಗಳು ನಡೆಯಿತು. ಈ ರೋಡ್ ಶೋಗೆ ಬಹುತೇಕ ಎಲ್ಲ ಕಡೆಗಳಿಂದಲೂ ಜನರಿಂದ, ಪಕ್ಷದ ಕಾರ್ಯಕರ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಉಪ್ಪಿನಕುದ್ರು, ತಲ್ಲೂರು, ಹಟ್ಟಿಯಂಗಡಿ, ಗುಲ್ವಾಡಿ, ನೇರಳಕಟ್ಟೆ ಪೇಟೆ, ನೆಂಪು, ಇಡೂರು, ಚಿತ್ತೂರು, ಆಲೂರು ಕ್ರಾಸ್, ನೂಜಾಡಿ ಕ್ರಾಸ್, ಬಗ್ವಾಡಿ ಕ್ರಾಸ್, ಕುಂದಬಾರಂದಾಡಿ, ಹಕ್ಲಾಡಿ, ಸೇನಾಪುರ, ಗುಡ್ಡೆಯಂಗಡಿ, ಪಡುಕೋಣೆ, ಮರವಂತೆ, ಶಿರೂರು, ಪಡುವರಿ, ಬೈಂದೂರು, ಯಡ್ತರೆ, ಗೋಳಿಹೊಳೆ, ಯಳಜಿತ್, ಅರೆಶಿರೂರು, ಕೊಲ್ಲೂರು, ಜಡ್ಕಲ್, ಸೆಳ್ಕೊàಡು, ಹಳ್ಳಿಹೊಳೆ, ಕಮಲಶಿಲೆ, ಆಜ್ರಿ, ಮೂಡುಬಗೆ, ಅಂಪಾರು, ಶಂಕರನಾರಾಯಣ ಮತ್ತಿತರ ಕಡೆಗಳಲ್ಲಿ ರೋಡ್ ಶೋ ನಡೆಯಿತು.
Related Articles
Advertisement
ಅಭಿವೃದ್ಧಿಯೇ ಗಂಟಿಹೊಳೆ ಗೆಲುವಿಗೆ ಶ್ರೀ ರಕ್ಷೆ
ಬೈಂದೂರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮಾಡಿರುವ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಗೆಲುವಿಗೆ ಶ್ರೀ ರಕ್ಷೆಯಾಗಲಿದೆ. ಕ್ಷೇತ್ರದಾದ್ಯಂತ ಗುರುರಾಜ್ ಹಾಗೂ ಬಿಜೆಪಿಗೆ ಜನರು ನೀಡುತ್ತಿರುವ ಬೆಂಬಲವು ಖಂಡಿತ ಗೆಲುವಿಗೆ ಸಹಕಾರಿಯಾಗಲಿದೆ. ಅಭಿವೃದ್ಧಿ ಕಾರ್ಯ, ಹಿಂದುತ್ವ, ಯುವ ಚಿಂತನೆ, ಶೈಕ್ಷಣಿಕ, ಪ್ರವಾಸೋದ್ಯಮ, ಮೀನುಗಾರಿಕೆ, ಉದ್ಯೋಗ ಸೃಷ್ಟಿ, ಕೈಗಾರಿಕೆಗಳಿಗೆ ಉತ್ತೇಜನದಂತಹ ದೂರದೃಷ್ಟಿ ಚಿಂತನೆ ಅವರಲ್ಲಿದೆ.– ಕೆ. ಲಕ್ಷ್ಮಿನಾರಾಯಣ, ಬೈಂದೂರಿನ ಮಾಜಿ ಶಾಸಕರು ಹಳ್ಳಿ-ಹಳ್ಳಿಗಳಲ್ಲಿ ಸುತ್ತಾಡಿದಾಗ ಜನರಿಂದ ಅಪಾರ ಪ್ರೀತಿ ವ್ಯಕ್ತವಾಗುತ್ತಿದ್ದು, ಅದನ್ನು ಇಟ್ಟುಕೊಂಡು ಋಣವನ್ನು ತೀರಿಸುವ ಸೇವೆ ಮಾಡುವೆ. ಸುಕುಮಾರ್ ಶೆಟ್ರಾ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಭರವಸೆಗಳ ಪೈಕಿ ಶೇ. 90 ರಷ್ಟನ್ನು ಈಡೇರಿಸಿದ್ದಾರೆ. ನಮಗೆ ರಸ್ತೆ ಬಂದಿದ್ದು, ಬಿ.ವೈ. ರಾಘವೇಂದ್ರ ಹಾಗೂ ಸುಕುಮಾರ್ ಶೆಟ್ಟರಿಂದಾಗಿ ಅನ್ನುವ ಮಾತುಗಳು ಹಳ್ಳಿ-ಹಳ್ಳಿಗಳಲ್ಲಿ ಕೇಳಿ ಬರುತ್ತಿದೆ. ಇನ್ನುಳಿದ ಶೇ. 10 ರಷ್ಟು ಬಾಕಿಯಿದ್ದು, ಅದನ್ನು ಪೂರೈಸುವ ಜತೆಗೆ, ಇನ್ನಷ್ಟು ಅಭಿವೃದ್ದಿಯ ಕಲ್ಪನೆ ಸಾಕಾರಗೊಳ್ಳಲಿದೆ.
– ಗುರುರಾಜ್ ಗಂಟಿಹೊಳೆ, ಬಿಜೆಪಿ ಅಭ್ಯರ್ಥಿ