Advertisement

Dakshina Kannada ಪ್ರವಾಸಿ ಅಭಿವೃದ್ಧಿಗೆ ಇವೆಂಟ್‌ ಕ್ಯಾಲೆಂಡರ್‌, ವೆಬ್‌ಸೈಟ್‌ ಬಿಡುಗಡೆ

12:03 AM Jul 08, 2024 | Team Udayavani |

ಮಂಗಳೂರು: ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಪ್ರವಾಸಿ ಮಾಹಿತಿ ಇರುವ ನೂತನ ವೆಬ್‌ ಪೋರ್ಟಲ್‌ ಹಾಗೂ “ಇವೆಂಟ್‌ ಕ್ಯಾಲೆಂಡರ್‌’ಗಳನ್ನು ಅನಾವರಣಗೊಳಿಸಲಾಯಿತು.

Advertisement

ಆಯಾ ತಿಂಗಳಲ್ಲಿ ಬರುವ ಜಿಲ್ಲೆಯ ಟೂರಿಸಂ ಆಕರ್ಷಣೆಗಳ, ಜನಪದ, ಸಾಂಸ್ಕೃತಿಕ ಆಚರಣೆ, ಉತ್ಸವಗಳ ಮಾಹಿತಿ ಇರುವ ಇವೆಂಟ್‌ ಕ್ಯಾಲೆಂಡರ್‌ ಬಿಡುಗಡೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮಾತನಾಡಿ, ದಕ್ಷಿಣ ಕನ್ನಡದಲ್ಲಿರುವ ಆಕರ್ಷಣೆಗಳ ಬಗ್ಗೆ ಸ್ಥಳೀಯರೆಲ್ಲರಿಗೂ ಗೊತ್ತಿದೆ. ಇಲ್ಲಿ ಸ್ವತ್ಛತೆ, ಶಿಕ್ಷಣ, ಸೌಂದರ್ಯ ಎಲ್ಲವೂ ಇದೆ. ಎಲ್ಲರೂ ಒಟ್ಟಾಗಿ ಬದುಕುವ “ಕಾಸೊ¾ಪಾಲಿಟನ್‌’ (ವಿಶ್ವಮಿತ್ರ) ಪರಿಕಲ್ಪನೆಗೆ ಇದೊಂದು ಮಾದರಿಯಾಗಿದೆ. ಆದರೆ ಕಾರಣಾಂತರಗಳಿಂದ ಜಿಲ್ಲೆಯ ಪ್ರವಾಸೋದ್ಯಮ ಸಾಮರ್ಥ್ಯ ಪೂರ್ಣವಾಗಿ ಬಳಕೆಯಾಗಿಲ್ಲ. ಈಗ ಬಿಡುಗಡೆಯಾಗಿರುವ ಇವೆಂಟ್‌ ಕ್ಯಾಲೆಂಡರ್‌ ಹಾಗೂ ವೆಬ್‌ಸೈಟ್‌ಗಳು ಜಿಲ್ಲೆಯ ಆಕರ್ಷಣೆಗಳನ್ನು ಸಮರ್ಪಕವಾಗಿ ಹೊರಗಿನ ಜನರಿಗೆ ತಲಪಿಸುವ ವಿಶ್ವಾಸ ಇದೆ ಎಂದು ಹೇಳಿದರು.

ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಜಿಲ್ಲೆಯ ಪ್ರವಾಸೋದ್ಯಮ ಆಕರ್ಷಣೆ ಗಳ ಮಾಹಿತಿ ಇರುವ ವೆಬ್‌ ಪೋರ್ಟ ಲ್‌ ಉದ್ಘಾಟಿಸಿ ಮಾತನಾಡಿ, ಸುಂದರ ಭೂಪ್ರದೇಶ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾದ ಜಿಲ್ಲೆ ನಮ್ಮದು. ಆದರೆಅದನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಜಗತ್ತಿಗೆ ತೋರಿಸುವ ಯತ್ನ ಮಾಡಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ಇದುವರೆಗೆ ವ್ಯವಸ್ಥಿತವಾಗಿ ಇಲ್ಲದ ಪ್ರವಾಸೋದ್ಯಮದ ಆಕರ್ಷಣೆಯ ವಿಷಯಗಳನ್ನು ವ್ಯವಸ್ಥಿತಗೊಳಿಸುವ ಕೆಲಸವಾಗಿದೆ. ಇದರಿಂದಾಗಿ ಯಾವ ಸಮಯದಲ್ಲಿ ಏನೇನು ಇರುತ್ತದೆ ಎಂಬುದು ಹೊರಜಗತ್ತಿಗೆ ಗೊತ್ತಾಗಿ ಪ್ರವಾಸೋದ್ಯಮಕ್ಕೆ ಒತ್ತು ಸಿಗಲಿದೆ ಎಂದು ಹೇಳಿದರು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ, ಪ್ರವಾಸೋದ್ಯಮ ಇಲಾಖೆ ಪ್ರಭಾರ ಉಪನಿರ್ದೇಶಕ ಮಾಣಿಕ್ಯ ಉಪಸ್ಥಿತರಿದ್ದರು.

Advertisement

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಜನ್ಯಾ ಹೆಗ್ಡೆ ನಿರೂಪಿಸಿ, ಗೌರವ್‌ ಹೆಗ್ಡೆ ವಂದಿಸಿದರು.
ವೆಬ್‌ಸೈಟ್‌: //www.visitmangalore.in

Advertisement

Udayavani is now on Telegram. Click here to join our channel and stay updated with the latest news.

Next