Advertisement

ರಸ್ತೆ ಅಭಿವೃದ್ಧಿಯಾದರೂ ಮಳೆ ನೀರು ಮಾರ್ಗದಲ್ಲೇ ಹರಿಯುತ್ತಿದೆ !

11:51 PM Oct 09, 2019 | Team Udayavani |

ಮಹಾನಗರ: ದಿನಕ್ಕೆ ನೂರಾರು ವಾಹನ, ಸಾವಿರಾರು ಜನರು ಓಡಾಡುವ ಮಹಾನಗರ ಪಾಲಿಕೆಯ ಮಿಲಾಗ್ರಿಸ್‌ (47) ವಾರ್ಡ್‌ನಲ್ಲಿ ಮನೆಗಳಿಗಿಂತ ಆಕಾಶದ ಎತ್ತರಕ್ಕೆ ಬೆಳೆದ ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಕೀರ್ಣಗಳೇ ಹೆಚ್ಚು. ವಾರ್ಡ್‌ನಲ್ಲಿ ರಸ್ತೆ ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆಯಾದರೂ ಕೆಲವು ಮೂಲ ಸೌಕಾರ್ಯಗಳನ್ನು ಪಡೆಯುವಲ್ಲಿ ಈ ವಾರ್ಡ್‌ ಹಿಂದುಳಿದಿದೆ.

Advertisement

ಈ ವಾರ್ಡ್‌ ವ್ಯಾಪ್ತಿಯಲ್ಲಿ ಸುಮಾರು 2 ವಿದ್ಯಾಸಂಸ್ಥೆ, ಒಂದು ದೇವಸ್ಥಾನ, ಒಂದು ಚರ್ಚ್‌, ಒಂದು ಮಸೀದಿ, ಒಂದು ಮಾಲ್‌, ಖ್ಯಾತ ಚಿನ್ನಾಭರಣ ಮಳಿಗೆ, 30ಕ್ಕೂ ಅಧಿಕ ಅಪಾರ್ಟ್‌ಮೆಂಟ್‌, ಹಲವು ವಾಣಿಜ್ಯ ಸಂಕೀರ್ಣಗಳಿವೆ.

ಮಳೆಗಾಲದಲ್ಲಿ ಚರಂಡಿ ಸಮಸ್ಯೆ ಯಿಂದಾಗಿ ಮಳೆ ನೀರು ರಸ್ತೆಯಲ್ಲೇ ಹರಿಯುವುದು ಈ ವಾರ್ಡ್‌ನ ಬಹುಮುಖ್ಯ ಸಮಸ್ಯೆ. ವಾರ್ಡ್‌ನ ಬಹುತೇಕ ರಸ್ತೆಗಳಿಗೆ ಕಾಂಕ್ರೀಟ್‌ ಕಾಮಗಾರಿ, ಡಾಮರು ಕಾಮಗಾರಿ ನಡೆಸಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಬಹುತೇಕ ಭಾಗಗಳಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಪರಿಣಾಮ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಇದರಿಂದ ಈ ವಾರ್ಡ್‌ನ ಜನರು ಸಹಿತ ಈ ಭಾಗದಲ್ಲಿ ನಿತ್ಯ ಓಡಾಡುವ ನೂರಾರು ಜನರು ಸಂಕಷ್ಟ ಅನುಭವಿಸುವಂತಾಗಿದೆ. ಸಾರ್ವಜನಿಕರಿಗೆ ಸಹಕಾರಿಯಾಗಬೇಕು ಎನ್ನುವ ದೃಷ್ಟಿಯಿಂದ ಮಥಾಯಿಸ್‌ ಪಾರ್ಕ್‌ನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದನ್ನು ವಾರ್ಡ್‌ ಜನರು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಚರಂಡಿ, ಫುಟ್‌ಪಾತ್‌, ರಸ್ತೆ ವಿಸ್ತರಣೆ ಬಹುದೊಡ್ಡ ಸಮಸ್ಯೆವಾರ್ಡ್‌ನಲ್ಲಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯ ನೀಡಲಾಗಿದೆಯಾದರೂ ಚರಂಡಿ, ಫುಟ್‌ಪಾತ್‌ ನಿರ್ಮಾಣವಾಗಿಲ್ಲ.

ಸ್ಟರಕ್‌ ರಸ್ತೆ, ರೈಲು ನಿಲ್ದಾಣ ಬದಿ ರಸ್ತೆ, ಅತ್ತಾವರ ಕಾಪಿಲಗುಡ್ಡೆ, ಚಕ್ರಪಾಣಿ ದೇವಸ್ಥಾನದ ಭಾಗಗಳಲ್ಲಿ ಚರಂಡಿ, ಫುಟ್‌ಪಾತ್‌ಗಳ ವ್ಯವಸ್ಥೆ ಸಮರ್ಪಕವಾಗಿ ಮಾಡಿಲ್ಲ. ವಾಹನಗಳ ದಟ್ಟಣೆ ಹೆಚ್ಚಿರುವುದರಿಂದ ಟ್ರಾಫಿಕ್‌ ಸಮಸ್ಯೆ ಮಾಮೂಲಿ.

Advertisement

ಬೇಡಿಕೆ ಈಡೇರಿಲ್ಲ
ಇನ್ನೂ ಈ ವಾರ್ಡ್‌ನ ಕೆಲವು ಭಾಗಗಳಲ್ಲಿ ರಸ್ತೆ ವಿಸ್ತರಿಸುವ ಪ್ರಸ್ತಾವನೆ ಬಹಳ ವರ್ಷಗಳಿಂದ ಇದ್ದು, ಆ ಕೆಲಸವಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಸಮರ್ಪಕವಾಗಿದ್ದರೂ ಭವಿಷ್ಯದ ದೃಷ್ಟಿ ಯಿಂದ ಈ ವಾರ್ಡ್‌ನ ಬಹುತೇಕ ರಸ್ತೆಗಳ ವಿಸ್ತರಣೆಯಾಗಬೇಕಿರುವ ಆವಶ್ಯಕತೆ ಇದೆ.

ಶಾಶ್ವತ ಪರಿಹಾರ ಬೇಕು
ವಾರ್ಡ್‌ನ ಸ್ಟೀವನ್‌ ಅವರು ಹೇಳುವ ಪ್ರಕಾರ, ಐದು ವರ್ಷಗಳಲ್ಲಿ ಕೆಲವಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಆದರೆ ರಸ್ತೆಗಳನ್ನು ಮಾಡುವ ಅವಸರದಲ್ಲಿ ಚರಂಡಿ, ಫುಟ್‌ಪಾತ್‌ಗಳನ್ನು ಕಡೆಗಣಿಸಲಾಗಿದೆ. ಇದರ ಪರಿಣಾಮ ಮಳೆಗಾಲದಲ್ಲಿ ಸರಿ ಯಾಗಿ ತಿಳಿಯುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಬೇಕು ಎನ್ನುತ್ತಾರೆ.

ಪ್ರಮುಖ ಕಾಮಗಾರಿ
– ಬಿ.ವಿ. ರಸ್ತೆ ವಿಸ್ತರಣೆ
– ಎಸ್‌.ಎಲ್‌.ಮಥಾಯಿಸ್‌ ರಸ್ತೆಯಲ್ಲಿ ಫುಟ್‌ಪಾತ್‌, ಚರಂಡಿ ಕಾಮಗಾರಿ
– ಮಥಾಯಿಸ್‌ ಪಾರ್ಕ್‌ ಅಭಿವೃದ್ಧಿ
– ಮಿತ್ತಮೊಗರು ರಸ್ತೆ ಡಾಮರು ಕಾಮಗಾರಿ
– ಕಾಪಿದಗುಡ್ಡೆ ರಸ್ತೆ ಅಭಿವೃದ್ಧಿ

ಸುದಿನ ನೋಟ
ಈ ವಾರ್ಡ್‌ನಲ್ಲಿ ಸಂಚರಿಸಿದಾಗ ರಸ್ತೆಗಳು ಅಭಿವೃದ್ಧಿಗೊಂಡಿರುವುದು ಕಾಣಿಸುತ್ತದೆ. ಆದರೆ ಮಳೆ ನೀರು ಹರಿಯಲು ಅಗತ್ಯ ಚರಂಡಿ, ಫುಟ್‌ಪಾತ್‌ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ವಾಹನ ದಟ್ಟಣೆ ಹೆಚ್ಚಿರುವುದರಿಂದ ಟ್ರಾಫಿಕ್‌ ಸಮಸ್ಯೆಗಳಿಂದ ಜನರು ಎದುರಿಸುವ ಸಂಕಷ್ಟಗಳಿಗೆ ಶೀಘ್ರ ಮುಕ್ತಿ ದೊರಕಬೇಕಿದೆ.

ಮಿಲಾಗ್ರೀಸ್‌ ವಾರ್ಡ್‌
ವಾರ್ಡ್‌ನ ಭೌಗೋಳಿಕ ವ್ಯಾಪ್ತಿ: ಸ್ಟರಕ್‌ ರಸ್ತೆ, ಫಳ್ನೀರ್‌, ಅತ್ತಾವರ ಶಾಲೆ, ಕೆಎಂಸಿ ಮುಂಭಾಗ, ವೆಲೆನ್ಸಿಯಾ, ರೋಶನಿ ನಿಲಯ ಮುಂಭಾಗ, ಕಂಕನಾಡಿ, ಫಾದರ್‌ ಮುಲ್ಲರ್‌ ಆಸ್ಪತ್ರೆ ಮುಂಭಾಗ, ಹೈಲಾಂಡ್‌ ಆಗಿ ಮತ್ತೆ ಸ್ಟರಕ್‌ ರಸ್ತೆ ಸಂಪರ್ಕಿಸುವಷ್ಟು ವ್ಯಾಪ್ತಿಯನ್ನು ಇದು ಹೊಂದಿದೆ.

ರಸ್ತೆಗಳ ಅಭಿವೃದ್ಧಿಗೆ ಪ್ರಾಮುಖ್ಯ
ಮಿಲಾಗ್ರಿಸ್‌ ವಾರ್ಡ್‌ ನಗರದ ಮುಖ್ಯ ಪ್ರದೇಶಗಳಲ್ಲಿ ಇರುವುದರಿಂದ ರಸ್ತೆ, ಚರಂಡಿಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗಿದೆ. ಬಹುತೇಕ ರಸ್ತೆ ಅಭಿವೃದ್ಧಿಯಾಗಿದೆ. ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಲಾಗಿದೆ. ಮಥಾಯಿಸ್‌ ಪಾರ್ಕ್‌ನ್ನು ಅಭಿವೃದ್ಧಿ ಪಡಿಸಲಾಗಿದ್ದು,
– ಅಬ್ದುಲ್‌ ರವೂಫ್‌

-ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next