Advertisement

ಜಲ್ಲಿ ರಾಶಿ ಹಾಕಿದರೂ ಕಾಮಗಾರಿ ಆರಂಭವಿಲ್ಲ

12:56 PM Jun 10, 2018 | |

ಸುಳ್ಯ : ನಗರಕ್ಕೆ ಸಂಪರ್ಕ ಕಲ್ಪಿಸುವ ಚೆನ್ನಡ್ಕ-ಕಕ್ಕೆಬೆಟ್ಟು-ಉಬರಡ್ಕ ಸಂಪರ್ಕ ರಸ್ತೆ ಹದಗೆಟ್ಟಿದ್ದು ಸಂಚಾರವಿಲ್ಲಿ ದುಸ್ತರವೆನಿಸಿದೆ. ಎರಡು ಕಿ.ಮೀ ಉದ್ದದ ಈ ರಸ್ತೆ ಕಳೆದ 4 ವರ್ಷದಿಂದ ನಾದುರಸ್ತಿಯಲ್ಲಿದೆ. ಕಳೆದ ಚುನಾವಣೆ ಸಂದರ್ಭ ಈ ರಸ್ತೆಯ ಕಿಲಾರು ಕಜೆ ಬಳಿ ಹಾಕಿದ ಜಲ್ಲಿ ರಾಶಿ ಹಾಕಲಾಗಿತ್ತು. ಈಗಲೂ ಜಲ್ಲಿ ಅಲ್ಲೇ ಇದೆ. ಕಾಮಗಾರಿ ಆರಂಭವಾಗಿಲ್ಲ. ರಸ್ತೆ ಪಾಡು ಕೂಡ ಹಾಗೆಯೇ ಇದೆ. ಮಳೆಗಾಲದ ಕಾರಣ, ಸಂಚಾರವೇ ಇಲ್ಲಿ ಸಂಕಷ್ಟದ ಸಂಗತಿ ಎನಿಸಿದೆ.

Advertisement

ಬಾರೆಗುಂಡಿ, ಭರ್ಜಡಿಗುಂಡಿ, ಕಕ್ಕೆ ಬೆಟ್ಟು ಮೊದಲಾದ ಪ್ರದೇಶದ ಜನರು ಇದೇ ರಸ್ತೆಯಲ್ಲಿ ಓಡಾಟ ನಡೆಸುತ್ತಾರೆ. ಅರ್ಧ ರಸ್ತೆ ಡಾಮರು, ಇನ್ನರ್ದ ಮಣ್ಣಿನ ರಸ್ತೆಯಿದು. ಆದರೆ ಈಗ ಡಾಮರು ಎದ್ದು ಹೋಗಿ ಹೊಂಡ ಗುಂಡಿ ಸೃಷ್ಟಿಯಾಗಿದೆ. ದೊಡ್ಡತೋಟ, ಮರ್ಕಂಜ ಮೊದಲಾದ ಭಾಗದಿಂದ ಬರುವ ವಾಹನಗಳು ಪೇಟೆಗೆ ಈ ರಸ್ತೆ ಬಳಸುವುದುಂಟು. ಮುಖ್ಯ ರಸ್ತೆಯಿಂದ 10 ನಿಮಿಷ ಮೊದಲೇ ಇಲ್ಲಿ ತಲುಪಬಹುದು. ಹಾಗಾಗಿ ಇದು ಸಂಚಾರದ ಸಮಯ ಉಳಿತಾಯದಲ್ಲಿಯು ಅನುಕೂಲ ರಸ್ತೆ. ಹಲವಾರು ವಿದ್ಯಾರ್ಥಿಗಳು ಈ ರಸ್ತೆಯನ್ನೇ ಬಳಸಿದ್ದಾರೆ. ಇಷ್ಟಾದರೂ, ಸಂಪರ್ಕ ರಸ್ತೆಯ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.

ಸಮಸ್ಯೆ ಬಗೆಹರಿಸಿ
ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ದುರಸ್ತಿ ಆಗಿಲ್ಲ. ಈ ಮಳೆಗಾಲದಲ್ಲಂತೂ ಇದರ ಗೋಳು ಹೇಳ ತೀರದು. ಜಲ್ಲಿ ರಾಶಿ ಹಾಕಿದ್ದು, ಕಾಮಗಾರಿ ಆರಂಭವಾಗಿಲ್ಲ.
– ಚಂದ್ರಹಾಸ, ಕಿಲಾರುಕಜೆ
ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next