Advertisement
ಇದು ರಾಜ್ಯದ ಗಡಿ ಭಾಗದ ಪ್ರದೇಶಗಳನ್ನೂ ತನ್ನೊಳಗೆ ಇರಿಸಿಕೊಂಡಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತು ಹಾಕಿದಾಗ ಅರಿವಿಗೆ ಬಂದ ಚುನಾವಣೆಯ ಕಂಪನ.
ಈ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮತ್ತು ಆಗದಿರುವ ಕೆಲಸಗಳು ಹಾಗೂ ಸಮಸ್ಯೆಗಳ ಬಗೆಗೆ ಜನರು ಮಾತನಾಡುತ್ತಾರೆ. ರಾಜ್ಯ ರಾಜಕಾರಣ ಮತ್ತು ರಾಷ್ಟ್ರ ಮಟ್ಟದ ವಿಚಾರಗಳ ಕುರಿತಾಗಿಯೂ ಉಲ್ಲೇಖೀಸಿ ತಾವು ಯಾಕೆ ನಿರ್ದಿಷ್ಟ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಯಾಕೆ ಮತ ನೀಡಬೇಕು ಎಂಬುದನ್ನು ಬೊಟ್ಟು ಮಾಡಿ ತೋರಿಸುತ್ತಾರೆ.
Related Articles
ಸ್ಥಳೀಯ ಸಮಸ್ಯೆಗಳ ಬಗ್ಗೆ ಕ್ಷೇತ್ರದಲ್ಲಿ ಚರ್ಚೆ ಈ ಚುನಾವಣೆಯ ಸಂದರ್ಭವೂ ಚಾಲ್ತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ತೊಕ್ಕೊಟ್ಟು ಮತ್ತು ಪಂಪ್‌ವೆಲ್ ಫ್ಲೆಓವರ್‌ಗಳ ಕಾಮಗಾರಿ ಹತ್ತು ವರ್ಷ ಕಳೆದರೂ ಮುಗಿದಿಲ್ಲ; ಇನ್ನೂ ಹಾಗೆಯೇ ಇದೆ. ಈಗಾಗಲೇ ಹಲವಾರು ಅಪಘಾತಗಳು ನಡೆದು ಸಾವು ನೋವು ಸಂಭವಿಸಿವೆ ಎಂಬ ವಿಚಾರ ಮತದಾರರ ಚರ್ಚೆಯ ಪ್ರಮುಖ ವಸ್ತು. ಏರ್‌ಸ್ಟ್ರೈಕ್, ಪುಲ್ವಾಮಾ ದಾಳಿ, ಅಭಿನಂದನ್ ಬಿಡುಗಡೆ ಪ್ರಕರಣಗಳು ಕೂಡ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಕುತ್ತಾರು ಪ್ರದೇಶದ ಕೆಲವು ಮತದಾರರ ಅಭಿಪ್ರಾಯ. 24 ಗಂಟೆಗಳೊಳಗೆ ಅಭಿ ನಂದನ್ ಅವರನ್ನು ಪಾಕಿಸ್ಥಾನ ಬಿಡುಗಡೆ ಮಾಡುವಂತೆ ಮಾಡಿರು ವುದು ಸಾಧನೆ ಎಂದು ಕೆಲವರು ಬೊಟ್ಟು ಮಾಡಿ ಹೇಳುತ್ತಾರೆ.
Advertisement
“ಊರು ಎಡ್ಡೆ ಆವೊಡು’ಮತದಾನಕ್ಕೆ ಇನ್ನು ಕೆಲವೇ ದಿನ ಗಳಿರುವಾಗ, ವಾತಾವರಣ ಹೇಗಿದೆ ಎಂದು ಉಳ್ಳಾಲದ ರಿಕ್ಷಾ ಚಾಲಕ ಬಸ್ತಿಪಡು³ ನಿವಾಸಿ ನವೀನ್ ಅವರನ್ನು ಮಾತನಾಡಿಸಿದಾಗ “ಏರೇ ಬರಡ್, ಎಂಕ್ಲೆನ ಊರು ಎಡ್ಡೆ ಆವೊಡು’ (ಯಾರೇ ಬಂದರೂ ನಮ್ಮ ಊರು ಉದ್ಧಾರ ಆಗಬೇಕು) ಎಂದಷ್ಟೇ ಹೇಳಿ ಸುಮ್ಮನಾದರು. ತೊಕ್ಕೊಟ್ಟು ಜಂಕ್ಷನ್ ಸಮೀಪ ಚಿಕ್ಕ ಅಂಗಡಿ ಇರಿಸಿಕೊಂಡು ವ್ಯಾಪಾರ ಮಾಡುತ್ತಿರುವ ಲಿಡಿಯಾ ಕುವೆಲ್ಲೊ ಅವರ ಪ್ರತಿಕ್ರಿಯೆಯೂ ಸುಮಾರಾಗಿ ಹೀಗೆಯೇ. “ಯಾರಿಗೆ ಓಟು ಹಾಕಿದರೂ ಅಷ್ಟಕ್ಕಷ್ಟೇ; ಅವರು ಹಣ ಮಾಡಿ ಜೇಬು ತುಂಬಿಸು ತ್ತಾರೆ. ನಾವು ಕಷ್ಟ ಪಟ್ಟು ದುಡಿದೇ ತಿನ್ನಬೇಕು. ಪಾಪದವನು ಹೋಗಿ ತನ್ನ ಕಷ್ಟವನ್ನು ಹೇಳಿಕೊಂಡರೆ ಯಾರೂ ಸಹಾಯಕ್ಕೆ ಬರುವುದಿಲ್ಲ.’ ಇಷ್ಟು ಹೇಳಿಯೂ “ನಾಡಿದ್ದು ಓಟು ಹಾಕಿಯೇ ಹಾಕುತ್ತೇನೆ’ ಎನ್ನಲವರು ಮರೆಯುವುದಿಲ್ಲ. ಅಷ್ಟರಲ್ಲಿ ಪಕ್ಕದಲ್ಲಿರುವ ಇನ್ನೋರ್ವ ಮಹಿಳೆ, “ಶ್ರೀಮಂತರು ತೆರಿಗೆ ಪಾವತಿಸದಿದ್ದರೂ ನಡೆಯುತ್ತದೆ; ಅವರನ್ನು ಕೇಳುವುದಿಲ್ಲ. ನಮ್ಮಂತಹ ಮಧ್ಯಮ ವರ್ಗದವರು ಚಿಲ್ಲರೆ ಮೊತ್ತದ ತೆರಿಗೆ ಬಾಕಿ ಇರಿಸಿದರೂ ಕೇಳುತ್ತಾರೆ. ಸಚಿವರ ಪುತ್ರ -ಪುತ್ರಿಯರ ಮದುವೆಗೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ಅದನ್ನು ಯಾರೂ ವಿಚಾರಿಸುವುದಿಲ್ಲ’ ಎಂಬ ಬೇರೊಂದು ಆಯಾಮದ ಆರೋಪ ಮಾಡಿದರು. ಎದುರಿನ ಅಂಗಡಿಯ ನಿಝಾಮ್, “ಈಗ ಓಟು ವ್ಯಾಪಾರವಾಗಿದೆ. ಜನರ ಮತದಿಂದ ಗೆದ್ದು ಬರುವವರು ಜನರಿಗೆ ಬೇಕಾದ್ದನ್ನು ಕೊಡಬೇಕಿತ್ತು; ಸಮಸ್ಯೆಗಳನ್ನು ಆಲಿಸಬೇಕಿತ್ತು. ಆದರೆ ಅದು ಮಾಡುತ್ತಿಲ್ಲ. ಚುನಾವಣೆ ಬಂದಾಗ ಬರುತ್ತಾರೆ; ಬಳಿಕ ಇತ್ತ ನೋಡುವುದಿಲ್ಲ’ ಎಂದರು. “ನಮಗೆ ಬದಲಾವಣೆ ಬೇಕು; ಈ ಬಾರಿ ಬದಲಾವಣೆ ಬರುತ್ತದೆ ಎಂಬುದು ನನ್ನ ಭಾವನೆ. ಯುವಜನರ ಪ್ರಮುಖ ಸಮಸ್ಯೆ ನಿರುದ್ಯೋಗ. ಅದು ನಿವಾರಣೆ ಆಗಬೇಕು. ತೊಕ್ಕೊಟ್ಟು ಮತ್ತು ಪಂಪ್‌ವೆಲ್ ಫ್ಲೆ$çಓವರ್‌ಗಳ ಕಾಮಗಾರಿ ಹತ್ತು ವರ್ಷ ಕಳೆದರೂ ಮುಗಿದಿಲ್ಲ. ಆದಷ್ಟು ಬೇಗ ಅದಕ್ಕೆ ಮುಕ್ತಿ ಸಿಗಬೇಕು’ ಎಂದರು ಉಳ್ಳಾಲದ ನವ ಮತದಾರ ಶಾಯಿದ್ ಅಫ್ರಿದ್. ಒಟ್ಟಾರೆ ಈ ಕ್ಷೇತ್ರದಲ್ಲಿ ಮತದಾರರಿಗೆ ಕ್ಷೇತ್ರದಲ್ಲಿ ಏನೆಲ್ಲ ಅಭಿವೃದ್ಧಿ ಕೆಲಸಗಳು ಆಗಿವೆ; ಯಾರು ಚುನಾವಣೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳು ಎಂಬ ಅರಿವಿರುವುದಷ್ಟೇ ಅಲ್ಲದೆ, ಮತದಾನದ ದಿನ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕು ಎನ್ನುವ ಬಗ್ಗೆ ಸ್ಪಷ್ಟ ಅರಿವು ಹಾಗೂ ಜಾಗೃತಿ ಮೂಡಿರುವುದು ಕಂಡುಬಂತು. ಅಬ್ಬರದ ಪ್ರಚಾರ ಇಲ್ಲ
ಚುನಾವಣೆಯ ಅಬ್ಬರದ ಪ್ರಚಾರ ಕ್ಷೇತ್ರದ ಎಲ್ಲೂ ಕಂಡು ಬರುತ್ತಿಲ್ಲ. ಕೆಲವು ದಿನಗಳ ಹಿಂದೆ ಮುಡಿಪುವಿನಲ್ಲಿ ಬಿಜೆಪಿ ಸಾರ್ವಜನಿಕ ಸಭೆ ನಡೆಸಿರುವುನ್ನು ಬಿಟ್ಟರೆ ಬೇರೆ ಹೇಳಿಕೊಳ್ಳುವಂತಹ ಯಾವುದೇ ದೊಡ್ಡ ಮಟ್ಟದ ಸಭೆ ನಡೆದಿಲ್ಲ. ಪ್ರಮುಖ ಸ್ಪರ್ಧಿಗಳಾದ ನಳಿನ್ ಮತ್ತು ಮಿಥುನ್ ರೈ ಬಗ್ಗೆ ಅಲ್ಲೊಬ್ಬರು ಇಲ್ಲೊಬ್ಬರು ಚರ್ಚಿಸುತ್ತಾರೆ. ನಳಿನ್ ಪರಿಚಿತರು ಮತ್ತು ಮಿಥುನ್ ರೈ ಹೊಸ ಮುಖ ಆಗಿದ್ದರೂ ಅವರಿಗೆ ರಾಜಕೀಯ ಹಿನ್ನೆಲೆ ಇದೆ ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿರುವುದು ಗಮನಕ್ಕೆ ಬಂತು. – ಹಿಲರಿ ಕ್ರಾಸ್ತಾ