Advertisement

ಬೆಳಕಿನ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ ಸಹ ವಾಸ

10:43 PM Oct 28, 2019 | mahesh |

ಉದಯವಾಣಿಯು ಅಪಾರ್ಟ್‌ಮೆಂಟ್‌ಗಳೆಂಬ ಕಿರುಜಗತ್ತಿನಲ್ಲಿ ನಡೆಯುವ ಸಂಭ್ರಮಾಚರಣೆಗಳನ್ನು ಜನರಿಗೆ ತಿಳಿಸಲೆಂದೇ ಈ ದೀಪಾವಳಿಗೆ ಪರಿಚಯಿಸಿದ್ದು “ಸಹ ವಾಸ-ಸಮ್ಮಿಲನ ದೀಪಾವಳಿ’. ಆಪಾರ್ಟ್‌ ಮೆಂಟ್‌ಗಳಲ್ಲಿನ ಸಹ ವಾಸಿಗಳ ಅರ್ಥಪೂರ್ಣ ದೀಪಾವಳಿ ಆಚರಣೆಗೆ ನಾವು ವೇದಿಕೆಯಾಗಿದ್ದೇವೆ. ಮಂಗಳೂರು ನಗರದ ಹಲವು ವಸತಿ ಸಮುತ್ಛಯಗಳಲ್ಲಿ ಸಹ ವಾಸಿಗಳು ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಅದರ ಸಣ್ಣದೊಂದು ಟಿಪ್ಪಣಿ ಇಲ್ಲಿ ನೀಡಿದ್ದೇವೆ. ಇನ್ನೂ ಎರಡು ದಿನ ದೀಪಾವಳಿ ಹಬ್ಬ ಆಚರಿಸಲಾಗುತ್ತಿದ್ದು, ನಿಮ್ಮ ಅಪಾರ್ಟ್‌ಮೆಂಟ್‌ಗಳಲ್ಲಿ ಸಾಮೂಹಿಕ ಆಚರಣೆ ನಡೆಸಿದ್ದರೆ ದಯವಿಟ್ಟು ಫೋಟೋಗಳು, ಪುಟ್ಟ ವಿವರವನ್ನು 80951 92817 ಗೆ ಕಳಿಸಿ. ಸೂಕ್ತವಾದವುಗಳನ್ನು ಪ್ರಕಟಿಸುತ್ತೇವೆ.

Advertisement

ಮೊದಲ ದೀಪಾವಳಿಯ ಸಂಭ್ರಮ
ಕುಲಶೇಖರದ ಗಾರ್ಡಿಯನ್‌

ಕುಲಶೇಖರದ ಗಾರ್ಡಿಯನ್‌ ಜೀಯೋ ವನ್ನಿ ಗೃಹ ಸಮುತ್ಛಯದಲ್ಲಿ ದೀಪಾವಳಿ ಆಚ ರಿಸಿದ್ದು ಎಲ್ಲ ಧರ್ಮದವರೊಂದಿಗೆ. ಅದೇ ಅಲ್ಲಿನ ವಿಶೇಷ. ವರ್ಷದ ಹಿಂದೆಯಷ್ಟೇ ನಿರ್ಮಾಣಗೊಂಡ ಅಪಾರ್ಟ್‌ಮೆಂಟ್‌ನ ಸಹ ವಾಸಿಗಳಿಗೆ ಇದು ಮೊದಲ ದೀಪಾವಳಿ.

ಅಲ್ಲಿನ ಸಹ ನಿವಾಸಿ ಅಶ್ವಿ‌ನಿ ಪತ್ರಿಕೆಯೊಂದಿಗೆ ಮಾತನಾಡಿ, ವರ್ಷದ ಹಿಂದೆಯಷ್ಟೇ ಉದ್ಘಾಟನೆಗೊಂಡ ಅಪಾರ್ಟ್‌ಮೆಂಟ್‌ಗೆ ಅಸೋಸಿಯೇಶನ್‌ ಇನ್ನೂ ಮಾಡಿಲ್ಲ. ಆದರೂ ಹಬ್ಬಕ್ಕಾಗಿ ಎಲ್ಲರೂ ಒಟ್ಟಾಗಿದ್ದೇವೆ. ಇಲ್ಲಿ ಕ್ರೈಸ್ತ ಬಾಂಧವರು ಹಾಗೂ ಇತರ ಧಮೀಯರೂ ಇದ್ದಾರೆ. ಅವರು ನಮ್ಮೊಂದಿಗೆ ಸಂಭ್ರಮದಿಂದ ಹಬ್ಬದಲ್ಲಿ ತೊಡಗಿದರು. ಇದು ನಮ್ಮಲ್ಲಿ ಆಯೋಜಿಸಿದ ಮೊದಲ ಹಬ್ಬ. ಮುಂದಿನ ಕ್ರಿಸ್‌ಮಸ್‌ ಹಬ್ಬ ವನ್ನು ಹೀಗೆಯೇ ಆಚರಿಸಲು ತೀರ್ಮಾನಿಸಿದ್ದೇವೆ ಎನ್ನುತ್ತಾರೆ.

ದೀಪಾವಳಿ ಹಬ್ಬದ ಮೂಲಕ ನಾವೆಲ್ಲಾ ಒಟ್ಟಾಗಿರುವುದು ವಿಶೇಷ. ಬೆಳಗ್ಗೆ ಎಲ್ಲರೂ ಒಟ್ಟಾಗಿ ರಂಗೋಲಿ ಹಾಕಿ, ಸಂಜೆ ವೇಳೆಗೆ ಹಣತೆ ಹಚ್ಚಲಾಯಿತು. ರಾತ್ರಿ ಅಪಾರ್ಟ್‌ಮೆಂಟ್‌ನ ಎಲ್ಲಾ ವಯೋಮಾನದವರಿಗೆ ವಿವಿಧ ಆಟಗಳನ್ನು ಏರ್ಪಡಿಸಲಾಯಿತು. ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಎಲ್ಲರೂ ಸಹ ಭೋಜನ ಮಾಡಿದೆವು ಎಂದು ಹೇಳುತ್ತಾರೆ ಅಶ್ವಿ‌ನಿ. ಹಬ್ಬದ ಬೆಳಕು ಎಲ್ಲರನ್ನೂ ಮುನ್ನಡೆಸಲಿ ಎಂಬುದೇ ಎಲ್ಲರ ಹಾರೈಕೆ.

Advertisement

ಅಪಾರ್ಟ್‌ಮೆಂಟ್‌ನ ನಾವು ಜತೆಯಾಗಿ ದೀಪಾವಳಿ ಆಚರಿಸಿ ದೆವು. ನಮ್ಮ ಬ್ಯುಸಿ ಬದುಕಿನಲ್ಲಿ ಈ ಹಬ್ಬದ ಮೂಲಕ ನೆರೆ ಮನೆಯವರು ಕುಟುಂಬ ಸದಸ್ಯರಂತೆ ಒಟ್ಟಾಗಿದ್ದು ಖುಷಿ ತಂದಿದೆ ಎಂದು ಹೇಳುತ್ತಾರೆ ಕದ್ರಿ ಸಬೀನಾ ಅಪಾರ್ಟ್‌ಮೆಂಟ್‌ ನಿವಾಸಿ ಸುಜಾತ ಶೆಟ್ಟಿ.

ಬೆಳಗ್ಗೆ ಮನೆಯಲ್ಲೇ ಪೂಜೆಗಳನ್ನು ಮಾಡಿ ಬಳಿಕ ರಂಗೋಲಿ, ದೀಪ ಹಚ್ಚಿ ಸಿಹಿಹಂಚಿ ಸಂಭ್ರಮಿಸಿದೆವು. ಇದು ಮೊದಲ ಬಾರಿಗೆ ಹಬ್ಬ ವನ್ನು ನೆರೆ ಮನೆಯವರೊಂದಿಗೆ ಆಚರಿಸಿದ್ದೇವೆ. ಮುಂದಿನ ಬಾರಿ ಇನ್ನಷ್ಟು ಜನರನ್ನು ಸೇರಿಸಿ ಇನ್ನೂ ಸಂಭ್ರಮವನ್ನು ತುಂಬಿಕೊಳ್ಳುತ್ತೇವೆ ಎಂಬುದು ಅವರ ಅಭಿಪ್ರಾಯ.

ಒಟ್ಟಾಗಿ ಹಬ್ಬವನ್ನು ಆಚರಿಸುವುದರಿಂದ ನಮ್ಮ ಸಂಸ್ಕೃತಿಯ ಅನಾ ವರಣವಾಗುತ್ತದೆ. ಅದರೊಂದಿಗೆ ಮಕ್ಕಳಿಗೆ ನಮ್ಮ ಹಬ್ಬದ ಹಿನ್ನಲೆ, ಆಚರಣೆಯನ್ನು ತಿಳಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಬ್ಬದ
ದಿನ ಮನೆ ಮಕ್ಕಳ ಖುಷಿ ನೋಡಿ ನಮಗೆ ತುಂಬಾ ಸಂತೋಷವಾಯಿತು. ಮುಂದೆ ಇದನ್ನು ಮುಂದುವರಿಸುತ್ತೇವೆ ಎನ್ನುತ್ತಾರೆ ಅವರು.

ಮಣ್ಣಗುಡ್ಡೆ ನಿಧಿಲ್ಯಾಂಡ್‌ ವೃಂದಾವನ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯರು ಜತೆಸೇರಿ ಯೋಜನೆ ರೂಪಿಸಿ ಹಬ್ಬ ಆಚರಿಸಿದ್ದಾರೆ. ಅಪಾರ್ಟ್‌ಮೆಂಟ್‌ನ ಭಾಗಶಃ ಮಂದಿ ಹೊರ ದೇಶದಲ್ಲಿದ್ದು, ಇಲ್ಲಿರುವ 40 ಫ್ಲಾಟ್‌ಗಳ ನಿವಾಸಿಗಳು ಒಟ್ಟಾಗಿ ದೀಪಾವಳಿ ಆಚರಿಸಿದ್ದಾರೆ. ಇದಕ್ಕಾಗಿ ಫ್ಲಾಟ್‌ನ ಎಲ್ಲಾ ಮಹಿಳೆಯರು ಸೇರಿ ಮಾಡಿದ ವಾಟ್ಸ್‌ಪ್‌ ಗ್ರೂಪ್‌ನಲ್ಲೇ ಯೋಜನೆ ಚರ್ಚೆ ಮತ್ತು ನಿರ್ಧಾರ.

ವಿದೇಶದಲ್ಲಿದ್ದ ಫ್ಲಾಟ್‌ ಮಾಲಕರೂ ಹಬ್ಬದಲ್ಲಿ ಭಾಗವಹಿಸಲು ಸಾಧ್ಯವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ. ಹಾಗೂ ಹಬ್ಬವನ್ನು ಸುಂದರವಾಗಿ ಆಚರಿಸಲು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ಹೇಳುತ್ತಾರೆ ಅಪಾರ್ಟ್‌ಮೆಂಟ್‌ನ ರೇಷ್ಮಾ ಶೆಟ್ಟಿ.

ಅಪಾರ್ಟ್‌ಮೆಂಟ್‌ನ ತುಂಬಾ ದೀಪ ಹಚ್ಚಿ, ಪ್ರವೇಶದ್ವಾರವನ್ನು ಸುಂದರವಾಗಿ ಅಲಂಕರಿಸಿ ಹಬ್ಬವನ್ನು ಆಚರಿಸಿದೆವು. ಸಂಪ್ರದಾಯ ಬದ್ಧವಾಗಿ ಹಬ್ಬ ಆಚರಣೆ ಮಾಡುವುದರೊಂದಿಗೆ ಮಕ್ಕಳು ಜತೆಯಾಗಿ ಸಂಭ್ರಮಿಸುವುದನ್ನು ನೋಡುವುದೇ ಖುಷಿ. ಮುಂದೆ ಹೊಸ ಪರಿಕಲ್ಪನೆಯೊಂದಿಗೆ ಹಬ್ಬವನ್ನು ಆಚರಿಸುವ ಬಗ್ಗೆ ಎಲ್ಲರೂ ನಿರ್ಧರಿಸಿದ್ದೇವೆ.ಉದಯವಾಣಿಯ ಸಹ ವಾಸ ದೀಪಾವಳಿ ಪರಿಕಲ್ಪನೆಯೂ ಇಷ್ಟವಾಯಿತು
ಎನ್ನುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next