Advertisement
ತುಮಕೂರಿನಲ್ಲಿ ಮಾತನಾಡಿ, ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ತಪ್ಪು ಎಂದು ನಾನು ಹೇಳಿಲ್ಲ. ಹೇಳುವುದೂ ಇಲ್ಲ. ಆದರೆ ಗ್ಯಾರಂಟಿಯಿಂದಾಗಿ ಸರಕಾರ ನಡೆಸಲಾಗದ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ವಾಲ್ಮೀಕಿ ಹಗರಣದಂತಹ ಹಗರಣಗಳಿಂದಾಗಿ ಖಜಾನೆಯ ಹಣ ಲೂಟಿಯಾಗುತ್ತಿದೆ ಎಂದರು.
ಕಂಪೆನಿಯಲ್ಲಿ ಎಚ್‌ಡಿಕೆ ಸಭೆ
ಬೆಂಗಳೂರು: ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮಂಗಳವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಬೆಂಗಳೂರಿನಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ ಅಧಿಕಾರಿಗಳ ಸಭೆ ನಡೆಸಲಿದ್ದು, ಸಂಜೆ ಪ್ರಧಾನಿ ನರೇಂದ್ರ ಮೋದಿ ನಡೆಸಲಿರುವ ಪಿಎಂ-ಕಿಸಾನ್ ವರ್ಚುವಲ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕುಮಾರಸ್ವಾಮಿ ಅವರು ಮೊದಲಿಗೆ ಕುದುರೆಮುಖ ಅದಿರು ಕಂಪೆನಿಗೆ ಸಂಬಂಧಿಸಿದ ಕಡತಕ್ಕೇ ಸಹಿ ಹಾಕಿದ್ದರು.