Advertisement
ದಾಳಿಯ ವೇಳೆ ನಿಂದನೆ, ಅಪಮಾನ ಸಾಮಾನ್ಯವಾದರೂ ಅವುಗಳನ್ನು ಸಹಿಸಿಕೊಂಡು ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಮಾರ್ಷಲ್ ಗಳದ್ದಾಗಿದೆ. ಆದರೆ ಕೆಲವು ದಾಳಿ ಸಂದರ್ಭಗಳಲ್ಲಿ ಪ್ರಾಣ ಬೆದರಿಕೆ ಎದುರಿಸಿದ್ದು ಇದೆ. ಕೆಲವು ಸಲ ಕಿರಾಣಿ ಅಂಗಡಿ ಮತ್ತು ಹೋಟೆಲ್, ತರಕಾರಿ, ಮಾಂಸದ ಅಂಗಡಿಗಳ ಮೇಲೆ ಮಾರ್ಷಲ್‌ಗಳು ದಾಳಿ ನಡೆಸಿದಾಗ ದೊಡ್ಡ ಮೊತ್ತದ ದಂಡ ವಿಧಿಸಲು ಮುಂದಾಗುತ್ತಾರೆ. ಆದರೆ, ಕೆಲವು ಸಲ ಸ್ಥಳೀಯ ರಾಜಕೀಯ ಮುಖಂಡರು ಮಾರಾಟಗಾರರ ನೆರವಿಗೆ ಬರುವ ಹಿನ್ನೆಲೆಯಲ್ಲಿ ಸಣ್ಣ ಮೊತ್ತದ ದಂಡಕ್ಕೂ ಕಾರಣವಾಗುತ್ತದೆ.
Related Articles
Advertisement
ಈ ಹಿಂದೆ ಕೆ.ಆರ್.ಮಾರುಕಟ್ಟೆ ಪ್ರದೇಶ, ಕಲಾಸಿ ಪಾಳ್ಯ, ಚಿಕ್ಕಪೇಟೆ, ಬಿನ್ನಿಪೇಟೆ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಅವ್ಯಹತವಾಗಿತ್ತು. ಆದರೆ, ಈಗ ಅದು ನಿಯಂತ್ರಣಕ್ಕೆ ಬಂದಿದೆ. ಪ್ಲಾಸ್ಟಿಕ್‌ಗೆ ಪರ್ಯಾಯ ವಾಗಿ ಪೇಪರ್ ಬ್ಯಾಗ್ ಇದ್ದರೂ ಅದನ್ನು ಎಲ್ಲಾ ವಸ್ತುಗಳಿಗೂ ಬಳಸಲು ಆಗಲ್ಲ. ಹೀಗಾಗಿ ಜನರಿಗೆ ಸಮಜಾಯಿಷಿ ನೀಡುವುದೇ ಒಂದು ಸವಾಲಾ ಗಿದೆ ಎಂದು ಮಾರ್ಷಲ್‌ಗಳು ಹೇಳುತ್ತಾರೆ.
ಬೆಂಗಳೂರಿನಲ್ಲಿ 400 ಟನ್ ತ್ಯಾಜ್ಯ ಶೇಖರಣೆ: ಬೆಂಗಳೂರಿನಲ್ಲಿ ವಾರ್ಷಿಕವಾಗಿ 4000 ಟನ್ ನಷ್ಟು ತ್ಯಾಜ್ಯ ಶೇಖರಣೆ ಆಗುತ್ತಿದೆ. ಅದರಲ್ಲಿ ಬಹುತೇಕ ಪ್ಲಾಸ್ಟಿಕ್ ತ್ಯಾಜ್ಯಗಳು ಆಗಿವೆ. ನಗರದಲ್ಲಿ ನಿತ್ಯ ನಡೆಯುವ ವಿವಿಧ ಸಮಾರಂಭಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಹೆಚ್ಚು ಬಳಕೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಕಲ್ಯಾಣಮಂಟಪ/ ಪಾರ್ಟಿಹಾಲ್ / ಕ್ಯಾಟ ರಿಂಗ್ ಉದ್ದಿಮೆಗಳ ಮಾಲೀಕರಿಗೆ ಬಿಬಿಎಂಪಿ ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಅದರ ಬದಲಾಗಿ ಅಡಕೆ ಪಟ್ಟೆ, ಬಾಳೆ ಎಲೆ, ಮರು ಬಳಸಬಹುದಾದಂತಹ ವಸ್ತುಗಳನ್ನು ಬಳಕೆ ಮಾಡುವಂತೆ ಮನವಿ ಮಾಡಿದ್ದಾರೆ.
ನಗರದ ಪ್ರತಿ ವಾರ್ಡ್‌ನಲ್ಲೂ ಮಾರ್ಷಲ್‌ಗಳಿದ್ದು, ಪಾಸ್ಟಿಕ್ ಬಳಕೆ ಮೇಲೆ ಹದ್ದಿನ ಕಣ್ಣೀರಿಸಿದ್ದಾರೆ. ಹೀಗಾಗಿ ಮಾರುಕಟ್ಟೆ ಮತ್ತಿತರ ಕಡೆ ಏಕ ಬಳಕೆ ಪ್ಲಾಸ್ಟಿಕ್‌ಗೆ ಕಡಿವಾಣ ಬಿದ್ದಿದೆ. ●ಹೆಸರು ಹೇಳು ಇಚ್ಛಿಸದ ಹಿರಿಯ ಮಾರ್ಷಲ್
–ದೇವೇಶ ಸೂರಗುಪ್ಪ