Advertisement
ಇತ್ತೀಚೆಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಉಮಾಶ್ರೀಯವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಹಿಂಗಾರು ಹಂಗಾಮಿಗೆ ಕಾಲುವೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ, ಮಾರ್ಚ್ 24ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಇದನ್ನು ನಂಬಿದ ರೈತರು ಅಲ್ಲಿವರೆಗೆ ಫಸಲಿಗೆ ಬರುವ ಬೆಳೆಗಳನ್ನು ಬಿತ್ತಿದ್ದಾರಲ್ಲದೇ ಈ ಭಾಗದಲ್ಲಿ ಉಳ್ಳಾಗಡ್ಡಿಯನ್ನು ಹೆಚ್ಚು ರೈತರು ಹಚ್ಚಿದ್ದಾರೆ.
ಪ್ರಗತಿಪರ ರೈತ ಶಾಂತಪ್ಪ ಮನಗೂಳಿ. ನೀರಾವರಿ ಪ್ರದೇಶ: ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯದಿಂದ ಒಟ್ಟು 1,33,300 ಹೆಕ್ಟೇರ್ ಪ್ರದೇಶ ನೀರಾವರಿಗೊಳಪಡಲಿದೆ. ಅದರಲ್ಲಿ 83 ಕಿ.ಮೀ. ಉದ್ದದ ಆಲಮಟ್ಟಿ ಎಡದಂಡೆ ಕಾಲುವೆಯ 40 ವಿತರಣಾ ಕಾಲುವೆಗಳಿಂದ ಸುರಪುರ, ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕಿನ 20,235 ಹೆ. ಪ್ರದೇಶ, 62 ಕಿ.ಮೀ. ಉದ್ದದ ಆಲಮಟ್ಟಿ ಬಲದಂಡೆ ಕಾಲುವೆಯ 32 ವಿತರಣಾ ಕಾಲುವೆಗಳಿಂದ ಹುನಗುಂದ ಹಾಗೂ ಬಾಗಲಕೋಟೆ ತಾಲೂಕಿನ 9,900 ಹೆ. ಪ್ರದೇಶ, ತಿಮ್ಮಾಪುರ ಏತ ನೀರಾವರಿ ಯೋಜನೆಯ ಡಿಸಿ-1ರ 52 ಕಿ.ಮೀ. ಉದ್ದದ ಕಾಲುವೆಯ 26 ವಿತರಣಾ ಕಾಲುವೆಗಳಿಂದ 12,400 ಹೆ. ಪ್ರದೇಶ, ತಿಮ್ಮಾಪುರ ಏತ ನೀರಾವರಿ ಯೋಜನೆಯ ಡಿಸಿ-2ರ 33 ಕಿ.ಮೀ. ಉದ್ದ ಕಾಲುವೆಯ 18 ವಿತರಣಾ ಕಾಲುವೆಯಿಂದ ಬಾಗಲಕೋಟೆ ತಾಲೂಕಿನ 4 ಸಾವಿರ ಹೆಕ್ಟೇರ್ ಪ್ರದೇಶ, ಮುಳವಾಡ ಏತ ನೀರಾವರಿ ಯೋಜನೆಯ 17 ಕಿ.ಮೀ. ಉದ್ದದ ಪೂರ್ವ ಕಾಲುವೆಯ 7 ವಿತರಣಾ ಕಾಲುವೆಗಳಿಂದ ಬ.ಬಾಗೇವಾಡಿ ತಾಲೂಕಿನ 6 ಸಾವಿರ ಹೆ. ಪ್ರದೇಶ, 78 ಕಿ.ಮೀ. ಉದ್ದದ ಪಶ್ಚಿಮ ಕಾಲುವೆಯ 43 ವಿತರಣಾ ಕಾಲುವೆಯಿಂದ ಬ.ಬಾಗೇವಾಡಿ, ವಿಜಯಪುರ ಹಾಗೂ ಜಮಖಂಡಿ ತಾಲೂಕಿನ 16 ಸಾವಿರ ಹೆ. ಪ್ರದೇಶ, ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಯು 54 ಕಿ.ಮೀ. ಉದ್ದದ 24 ವಿತರಣಾ ಕಾಲುವೆಯಿಂದ ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕಿನ 5 ಸಾವಿರ ಹೆ.ಪ್ರ. ಮತ್ತು 3 ಕೆರೆಗಳನ್ನು ತುಂಬಿಸಲಾಗಿದೆ.
Related Articles
Advertisement
ರಾಮಥಾಳ ಏತ ನೀರಾವರಿ ಯೋಜನೆಯ 51 ಕಿ.ಮೀ. ಉದ್ದದ ಪೂರ್ವ ಕಾಲುವೆಯ 20 ವಿತರಣಾ ಕಾಲುವೆ ಜಾಲದಿಂದ 6 ಸಾವಿರ ಹೆ.ಪ್ರ, 62 ಕಿ.ಮೀ. ಉದ್ದದ ಪಶ್ಚಿಮ ಕಾಲುವೆಯ 24 ವಿತರಣಾ ಕಾಲುವೆಗಳ ಮೂಲಕ 6,900 ಹೆ.ಪ್ರ, ಇನ್ನೂ ಹನಿ ನೀರಾವರಿ ಯೋಜನೆಯ ಪೂರ್ವ ಕಾಲುವೆಯಿಂದ 12,300 ಹೆ.ಪ್ರ, ಪಶ್ಚಿಮ ಕಾಲುವೆ ಮೂಲಕ 11,700 ಹೆ. ಪ್ರದೇಶ ಹುನಗುಂದ ತಾಲೂಕಿನಲ್ಲಿ ನೀರಾವರಿಗೆ ಒಳಪಡುತ್ತಿದೆ ಎಂದು ಕೆಬಿಜೆಎನ್‌ಎಲ್ ತಿಳಿಸಿದೆ.
ಶಂಕರ ಜಲ್ಲಿ