Advertisement

ಆಹಾರ ಧಾನ್ಯಗಳನ್ನು ಕೋಳಿಯೂ ತಿನ್ನದು: ಲಕ್ಷ್ಮೀ ಹೆಬ್ಟಾಳ್ಕರ್‌ 

10:50 PM Jul 14, 2023 | Team Udayavani |

ಬೆಂಗಳೂರು: ಅಂಗನವಾಡಿ ಗಳಲ್ಲಿ ಪೂರೈಸುತ್ತಿರುವ ಆಹಾರ ಧಾನ್ಯ ಗಳು ಕೋಳಿಯೂ ತಿನ್ನದಷ್ಟು ಕಳಪೆ ಗುಣಮಟ್ಟದಲ್ಲಿವೆ. ಇಂತಹ ಆಹಾರ ಧಾನ್ಯಗಳನ್ನು ಪೂರೈಸುತ್ತಿರುವವರಿಗೆ ನೋಟಿಸ್‌ ನೀಡಲಾ ಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಹೇಳಿದ್ದಾರೆ.

Advertisement

ಎಂ. ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಪೂರೈಸುತ್ತಿರುವ‌ ಕಳಪೆ ಮಟ್ಟದ ಕಾಳು, ಮೊಟ್ಟೆ ಇನ್ನಿತರ ಆಹಾರ ಪದಾರ್ಥಗಳ ಬಗ್ಗೆ ಸಮಗ್ರ ವರದಿ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು. ಕೆಲವು ಕಡೆಗೆ ದಿಢೀರ್‌ ಭೇಟಿ ನೀಡಿದ್ದಾಗ ಕಳಪೆ ಆಹಾರವನ್ನು ಗಮನಿಸಿದ್ದೇನೆ ಎಂದು ಹೇಳಿದರು.

ಆಹಾರ ಪೂರೈಕೆ ವಿಕೇಂದ್ರೀಕರಣ ವ್ಯವಸ್ಥೆ ಮೂಲಕ ನಡೆಯುತ್ತಿದ್ದು ಕೇಂದ್ರೀಕರಣ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಿದ್ದೇವೆ. ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ಮಗುವಿಗೆ ಪ್ರತಿ ದಿನ ಪೌಷ್ಟಿಕಾಂಶ ನೀಡಲು 8 ರೂ. ನಿಗದಿಯಾಗಿದೆ. ಇದು ಮೂರು ವರ್ಷಗಳ ಹಿಂದಿನ ದರವಾಗಿದ್ದು, ಅದನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳುವುದಾಗಿ ಲಕ್ಷ್ಮೀ ಹೆಬ್ಟಾಳ್ಕರ್‌ ತಿಳಿಸಿದರು.

ಮೂರ್ನಾಲ್ಕು ದಿನದಲ್ಲಿ ಗೃಹಲಕ್ಷ್ಮೀ ಆ್ಯಪ್‌ ಬಿಡುಗಡೆ
ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ ಆ್ಯಪ್‌ ಅನ್ನು ಮೂರ್ನಾಲ್ಕು ದಿನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಹೇಮಲತಾ ನಾಯಕ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಂದಿನ ವಾರ ಮಾಧ್ಯಮಗಳೊಂದಿಗೆ ಮಾಹಿತಿ ನೀಡ ಲಾಗುವುದು ಎಂದು ತಿಳಿಸಿದರು.

ಆಗಸ್ಟ್‌ 16-17ರ ಸುಮಾರಿಗೆ ಫ‌ಲಾನುಭವಿ ಗಳ ಖಾತೆಗೆ 2,000 ರೂ. ಜಮೆ ಮಾಡುತ್ತೇವೆ. ಈ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಗೆ 17,500 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಒಟ್ಟು ಯೋಜನೆಗೆ ವರ್ಷಕ್ಕೆ 30 ಸಾವಿರ ಕೋಟಿ ರೂ. ಅಂದಾಜಿಸಲಾಗಿದೆ ಎಂದರು.

Advertisement

ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಯರಿಗೆ ಇದು ಪ್ರಯೋಜನವಾಗಲಿದೆ. ನಮ್ಮ 1902 ಸಹಾಯವಾಣಿಗೆ ಬರುತ್ತಿರುವ ಕರೆಗಳಲ್ಲಿ ಈ ಯೋಜನೆ ಬಗ್ಗೆ ಜನರಲ್ಲಿ ಉತ್ಸಾಹ ಇರುವುದು ತಿಳಿಯುತ್ತದೆ ಎಂದು ಸಚಿವೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next