Advertisement
ವರ್ಜೀನಿಯಾದಲ್ಲಿ ಭಾರತೀಯ ಡಯಾಸ್ಫೋರವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅವರು, “ಇಂದು ಸಾಮಾಜಿಕ ಮಾಧ್ಯಮ ತುಂಬಾ ಬಲಿಷ್ಠವಾಗಿದೆ. ನಾನು ಕೂಡ ಅದರೊಂದಿಗೆ ಕೂಡಿಕೊಂಡಿದ್ದೇನೆ; ಆದರೆ ಈ ಮಾಧ್ಯಮವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ಸರಕಾರಿ ಸೇವೆಯನ್ನು ಚುರುಕುಗೊಳಿಸಬಹುದು ಮತ್ತು ಒಳ್ಳೆಯ ಹೆಸರು ತರಬಹುದು ಎಂಬುದನ್ನು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ತೋರಿಸಿಕೊಟ್ಟಿದ್ದಾರೆ. ನಸುಕಿನ 2 ಗಂಟೆಯ ವೇಳೆಯಲ್ಲಿ ಕೂಡ ಅವರು ವಿಶ್ವದ ಯಾವುದೇ ಮೂಲೆಯಲ್ಲಿ ಸಂಕಷ್ಟಕ್ಕೆ ಈಡಾಗುವ ಭಾರತೀಯರ ನೆರವಿಗೆ ಧಾವಿಸುತ್ತಾರೆ’ ಎಂದು ಪ್ರಶಂಸೆಯ ಮಾತುಗಳನ್ನು ಆಡಿದರು.