Advertisement

ಮೌಲ್ಯಮಾಪನ ಕಾರ್ಯಕ್ಕೆ ಒತ್ತಡ ಸಮಂಜಸ ಕ್ರಮವಲ್ಲ

08:35 AM Jun 09, 2020 | Suhan S |

ಧಾರವಾಡ: ದ್ವಿತೀಯ ಪಿಯುಸಿ ವಿಜ್ಞಾನ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ಎಲ್ಲ ಸಹಾಯಕ ಮೌಲ್ಯಮಾಪಕರು ಹಾಗೂ ಉಪ ಮುಖ್ಯ ಮೌಲ್ಯಮಾಪಕರುಗಳನ್ನು ಆಯಾ ಕಾಲೇಜುಗಳಿಂದ ಕಡ್ಡಾಯವಾಗಿ ಬಿಡುಗಡೆ ಮಾಡಿ ತಕ್ಷಣ ಮೌಲ್ಯಮಾಪನಕ್ಕೆ ಹಾಜರಾಗುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿ ಒತ್ತಡ ಹೇರಿದ್ದು, ಸಮಂಜಸವಾದ ಕ್ರಮವಲ್ಲ ಮತ್ತು ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಅವರು ನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Advertisement

ಜೂ.5ರಿಂದ ಎಲ್ಲ ವಿಜ್ಞಾನ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಬೆಂಗಳೂರು ಕೇಂದ್ರದಲ್ಲಿ ಮಾತ್ರ ಆರಂಭಿಸಿದ್ದು ವಿಷಾದಕರ ಸಂಗತಿ. ರಾಜ್ಯದ 30 ಜಿಲ್ಲೆಗಳಿಂದ ಉಪನ್ಯಾಸಕರು ಈ ಮೌಲ್ಯಮಾಪನ ಕಾರ್ಯಕ್ಕೆ ಹೋಗಬೇಕಿದೆ. ಕೋವಿಡ್‌-19ದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇನ್ನೂ ಸರಿಯಾದ ರೀತಿಯ ಸಾರಿಗೆ ವ್ಯವಸ್ಥೆ ಇಲ್ಲ, ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಲಾಡ್ಜಿಂಗ್‌ ಮತ್ತು ಹೋಟೆಲ್‌ ವ್ಯವಸ್ಥೆಯೂ ಸರಿಯಾಗಿಲ್ಲ. ಕಾರಣ ಬೆಂಗಳೂರು ಕೇಂದ್ರ ಪ್ರದೇಶದಿಂದ ಸಾಕಷ್ಟು ದೂರವಿರುವ ಜಿಲ್ಲೆಗಳಾದ ಬೀದರ, ಗುಲಬರ್ಗಾ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಗದಗ, ಕಾರವಾರ, ಹಾವೇರಿ ಈ ಜಿಲ್ಲೆಗಳ ಮೌಲ್ಯಮಾಪಕರಿಗೆ ಈ ಮೌಲ್ಯಮಾಪನ ಕಾರ್ಯದಿಂದ ವಿನಾಯತಿ ನೀಡಬೇಕು. ಮೌಲ್ಯಮಾಪನ ಕಾರ್ಯಕ್ಕೆ ಉಪನ್ಯಾಸಕರನ್ನು ಕಡ್ಡಾಯವಾಗಿ ಬಿಡುಗಡೆ ಮಾಡುವಂತೆ ಹೊರಡಿಸಿದ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಸಂಕನೂರ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next