Advertisement
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ನಡೆಸಿದ ದೇಶದ ಹುಲಿ ಸಂರಕ್ಷಿತ ಅರಣ್ಯಗಳ ಪರಿಣಾಮಕಾರಿ ನಿರ್ವಹಣಾ ಮೌಲ್ಯ ಮಾಪನದಲ್ಲಿ ರಾಜ್ಯದ ಹುಲಿ ರಕ್ಷಿತ ಅರಣ್ಯಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಲಾಗಿದೆ. ಸಾಮರ್ಥ್ಯಗಳನ್ನು ಪ್ರಶಂಸಿಸಿರುವ ಮೌಲ್ಯಮಾಪನ ತಂಡ, ದೌರ್ಬಲ್ಯಗಳನ್ನು ಸಹ ಬೊಟ್ಟು ಮಾಡಿ ತೋರಿಸಿ, ಇವುಗಳ ನಿವಾರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದೆ.
Related Articles
Advertisement
ಅರಣ್ಯ ಸಿಬ್ಬಂದಿಗೆ ತರಬೇತಿ ಅಗತ್ಯ: ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ವನ್ಯಜೀವಿ ನಿರ್ವಹಣೆಯಲ್ಲಿ ಸಮರ್ಪಕ ತರಬೇತಿ ಪಡೆಯುವ ಅಗತ್ಯವಿದೆ. ಬಂಡೀಪುರ ಅರಣ್ಯದಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿವೆ ಎಂದು ವರದಿ ಲೋಪದೋಷ (ದೌರ್ಬಲ್ಯ) ಗಳನ್ನು ಬೊಟ್ಟು ಮಾಡಿ ತೋರಿಸಿದೆ.
ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು-ಪರಿಸರ ಅಭಿವೃದ್ಧಿ ಸಮಿತಿಗಳನ್ನು ರಚಿಸಬೇಕು. ಪ್ರತಿ ಸಮಿತಿಗೂ 50 ಸಾವಿರ ರೂ.ಅನುದಾನ ನೀಡಬೇಕು. -ಅರಣ್ಯ ಸಿಬ್ಬಂದಿಗೆ ಮಾನವ ಸಂಪನ್ಮೂಲ ಯೋಜನೆಯಲ್ಲಿ ತರಬೇತಿ ನೀಡಬೇಕು. ವನ್ಯಜೀವಿ ಕಾಯ್ದೆ, ಅರಣ್ಯ ಸಂರಕ್ಷಣೆ ಬಗ್ಗೆ ತರಬೇತಿ ನೀಡಬೇಕು. -ಡಿಆರ್‌ಎಫ್ಒ ಹುದ್ದೆಗಳನ್ನು ಶೇ.50ರಷ್ಟು, ಫಾರೆಸ್ಟ್ ಗಾರ್ಡ್‌ಗಳ ಹುದ್ದೆಯನ್ನು ಶೇ.33ರಷ್ಟು, ವಾಚರ್ ಹುದ್ದೆಗಳನ್ನು ಶೇ.36ರಷ್ಟು ಕೂಡಲೇ ಭರ್ತಿ ಮಾಡಬೇಕು. -ಲಂಟಾನ ತೆರವಿಗಾಗಿ ಕೈಗೊಳ್ಳಬೇಕಾದ ಎರಡು ಸಂಶೋಧನಾ ವರದಿಗಳನ್ನು ಜಾರಿಗೊಳಿಸಬೇಕು. -ಬಂಡೀಪುರ ಅರಣ್ಯದಲ್ಲಿ ಹುಲಿ, ಆನೆಗಳ ಬಗ್ಗೆ ಮಾತ್ರ ಸಮೀಕ್ಷೆ ನಡೆಸಲಾಗುತ್ತಿದೆ. ಇದರ ಜೊತೆಗೆ ಅಳಿವಿನಂಚಿನಲ್ಲಿರುವ ಪ್ರಭೇದಗಳ ಬಗ್ಗೆ ಸಮೀಕ್ಷೆ ನಡೆಸಬೇಕು. -ಬಂಡೀಪುರ ಅರಣ್ಯದ ಸಫಾರಿ ವೀಕ್ಷಿಸಲು ಬರುವ ಪ್ರವಾಸಿಗರಿಗೆ ವಾಹನಗಳಲ್ಲಿ ತರಬೇತಿ ಪಡೆದ ಗೈಡುಗಳನ್ನು ನೇಮಿಸಬೇಕು. ಬಂಡೀಪುರ ಹುಲಿ ರಕ್ಷಿತ ಅರಣ್ಯದಲ್ಲಿ ಪರಿಸರ ಅಭಿವೃದ್ಧಿ ಸಮಿತಿಗಳಿಗಾಗಿ 45 ಲಕ್ಷ ರೂ.ಗಳನ್ನು ತೆಗೆದಿಡಲಾಗಿದೆ. ಅರಣ್ಯ ಸಿಬ್ಬಂದಿ ನೇಮಕಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಡಿಆರ್‌ಎಫ್ಓ, ಫಾರೆಸ್ಟ್ ಗಾರ್ಡ್‌ಗಳ ಸಾಕಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಕಾಡಿನಲ್ಲಿ ಬಿದಿರು ಬೆಳೆಸಲು 5 ಟನ್ ಬಿದಿರು ಬೀಜ ತರಿಸಲಾಗಿದೆ. ಮಳೆ ಬಿದ್ದ ಕಡೆ ಬಿತ್ತನೆ ಮಾಡಿದ್ದೇವೆ. ಅರಣ್ಯದಲ್ಲಿ ಜನವಸತಿಯ ಒತ್ತಡವನ್ನು ಕಡಿಮೆ ಮಾಡಲು ಸಫಾರಿ ಕೌಂಟರನ್ನು ಅರಣ್ಯದ ಹೊರಗಡೆ ವರ್ಗಾವಣೆ ಮಾಡಲಾಗಿದೆ.
-ಬಾಲಚಂದ್ರ, ನಿರ್ದೇಶಕ, ಹುಲಿಯೋಜನೆ * ಕೆ.ಎಸ್.ಬನಶಂಕರ ಆರಾಧ್ಯ