Advertisement

ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದಲ್ಲಿ ದಯಾ ಮರಣ ಈಗ ಕಾನೂನು ಸಮ್ಮತ

11:52 AM Jun 21, 2019 | Sathish malya |

ಮೆಲ್ಬೋರ್ನ್ : ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದಲ್ಲೀಗ ಯೂಥನೇಶ್ಯ ಅರ್ಥಾತ್‌ ದಯಾ ಮರಣ ಕಾನೂನು ಸಮ್ಮತವಾಗಿದೆ. ಹಾಗಾಗಿ ಮರಣ ಶಯ್ಯೆ ಯಲ್ಲಿರುವ ಆಸ್ಟ್ರೇಲಿಯನ್‌ ರೋಗಿಗಳು ದಯಾ ಮರಣಕ್ಕೆ ಅರ್ಜಿ ಹಾಕಬಹುದಾಗಿದೆ.

Advertisement

ಆಸ್ಟ್ರೇಲಿಯದ ಎರಡನೇ ಅತೀ ದೊಡ್ಡ ಜನಸಂಖ್ಯೆ ಹೊಂದಿರುವ ವಿಕ್ಟೋರಿಯ ರಾಜ್ಯದಲ್ಲಿ, ‘ಮರಣಕ್ಕೆ ಅತ್ಯಂತ ನಿಕಟ ಸನ್ನಿವೇಶ ಇರುವಲ್ಲಿ, ರೋಗಿಗಳು ಸ್ವಯಂ ಅಪೇಕ್ಷಿತರಾಗಿ ಕಾನೂನು ಬದ್ಧ ದಯಾಮರಣ ಪಡೆಯುವುದಕ್ಕ’  ಕಾನೂನಿಲ್ಲಿ ಅವಕಾಶ ಕಲ್ಪಿಸಲಾಗಿದೆ.

ಆಸ್ಟ್ರೇಲಿಯದಲ್ಲಿ ಯೂಥನೇಶ್ಯ ಅಥವಾ ದಯಾ ಮರಣಕ್ಕೆ ಕಾನೂನು ಸಮ್ಮತ ಅವಕಾಶ ಕಲ್ಪಿಸಿರುವ ಮೊದಲ ರಾಜ್ಯ ವಿಕ್ಟೋರಿಯ ಆಗಿದೆ ಎಂದು ವರದಿಗಳು ತಿಳಿಸಿವೆ.

2016ರಲ್ಲಿ ಕ್ಯಾನ್ಸರ್‌ ಪೀಡಿತ ತನ್ನ ತಂದೆಯ ಯಾತನಾಮಯ ಸಾವನ್ನು ಕಂಡಿದ್ದ ವಿಕ್ಟೋರಿಯದ ಪ್ರಧಾನಿ ಡೇನಿಯಲ್‌ ಆ್ಯಂಡ್ರೂಸ್‌ ಅವರು ದಯಾಮರಣ ಮಸೂದೆಯನ್ನು ಬೆಂಬಲಿಸಿದರು. ಮರಣ ಶಯ್ಯೆ ಯಲ್ಲಿರುವ ರೋಗಿಗಳಿಗೆ ಘನತೆಯಿಂದ ತಮ್ಮ ಬದುಕನ್ನು ಕೊನೆಗೊಳಿಸುವ ಅವಕಾಶವನ್ನು ಅನುಕಂಪ ಸಹಿತವಾಗಿ ಒದಗಿಸುವುದೇ ಈ ಕಾನೂನಿನ ಉದ್ದೇಶವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next