Advertisement

ರಷ್ಯಾ ಬದಲು ಭಾರತದ ಸಖ್ಯ: ಇ.ಯು. ಚಿಂತನೆ

09:24 AM Apr 26, 2022 | Team Udayavani |

ಲಂಡನ್‌: ರಷ್ಯಾದೊಂದಿಗೆ ವ್ಯಾಪಾರ, ವಹಿವಾಟು ಮುರಿದುಕೊಂಡಿರುವ ಐರೋಪ್ಯ ರಾಷ್ಟ್ರಗಳ ಒಕ್ಕೂಟ (ಇ.ಯು.), ಭಾರತದೊಂದಿಗೆ ತಾನು ಹೊಂದಿರುವ ವಾಣಿಜ್ಯ ಸಂಬಂಧಗಳನ್ನು ಮತ್ತಷ್ಟು ಉನ್ನತೀಕರಿಸಲು ನಿರ್ಧರಿಸಿದೆ.

Advertisement

ಭಾರತ ಭೇಟಿಯಲ್ಲಿರುವ ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ವೋನ್‌ ಡೆರ್‌ ಲೆಯೆನ್‌ ಈ ವಿಚಾರ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ರಷ್ಯಾ ಬದಲಿಗೆ ಭಾರತವನ್ನೇ ತನ್ನ ಆದ್ಯತೆಯ ರಾಷ್ಟ್ರವನ್ನಾಗಿಸಲು ಇ.ಯು. ಚಿಂತನೆ ನಡೆಸಿದೆ. ಭಾರತದ ಜತೆಗೆ ಮುಂದೆ ಹೊಂದಬಹುದಾದ ಅಗಾಧ ವಾಣಿಜ್ಯ ಅವಕಾಶಗಳ ಬಗ್ಗೆ ಸೂಕ್ತ ಅಧ್ಯಯನ ಮಾಡಲೆಂದೇ ವಿಶೇಷ ತಂತ್ರಜ್ಞರ ನಿಯೋಗವೊಂದನ್ನು ರಚಿಸಲು ಇ.ಯು. ನಿರ್ಧರಿಸಿದೆ. ಸಾಮಾನ್ಯ ದತ್ತಾಂಶ ಸಂರಕ್ಷಣೆ, ಸಾಮಾಜಿಕ ಜಾಲತಾಣಗಳ ಅಭಿವೃದ್ಧಿ ಸೇರಿದಂತೆ ಹಲವು ಅವಕಾಶಗಳ ಕುರಿತು ಇಯು ಪ್ರತಿನಿಧಿಗಳು, ಭಾರತದೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದೂ ಲೆಯೆನ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next