Advertisement
ಬರೀ ಬೇಸಗೆಯಲ್ಲ, ನಿತ್ಯ ನರಕ!ಯೂರೋಪ್‌ನಲ್ಲಿ ಈಗ ಬೇಸಗೆ ಕಾಲಿಟ್ಟಿದೆ. ಆದರೆ, ಈ ಬಾರಿಯ ಬೇಸಗೆ ಪ್ರತಿವರ್ಷದಂತೆ ಇಲ್ಲ. ಹೆಚ್ಚು ಶುಷ್ಕತೆಯ ಜೊತೆಗೆ ಶಾಖವೂ ಹೆಚ್ಚಾಗಿರುವುದರಿಂದ ಅದು ಬೇಸಗೆವನ್ನು ನರಕವನ್ನಾಗಿಸಿದೆ.
ಮೊದಲೇ ತಂಪು ವಾತಾವರಣ ಇದ್ದಿದ್ದರಿಂದ ಯೂರೋಪ್‌ನಲ್ಲಿ ಮನೆಗಳಲ್ಲಿ ಸಾಮಾನ್ಯವಾಗಿ ಹವಾ ನಿಯಂತ್ರಣ ವ್ಯವಸ್ಥೆ ಇರುವುದಿಲ್ಲ. ಆದರೆ, ಈಗ ವಾತಾವರಣದ ಉಷ್ಣ ಏರಿಕೆಯಾಗಿರುವುದರಿಂದ ಅಲ್ಲಿ “ವರ್ಕ್-ಫ್ರಂ-ಹೋಂ’ನಲ್ಲಿದ್ದ ದುಡಿಯುವ ವರ್ಗ, ಈಗ ಕಚೇರಿಯತ್ತ ಮುಖ ಮಾಡಿದೆ. ಅದಕ್ಕೆ ಕಾರಣ, ಆಫೀಸ್‌ನಲ್ಲಿರುವ ಹವಾ ನಿಯಂತ್ರಿತ ವ್ಯವಸ್ಥೆ! ಟೈ ಹಾಕ್ಕೋಬೇಡಿ: ಪ್ರಧಾನಿ ಕರೆ
ಸ್ಪೇನ್‌ನ ಪ್ರಧಾನಿ ಪೆಡ್ರೋ ಸ್ಯಾಚೆಝ್ ಅವರು, ಕಚೇರಿಗಳಲ್ಲಿ ಯಾರೂ ಟೈ ಕಟ್ಟಬಾರದು ಎಂದು ಅಲ್ಲಿನ ಎಲ್ಲಾ ಸರ್ಕಾರಿ ಸಿಬ್ಬಂದಿಗೆ ಕರೆಕೊಟ್ಟಿದ್ದಾರೆ. ಸ್ಪೇನ್‌ನಲ್ಲಿ ವಾತಾವರಣದ ಉಷ್ಣ ಅತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ರೀತಿ ಹೇಳಿದ್ದಾರೆ. ನಾನೂ ಸಹ ಟೈ ಕಟ್ಟುವುದಿಲ್ಲ. ಇದರಿಂದ ಕುತ್ತಿಗೆಯ ಭಾಗಕ್ಕೆ ಕೊಂಚ ಗಾಳಿಯಾಡಲು ಅನುಕೂಲವಾಗುತ್ತದೆ. ಆಗ ನಮಗೆ ಕಚೇರಿಗಳಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ ಬೇಕೇಬೇಕು ಎಂಬುದರ ಸಮಸ್ಯೆಯೇ ಇರುವುದಿಲ್ಲ ಎಂದಿದ್ದಾರೆ.
Related Articles
ಇಸ್ರೇಲ್‌ನ ಕರಾವಳಿಯಲ್ಲಿ ಲೋಳೆ ಮೀನುಗಳ ಮಹಾಮೇಳವೇ ಆಯೋಜನೆಗೊಂಡಿದೆ. ಹಿಂದೂ ಮಹಾಸಾಗರದಿಂದ ಇಸ್ರೇಲ್ ಕಡೆಗೆ ಪ್ರತಿ ವರ್ಷದ ಮಧ್ಯಭಾಗದಲ್ಲಿ ಸಾಗಿಹೋಗುವ ಇವು ಅಲ್ಲಿ ವಾಸ್ತವ್ಯ ಹೂಡುತ್ತವೆ. ಈ ಬಾರಿ ಹಿಂದೆಂದೂ ಕಾಣದಂಥ ಲೋಳೆ ಮೀನುಗಳ ಸಂಗ್ರಹ ಅಲ್ಲಿ ಕಾಣತೊಡಗಿದೆ. ಇದಕ್ಕೂ ಜಾಗತಿಕ ತಾಪಮಾನ ಹೆಚ್ಚಳ, ಪರಿಸರ ಮಾಲಿನ್ಯವೇ ಕಾರಣ ಎನ್ನಲಾಗಿದೆ.
Advertisement