Advertisement
15 ಗಂಟೆಗಳ ಚರ್ಚೆಗಳ ಬಳಿಕ ಯುರೋಪಿಯನ್ ರಾಷ್ಟ್ರಗಳು ಹಾಗೂ ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರ ನಡುವೆ ಈ ಕಾನೂನು ಜಾರಿಗೆ ಒಪ್ಪಂದ ನಡೆಸಲಾಗಿದೆ. ರಾಷ್ಟ್ರಗಳಲ್ಲಿ ಯಾವುದೇ ಎಐ ಆಧಾರಿತ ತಂತ್ರಜ್ಞಾನ ಬಳಕೆಗೆ ಬರುವುದಾದರೆ ಅದಕ್ಕೂ ಮುನ್ನ ಆ ತಂತ್ರಜ್ಞಾನದ ಪಾರದರ್ಶಕತೆಯನ್ನು ಪರಮಾರ್ಶಿಸುವುದು ಅಗತ್ಯ. ಈ ನಿಟ್ಟಿನಲ್ಲಿ ತಾಂತ್ರಿಕ ದಾಖಲಾತಿಗಳನ್ನು ರಚಿಸುವುದು, ತಂತ್ರಜ್ಞಾನದಲ್ಲಿ ಬಳಕೆಯಾಗಿರುವ ವಿಷಯಗಳ ಬಗ್ಗೆ ವಿವರವಾದ ಸಾರಂಶ ಪ್ರಕಟಿಸುವುದು, ಎಐನಿಂದ ಎದುರಾಗುವ ಅಪಾಯಗಳನ್ನು ನಿಯಂತ್ರಿಸುವ ಕ್ರಮಗಳು ಸೇರಿದಂತೆ ವಿವಿಧ ರೀತಿಯ ನಿಯಂತ್ರಣ ಕ್ರಮಗಳನ್ನು ಪರಿಚಯಿಸುವ ಹಾಗೂ ಅವುಗಳನ್ನು ಉಲ್ಲಂ ಸಿದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾನೂನು ಜಾರಿಗೊಳಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ ಎಂದು ಒಕ್ಕೂಟದ ಪಾರ್ಲಿಮೆಂಟ್‌ನ ಮಹಾ ನಿರ್ದೇಶಕ ಸೆಸಿಲಾ ಬೋನೆಫಿಲ್ಸ್ ಧಾಲ್ ಹೇಳಿದ್ದಾರೆ.
ಉದ್ಯಮಿ ಎಲಾನ್ ಮಸ್ಕ್ ಒಡೆತನದ ಎಕ್ಸ್‌ನಲ್ಲಿ ಇತ್ತೀಚೆಗೆ ಬಳಸಲಾದ ಗ್ರೋಕ್ ಚಾಟ್‌ಬಾಟ್ ಚಾಟ್‌ಜಿಪಿಟಿಯ ನಿರ್ಮಾತೃ ಓಪನ್‌ಎಐನ ಕೋಡ್‌ಬೇಸ್ ಬಳಸಿದೆ ಎನ್ನುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೆ ಮಸ್ಕ್ ಪ್ರತಿಕ್ರಿಯೆ ನೀಡಿ, ಓಪನ್‌ಎಐ ಅಭಿವೃದ್ಧಿಗೆ ತಾವು ಅನುದಾನ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಬಳಕೆದಾರರೊಬ್ಬರು ಮಾಲ್ವೇರ್ ಸೃಷ್ಟಿಸಲು ಗ್ರೋಕ್‌ನ ಸಹಾಯ ಕೇಳಿದಾಗ ಅದು ಸಾಧ್ಯವಿಲ್ಲ, ಇದು ಓಪನ್ ಎಐ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಗ್ರೋಕ್ ಹೇಳಿತ್ತು. ಚಾಟ್ ಜಿಪಿಟಿ ಇದೇ ವಿಚಾರ ಹಂಚಿಕೊಂಡು ನಮ್ಮಲ್ಲಿ ಬಹಳ ಸಾಮ್ಯತೆ ಇದೆ ಎಂದು ಪರೋಕ್ಷವಾಗಿ ಮಸ್ಕ್ ಸಂಸ್ಥೆಗೆ ಟಾಂಗ್ ನೀಡಿತ್ತು.