Advertisement
ಅವರು ಮಣಿಪಾಲದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನವೀನ ಉದ್ಯಮಗಳಿಗೆ ಬೆಂಬಲ ಭಾರತದಲ್ಲಿ ನವೀನ ಉದ್ಯಮಗಳಿಗೆ ಐರೋಪ್ಯ ಒಕ್ಕೂಟ ಸಾಕಷ್ಟು ಬೆಂಬಲ ನೀಡುತ್ತಿದೆ. ಈಗಾಗಲೇ ಇನ್‌ಕ್ಯೂಬೇಟರ್ ನೆಟ್‌ವರ್ಕ್ ಜಾರಿಯಲ್ಲಿದ್ದು ಇದರ ಮೂಲಕ ಐರೋಪ್ಯ ದೇಶಗಳ ಸಾಕಷ್ಟು ಸಣ್ಣ ಮತ್ತು ಬೃಹತ್ ಉದ್ಯಮಗಳು ಭಾರತದಲ್ಲಿವೆ. ಭಾರತ ಸರಕಾರ ಕೂಡ ಇದಕ್ಕೆ ಸಹಕರಿಸಿದೆ. ನವೀಕರಿಸಬಹುದಾದ ಇಂಧನ, ನೀರಿನ ನಿರ್ವಹಣೆ ಮತ್ತು ಪರಿಸರ ಸಹ್ಯ ಇಂಧನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಾ ಇದ್ದೇವೆ. ಕರ್ನಾಟಕದಲ್ಲೂ ಐರೋಪ್ಯ ಒಕ್ಕೂಟ ಬೆಂಬಲಿತ ಉದ್ಯಮಗಳಿವೆ ಎಂದರು. ಭಾರತದ ಮೊದಲ ಜೀನ್ ಮಾನೇಟ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಯುರೋಪಿಯನ್ ಸ್ಟಡೀಸ್ ಸೆಂಟರ್ ಡಿ. 8ರಂದು ಮಣಿಪಾಲದಲ್ಲಿ ಉದ್ಘಾಟನೆಗೊಳ್ಳುತ್ತಿದ್ದು, ಎರಡನೇ ಸೆಂಟರ್ ಜೆಎನ್‌ಯುನಲ್ಲಿ ಉದ್ಘಾಟನೆ ಗೊಳ್ಳಲಿದೆ. ಈ ಸೆಂಟರ್ ಮೂಲಕ ಐರೋಪ್ಯ ದೇಶಗಳಿಗೆ ಸಂಬಂಧಿಸಿದ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮಾಹೆ ಕೇಂದ್ರದ 13 ಯೋಜನೆಗಳಿಗೆ ನೆರವು ನೀಡಲಿದ್ದೇವೆ ಎಂದರು. ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಯುರೋಪಿಯನ್ ಯೂನಿಯನ್‌ನ ಫೆಡ್ರಿಕ್ ಶಾಂಪಾ, ಅನಿಲ್ ಪಾಟ್ನಿ ಉಪಸ್ಥಿತರಿದ್ದರು.