ಜಿನೀವಾ: 2022ರ ವೇಳೆಗೆ ಭಾರತದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಎನ್‌ಡಿಎ ಸರ್ಕಾರದ ಯೋಜನೆಯ ಬಗ್ಗೆ ಐರೋಪ್ಯ ಒಕ್ಕೂಟ ಪ್ರಶ್ನಿಸಿದೆ. ಈ ಯೋಜನೆಯನ್ನು ಹೇಗೆ ಜಾರಿಗೊಳಿಸುತ್ತೀರಿ ಎಂದು ಐರೋಪ್ಯ ಒಕ್ಕೂಟ ಪ್ರಶ್ನಿಸಿದೆ. ಈ ಯೋಜನೆಗಾಗಿ 25 ಲಕ್ಷಕೋಟಿ ರೂಪಾಯಿ ವೆಚ್ಚ ಮಾಡಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಆದರೆ ಉತ್ಪನ್ನಗಳ ಜಾಗತಿಕ ಮಾರುಕಟ್ಟೆ ಬೆಲೆ ಮತ್ತು ಹೆಚ್ಚುವರಿ ಉತ್ಪನ್ನವನ್ನು ತಡೆಯಲು ಕೈಗೊಂಡ ಕ್ರಮಗಳನ್ನು ಈ ಯೋಜನೆಯಲ್ಲಿ ಪರಿಗಣಿಸಲಾಗಿದೆಯೇ ಎಂದು ಐರೋಪ್ಯ ಒಕ್ಕೂಟ ತನ್ನ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಿದೆ.
ವಿವಿಧ ದೇಶಗಳಲ್ಲಿ ಕೃಷಿಗೆ ನೀಡಲಾಗುತ್ತಿರುವ ಸಬ್ಸಿಡಿ ಹಾಗೂ ಹಣಕಾಸು ನೆರವಿನ ಬಗ್ಗೆ ಡಬ್ಲ್ಯೂಟಿಒ ಸದಸ್ಯರ ರಾಷ್ಟ್ರಗಳು ನಿಗಾ ವಹಿಸಿದ್ದು, ಅಮೆರಿಕ ಹಾಗೂ ಭಾರತದ ರೈತ ಪರ ನೀತಿಗಳ ಕುರಿತು ಪ್ರಶ್ನೆ ಮಾಡಿವೆ. ಈ ಪ್ರಶ್ನೆಗಳಿಗೆ ಜೂನ್ 25 ಹಾಗೂ 26 ರಂದು ನಡೆಯಲಿರುವ ಸಭೆಯಲ್ಲಿ ಪ್ರತಿಕ್ರಿಯೆ ನೀಡಬೇಕಿದೆ.
Advertisement