Advertisement
“ಎರಿಕ್ಸೆನ್ ಲವಲವಿಕೆಯಿಂದಿದ್ದು, ತನ್ನ ಚೇತರಿಕೆಯನ್ನು ಹಾರೈಸಿದ ಆಭಿಮಾನಿಗಳಿಗೆ, ತಂಡದ ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನೂ ಸ್ವಲ್ಪ ಕಾಲ ಅವರು ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ’ ಎಂದು ಡ್ಯಾನಿಶ್ ಫುಟ್‌ಬಾಲ್ ಅಸೋಸಿಯೇಶನ್ ಪ್ರಕಟನೆಯಲ್ಲಿ ತಿಳಿಸಿದೆ.
29 ವರ್ಷದ ಕ್ರಿಸ್ಟಿಯನ್ ಎರಿಕ್ಸೆನ್, ಫಿನ್ಲಂಡ್ ಎದುರಿನ “ಬಿ’ ವಿಭಾಗದ ಪಂದ್ಯದ 42ನೇ ನಿಮಿಷದಲ್ಲಿ ಲೆಫ್ಟ್ ಟಚ್‌ಲೈನ್ ಬಳಿ ಓಡುತ್ತಿರುವಾಗ ಹಠಾತ್ತನೇ ಕುಸಿದು ಬಿದ್ದರು. ಮೇಲೇಳದಿದ್ದಾಗ ತಂಡದ ಆಟಗಾರರೆಲ್ಲ ಅವರನ್ನು ಸುತ್ತುವರಿದರು. ಕೂಡಲೇ ಅವರನ್ನು ಸ್ಟ್ರೆಚರ್ ಮೂಲಕ ಹೊರಗೆ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದನ್ನೂ ಓದಿ:ದ.ಆಫ್ರಿಕಾ ಇನ್ನಿಂಗ್ಸ್ ಜಯಭೇರಿ : ತವರಲ್ಲೇ ವೆಸ್ಟ್ ಇಂಡೀಸಿಗೆ ಮುಖಭಂಗ
Related Articles
Advertisement