Advertisement
ತಾಲೂಕಿನ ಬೈರಗೊಂಡ್ಲು ಬಳಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಬಫರ್ ಡ್ಯಾಮ್ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಎರಡೂ ತಾಲೂಕಿನ ಸಬ್ ರಿಜಿಸ್ಟರ್ ರೇಟ್ ವ್ಯತ್ಯಾಸದಿಂದ ಸೃಷ್ಠಿಯಾದ ಗೊಂದಲ ಕೊರಟಗೆರೆ ತಾಲೂಕಿನ ಜನತೆ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರಕಾರ 5.78 ಟಿ ಎಂ ಸಿ ಸಾಮರ್ಥ್ಯವನ್ನು ಹೊಸ ಪರಿಷ್ಕೃತ 2.78 ಟಿಎಂಸಿ ನೀರು ತಗ್ಗಿಸುವ ಮುಖೇನ 2 ಟಿಎಂಸಿ ಸಾಮರ್ಥ್ಯದ ನಿರ್ಮಾಣಕ್ಕೆ ಹೊಸ ಪ್ರಸ್ತುತ ಪ್ರಸ್ತಾವನೆ ಸರಕಾರದಿಂದ ಸಿದ್ದಗೊಂಡಿದೆ.
Related Articles
Advertisement
ಎತ್ತಿನಹೊಳೆ ಯೋಜನೆ ಕೊರಟಗೆರೆ ತಾಲೂಕಿನಲ್ಲಿ ಕಾಲಿಟ್ಟು, ಬೈರಗೊಂಡ್ಲು ಬಳಿ 5.78 ಟಿಎಂಸಿ ಸಾಮರ್ಥ್ಯದ ಬಫರ್ ಡ್ಯಾಮ್ ನಿರ್ಮಾಣವಾಗಲಿದೆ ಇದರಿಂದ ಕೋಳಾಲ ಭಾಗದ 8-10 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಲಿವೆ ಎಂಬ ಆಘಾತಕಾರಿ ಸುದ್ದಿಯಿಂದ ಇಲ್ಲಿನ ಜನರು ತಮ್ಮ ಊರು, ನೂರಾರು ವರ್ಷಗಳು ನೆಲದೊಂದಿಗೆ ಇದ್ದಂತಹ ಸಂಬಂಧ ಇಲ್ಲಿನ ಜನ ಕಳೆದುಕೊಳ್ಳದ ಮನಸ್ಥಿತಿಯಲ್ಲಿ ಇಲ್ಲದೆ ಕಾರಣ ಭೂಸ್ವಾಧೀನ ಪ್ರಕ್ರಿಯೆಗೆ ನಮ್ಮ ಜಮೀನನ್ನು ನೀಡೋದಿಲ್ಲ ಎಂದು ಹಲವು ಬಾರಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳು ಸೇರಿದಂತೆ ರಾಜ್ಯಮಟ್ಟದ ಅಧಿಕಾರಿಗಳು ಸಂಧಾನ ಕೈಗೊಂಡು ಜನರ ಮನಸ್ಸನ್ನು ಒಂದು ಹಂತಕ್ಕೆ ಭೂಸ್ವಾಧೀನಕ್ಕೆ ಸಂಧಾನ ಕಾರ್ಯ ನಡೆಯುತ್ತಾದರೂ ಕೊನೆಯ ಹಂತದಲ್ಲಿ ಹಣದ ವ್ಯತ್ಯಾಸಗಳಿಂದ ಸಮರ್ಪಕ ಭೂ ಸ್ವಾಧೀನ ಪ್ರಕ್ರಿಯೆಗೆ ಜನ ಸ್ಪಂದಿಸಲಿಲ್ಲ.
ಎತ್ತಿನಹೊಳೆ ಪ್ರಾರಂಭ ಹಂತದಲ್ಲಿ ರೈತರಿಗೆ ಮಾಹಿತಿ ಕೊರತೆ ಹಾಗೂ ಬಫರ್ ಡ್ಯಾಮ್ ನಿರ್ಮಾಣದ ಪ್ರದೇಶ ಎರಡು ತಾಲೂಕಿನ ಗಡಿಗಳಿಗೆ ಹೊಂದಿಕೊಂಡಂತಿದ್ದು, ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕಿನ ಗಡಿಯಾದರಿಂದ ಎರಡು ವಿಭಾಗವಾಗಿ ಭೂಸ್ವಾದಿನ ಪ್ರಕ್ರಿಯೆಯಲ್ಲಿ ದೊಡ್ಡಬಳ್ಳಾಪುರ ಗ್ರಾಮದವರಿಗೆ 38 ಲಕ್ಷ ಹಾಗೂ ಕೊರಟಗೆರೆ ಭಾಗದ ಜಮೀನುಗಳಿಗೆ 18 ಲಕ್ಷ ನಿಗದಿ ಪಡಿಸಿದ್ದರಿಂದ ರೈತರಲ್ಲಿ ಆಕ್ರೋಶ ಕಂಡು ಬಂದು ಒಂದೇ ಬಫರ್ ಡ್ಯಾಮಿಗೆ ಎರಡೆರಡು ತರದ ದರ ಪಟ್ಟಿ ನೀಡಿ ವ್ಯತ್ಯಾಸ ಹಣ ನೀಡಿದರೆ ನಾವು ಜಮೀನು ಬಿಟ್ಟುಕೊಳ್ಳುವುದಿಲ್ಲ, ದೊಡ್ಡಬಳ್ಳಾಪುರ ಮಾದರಿಯಲ್ಲಿಯೇ ನಮಗೂ ಹಣ ಸಂಧಾಯವಾಗಬೇಕು ಎಂದು ಪಟ್ಟು ಬಿಡದ ಕೋಳಾಲ ವ್ಯಾಪ್ತಿಯ ರೈತರು ಪಟ್ಟು ಸಡಿಲಿಸದ ಕಾರಣ ಸರ್ಕಾರ ಅನಿವಾರ್ಯವಾಗಿ ಬೇರೆಡೆಗೆ ವರ್ಗಾಯಿಸುವ ಅಥವಾ ಬಫರ್ ಡ್ಯಾಮ್ ತಗ್ಗಿಸುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಕೊರಟಗೆರೆ ತಾಲೂಕಿನ ಜನತೆಗೆ ಬಫರ್ ಡ್ಯಾಮ್ ನ ಸ್ಪಷ್ಟ ಚಿತ್ರಣ ನೀಡಿ ಎಂದು ಇತ್ತೀಚಿಗೆ ಅಧಿವೇಶನದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಡಾ. ಜಿ ಪರಮೇಶ್ವರ್ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉತ್ತರಿಸಿ ಈ ಹಿಂದಿನ 5.78 ಟಿಎಂಸಿ ಸಾಮರ್ಥ್ಯದ ಬಫರ್ ಡ್ಯಾಮ್ ಅನ್ನು 2.78 ಟಿಎಂಸಿ ತಗ್ಗಿಸಿ 2 ಟಿಎಂಸಿ ನೀರು ಹಿಡಿಯುವಷ್ಟು ಸಾಮರ್ಥ್ಯದ ಬಫರ್ ಡ್ಯಾಮ್ ಗೆ ಹಸಿರು ನಿಶಾನೆ ತೋರಿಸಿದ್ದು ಕೊರಟಗೆರೆ ತಾಲೂಕಿನ ಪ್ರಸಕ್ತ ಪಟ್ಟಿಯಲ್ಲಿರುವ ಎಲ್ಲಾ ಕೆರೆಗಳಿಗೂ ನೀರು ಹಾಯಿಸುವ ಭರವಸೆಯನ್ನ ನೀಡಿದ್ದಾರೆ.
ಒಟ್ಟಾರೆ ಶಾಶ್ವತ ನೀರಾವರಿ ಯೋಜನೆ ಎತ್ತಿನ ಹೊಳೆ ಕೊರಟಗೆರೆ ತಾಲೂಕಿನಲ್ಲಿ ನೆಲೆಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದ್ದು, ಪ್ರಸಕ್ತ ಈ ಹಿಂದೆ ಗುರುತಿಸಲಾದ ಬೈರಗೂಂಡ್ಲು ಪ್ರದೇಶದಲ್ಲಿಯೇ ಸಾಮರ್ಥ್ಯ ಕುಗ್ಗಿಸಿ ರೈತರಿಗೂ ಸಮಸ್ಯೆ ಆಗದ ರೀತಿಯಲ್ಲಿ ಬಫರ್ ಡ್ಯಾಮ್ ನಿರ್ಮಾಣಗೊಳ್ಳುವ ಜೊತೆಗೆ ತಾಲೂಕಿನ ನಿಗದಿತ ಬಹುತೇಕ ಕೆರೆಗಳಿಗೆ ನೀರು ತುಂಬಿಸುವಂತಹ ಕಾರ್ಯ ನಡೆದಿದ್ದು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.
ಶಾಶ್ವತ ನೀರಾವರಿ ಯೋಜನೆ ವಿಚಾರದಲ್ಲಿ ನಾನು ಮೊದಲಿನಿಂದಲೂ ಆಸಕ್ತಿ ವಹಿಸುತ್ತಿದ್ದು, ರೈತರ ಪರ ನಿರ್ಧಾರಗಳ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ವಿಚಾರದಲ್ಲಿ ಬಫರ್ ಡ್ಯಾಮ್ ಇಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ರೈತರ ಭೂ ಸ್ವಾಧೀನ ಪ್ರಕ್ರಿಯೆ ವಿಚಾರದಲ್ಲಿ ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ಭಾಗಗಳಲ್ಲಿ ಸಬ್ ರಿಜಿಸ್ಟ್ರಾರ್ ರೇಟ್ ವ್ಯತ್ಯಾಸಗಳಿಂದ ರೈತರು ಆ ಭಾಗದ ರೈತರ ಹಣಕ್ಕಿಂತ ಕಡಿಮೆ ಹಣವನ್ನು ನಾವು ತೆಗೆದುಕೊಳ್ಳಬಾರದು ಎಂದು ಮನಸ್ಥಿತಿಯಲ್ಲಿದ್ದ ರೈತರಿಗೆ ಬಫರ್ ಡ್ಯಾಮ್ ಸಾಮರ್ಥ್ಯ ಮಟ್ಟ ಕುಗ್ಗಿಸಿ ನಿಯೋಜಿತ ಸ್ಥಳದಲ್ಲಿಯೇ ಕಾಮಗಾರಿ ಪ್ರಾರಂಭಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ .
ಡಾ. ಜಿ ಪರಮೇಶ್ವರ ಮಾಜಿ ಉಪಮುಖ್ಯಮಂತ್ರಿ, ಶಾಸಕ
ರೈತರ ಜೀವನಾಡಿಗಳಾದ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಗಳ ವಿಚಾರದಲ್ಲಿ ಸರ್ಕಾರಗಳಿಗೆ ಬದ್ಧತೆ ಇರಬೇಕು, ಇಲ್ಲಿನ ರೈತರಿಗೆ ಭೂ ಸ್ವಾಧೀನ ಪ್ರಕ್ರಿಯೆ ವಿಚಾರದಲ್ಲಿ ಉತ್ತಮವಾಗಿ ಸ್ಪಂದಿಸಿದ್ದರೆ ರೈತರು ಯಾವುದೇ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ, ಒಂದೇ ಸ್ಥಳಕ್ಕೆ ಎರಡೆರಡು ದರ ನಿಗದಿ ಮಾಡಿದರೆ ಯಾವ ನ್ಯಾಯ? ಅನಾವಶ್ಯಕ ವೆಚ್ಚಗಳಿಗೆ ಸರ್ಕಾರ ಕಡಿವಾಣ ಹಾಕಿ ಇಂತಹ ಉತ್ತಮ ನೀರಾವರಿ ಯೋಜನೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡದಿರುವುದು ದುರದೃಷ್ಟಕರ, ಆದರೂ ಕೊರಟಗೆರೆ ತಾಲೂಕಿನಲ್ಲಿ ರೈತರಲ್ಲಿ ಸ್ವಲ್ಪಮಟ್ಟಿನ ತೃಪ್ತಿ ತಂದಿದ್ದು ತಾಲೂಕಿನ ಎಲ್ಲಾ ಕೆರೆಗಳು ನೀರು ಹಾಯಿಸುವಂತ ಕೆಲಸವಾಗಬೇಕು.
ಸಿದ್ದರಾಜು..ಅಧ್ಯಕ್ಷ ತಾಲೂಕು ರೈತ ಸಂಘ ಕೊರಟಗೆರೆ
ಸಿದ್ದರಾಜು. ಕೆ.