Advertisement
ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಆರಂಭವಾಗುತ್ತಿದ್ದಂತೆ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಶಾಸಕರಾದ ಎಂ.ವೈ ಪಾಟೀಲ್, ಪ್ರಿಯಾಂಕ್ ಖರ್ಗೆ ಮಾತನಾಡಿ, ನಿನ್ನೆ ನಡೆದ ಲಸಿಕಾ ಉಗ್ರಾಣ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಖನೀಜಾ ಫಾತೀಮಾ ಅವರ ಹೆಸರಿರಲಿಲ್ಲ. ಕೊನೆ ಪಕ್ಷ ಕಾರ್ಯಕ್ರಮ ದ ಮಾಹಿತಿಯೇ ಇರಲಿಲ್ಲ. ಅದೇ ರೀತಿ ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ಖಾಸಗಿ ತೋಟದಲ್ಲಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಲಸಿಕಾ ಅಭಿಯಾನ ಕೈಗೊಂಡಿರುವುದು ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಪುಣ್ಯತಿಥಿ ಕಾರ್ಯಕ್ರಮದಲ್ಲಿ ಸರ್ಕಾರಿ ಲಸಿಕೆ ಹಾಕಿಸಿರುವುದು ಎಷ್ಟೊಂದು ಸಮಂಜಸ. ಒಂದು ವೇಳೆ ಖಾಸಗಿಯಾಗಿ ಲಸಿಕೆ ಹಾಕಿಸಿದ್ದರೆ ತಮ್ಮದೇನು ತಕರಾರಿಲ್ಲ. ಆದರೆ ಸರ್ಕಾರಿ ಲಸಿಕೆ ಬಳಸಲಾಗಿದೆ. ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು.
ಅದೇ ರೀತಿ ವಿವಿಧ ಹಂತದಲ್ಲಿ ಶಿಷ್ಟಾಚಾರ ಪದೇ ಪದೇ ಉಲ್ಲಂಘನೆಯಾಗುತ್ತಿದೆ. ಹೀಗಾಗಿ ತಪ್ಪಿತಸ್ತರ ವಿರುದ್ದ ಕ್ರಮ ಕೈಗೊಳ್ಳಬೇಕೆಂದರು. ನಿರಾಣಿ ಸಾಹೇಬರು ಜಿಲ್ಲಾ ಉಸ್ತುವಾರಿ ಸಚಿವರು ಆದ ನಂತರ ಆಡಳಿತ ಚುರುಕುಗೊಂಡಿದೆ. ಆದರೆ ಶಿಷ್ಟಾಚಾರ ದಲ್ಲಿ ಲೆಕ್ಕ ತಪ್ಪಿ ದಂತಾಗಿದೆ ಎಂದರು.
Related Articles
Advertisement
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ( ಜೆಸ್ಕಾಂ) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಡು ರಸ್ತೆಯಲ್ಲಿ ಕಂಬ ಹಾಕ್ತಾರೆ, ನಂತರ ರಸ್ತೆ ಮಾಡುವಾಗ ರಸ್ತೆಗಿಂತ ಕಂಬ ಸ್ಥಳಾಂತರಕ್ಕೆ ಹೆಚ್ಚಿನ ಹಣ ಕಟ್ಟುವಂತಾಗಿದೆ. ಹತ್ತು ಕಂಬಗಳ ಸ್ಥಳಾಂತರಕ್ಕೆ ಒಂದು ಕಡೆ ಒಂದು ದರ ಮತ್ತೊಂದೆಡೆ ಮಗದೊಂದು ದರವಿದೆ. ಮೊದಲು ಮನಸ್ಸಿಗೆ ಬಂದಂತೆ ಕಂಬ ಹಾಕುವುದು. ನಂತರ ಸ್ಥಳಾಂತರ ನಾವು ಹಣ ಕೊಡೊದು ಯಾವ ನ್ಯಾಯ? ಒಟ್ಟಾರೆ ಗುತ್ತಿಗೆದಾರರು ಹಾಗೂ ಜೆಸ್ಕಾಂ ಅಧಿಕಾರಿಗಳ ನಡುವೆ ಒಳ ಒಪ್ಪಂದ ನಡೆದು ಹಣ ಲೂಟಿ ಮಾಡಲಾಗುತ್ತಿದೆ ಎಂದು ಆಡಳಿತ ಪಕ್ಷದ ಶಾಸಕರಾಗಿರುವ ಎನ್ಇಕೆಆರ್ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಚಿವ ನಿರಾಣಿ ಅವರು, ಜೆಸ್ಕಾಂ ಇಲಾಖೆ ಸುಧಾರಣೆಗೆ ಪ್ರತ್ಯೇಕ ಸಭೆ ನಡೆಸುವುದಾಗಿ ಪ್ರಕಟಿಸಿದರು.