ಹೆಚ್ಚು ಲಾಭಕರ ಅಂತ ಮೊಳೆಯಾರರು ಮೊದ್ಲೆ ಹೇಳಿದ್ದಾರೆ. ರಾಯರಿಗೆ ಮುಂದಿನ ದಾರಿ ಕಾಣದಾಯಿತು. ರೀಸರ್ಚಿನ ಬಳಿಕ “ಮ್ಯೂಚುವಲ್ ಫಂಡುಗಳಲ್ಲಿ ಹೂಡಿದರೆ ಎಂಚ?’ ಎಂಬ ಘನಂದಾರಿ ಐಡಿಯಾ ರಾಯರಿಗೆ ಪ್ರಾಪ್ತವಾಯಿತು.
Advertisement
ಸಿರಿಯ ಸಂಸಾರವು ಸ್ಥಿರವೆಂದು ನಂಬದಿರುಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ
ಹರಿದು ಹೋದಂತೆ ಸರ್ವಜ್ಞ ||
ಒಂದಕ್ಕೆರಡು ಡಬ್ಬಲ್ ಪ್ರತಿಫಲ ಕೊಡುವ ಪಾಂಜಿ ಸ್ಕೀಮಿನಲ್ಲಿ ರಾಯರ ಸಹಿತ ಸಮಾಜದ ಹತ್ತು ಸಮಸ್ತರು ದುಡ್ಡು ಹೂಡಿ ಚಿಕ್ಕಾಸೂ ಬಿಡದೆ ಎಲ್ಲವನ್ನೂ ಕಳೆದುಕೊಂಡದ್ದು ಎಲ್ಲರಿಗೂ ಒಂದು ರೀತಿಯಲ್ಲಿ ಮಂಕು ಕವಿದಂತಾಗಿತ್ತು. ಕಳೆದ ಕೆಲ ವಾರಗಳಿಂದ ರಾಯರಿಗೆ ಆವರಿಸಿಕೊಂಡ ಈ ಮಂಕು ಕೊನೆಗೂ ದೊಡ್ಡಣಗುಡ್ಡೆಯ ಎ.ವಿ.ಬಾಳಿಗಾ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಪಿ.ವಿ.ಭಂಡಾರಿಯವರ ಕೈಗುಣದಿಂದ ಬಹುತೇಕ ಗುಣವಾಗುತ್ತಾ ಬಂದಿದೆ. ಕಂಠಸಿರಿ ಮತ್ತು ಲವಲವಿಕೆ ಮೊದಲಿನ ಲೆವೆಲ್‌ಗೆ ವಾಪಾಸು ಬಾರದಿದ್ದರೂ ತಮ್ಮ ದೈನಂದಿನ ಕೆಲಸಕ್ಕಾಗಿ ಆತಂಕವಿಲ್ಲದೆ ಶಾಂತಿಯಿಂದ ಓಡಾಡುವ ಹಂತಕ್ಕೆ ರಾಯರು ತಲುಪಿ¨ªಾರೆ. ಅಷ್ಟಾದರೂ ಆಯಿತಲ್ಲ, ಅದೇ ಭಾಗ್ಯ ಅಂತ ಅವರ ಮಗ ಸೊಸೆ ಮಠಕ್ಕೆ ಹೋಗಿ ಉಡುಪಿ ಕೃಷ್ಣನಿಗೆ ಒಂದು ಪಂಚ ಕಜ್ಜಾಯ ಸೇವೆ ಸಲ್ಲಿಸಿ ಬಂದರು. “ಅಪ್ಪಯ್ಯನ ಆರೋಗ್ಯ ನಾಜೂಕು, ದಯವಿಟ್ಟು ಫೈನಾನ್ಸ್ ವಿಷಯ ಅವರತ್ರ ಜಾಸ್ತಿ ಕೇಳಬೇಡಿ’ ಅಂತ ಮಗ ಇದ್ದವರತ್ರ ಎಲ್ಲ ಕಳಕಳಿಯಿಂದ ಕೇಳಿಕೊಂಡ ದ್ದಾಯಿತು. ಕ್ರಮೇಣ ಜನರೂ ಕೂಡಾ ತಮ್ಮ ಗ್ರಹಚಾರವನ್ನು ಹಳಿ ಯುತ್ತಾ ಮಾಯವಾದ ಹಣವನ್ನು ನಿಧಾನವಾಗಿ ಮರೆಯತೊಡಗಿ ದರು. ರಾಯರ ಆರೋಗ್ಯ ಇನ್ನಷ್ಟು ಸುಧಾರಿಸಿ ಕ್ರಮೇಣ ವಿತ್ತ ವಿಚಾರಗಳತ್ತ ತಮ್ಮ ಆಸಕ್ತಿಯನ್ನು ಪುನಃ ಹರಿಸತೊಡಗಿದರು.
Related Articles
1. ಈಕ್ವಿಟಿ ಅಥವಾ ಶೇರುಗಳಲ್ಲಿ ಹೂಡುವ ಫಂಡುಗಳು
2. ಡೆಟ್ ಅಥವ ಸಾಲಪತ್ರಗಳಲ್ಲಿ ಹೂಡುವ ಫಂಡುಗಳು
3. ಇವೆರಡರ ಮಿಶ್ರಣಗಳಾದ ಹೈಬ್ರಿಡ್ ಫಂಡುಗಳು
Advertisement
ಈಗ ನ್ಯೂಸ್ ಇನ್ ಡಿಟೈಲ್ ಈಕ್ವಿಟಿ ಫಂಡ್ಸ್
1. ಗ್ರೋಥ್ ಫಂಡ್
ಹೆಸರೇ ಸೂಚಿಸುವಂತೆ ಈ ರೀತಿಯ ಫಂಡುಗಳ ಉದ್ದೇಶ ಬೆಳವಣಿಗೆಯೇ ಆಗಿದೆ. ಅತ್ಯಧಿಕ ಬೆಳವಣಿಗೆಯ ಉದ್ದೇಶದಿಂದ ಇವುಗಳು ಬಹುತೇಕ ಶೇರು ಅಥವ ಈಕ್ವಿಟಿಯಲ್ಲಿ ಹೂಡಿಕೆ ಮಾಡುತ್ತವೆ. ಜಾಸ್ತಿ ಬೆಳವಣಿಗೆ ಜಾಸ್ತಿ ರಿಸ್ಕ್ನೊಂದಿಗೆ ಬರುತ್ತದೆ ಮತ್ತು ಎಲ್ಲಾ ಬಾರಿಯೂ ಉದ್ದೇಶ ಸಫಲವಾಗುತ್ತದೆ ಎಂದೇನೂ ಇಲ್ಲ. ಮಾರುಕಟ್ಟೆ ಏರಿದರೆ ಬೆಳವಣಿಗೆ ಬರುತ್ತದೆ ಹಾಗೂ ಮಾರುಕಟ್ಟೆ ಕುಸಿದರೆ ಫಂಡ್ ಮೌಲ್ಯವೂ ಕುಸಿಯುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯ. 2. ಇಂಡೆಕ್ಸ್ ಫಂಡ್
ಸೆನ್ಸೆಕ್ಸ್ ಅಥವಾ ನಿಫ್ಟಿ ಇತ್ಯಾದಿ ಮಾರುಕಟ್ಟೆ ಸಂವೇದಿ ಸೂಚ್ಯಂಕಗಳನ್ನು ತೋರುವ ಶೇರುಗಳಲ್ಲಿ ಮೂಲ ಸೂಚ್ಯಂಕದಲ್ಲಿರುವ ಶೇರುಗಳಲ್ಲಿ ಅದೇ ಅನುಪಾತದಲ್ಲಿಯೇ ಹೂಡಿ ಸೂಚ್ಯಂಕಗಳನ್ನು ಹಾಗೆಯೇ ಡುಪ್ಲಿಕೇಟ್ ಮಾಡುವ ಫಂಡುಗಳಿವು. ಉದಾಹರಣೆಗೆ 30 ಶೇರುಗಳ ಬಾಂಬೆ ಸೆನ್ಸೆಕ್ಸ್‌ನ ಇಂಡೆಕ್ಸ್ ಫಂಡ್ ಅದೇ 30 ಶೇರುಗಳಲ್ಲಿ ಅದೇ ಮೂಲ ಅನುಪಾತದಲ್ಲಿ ಹೂಡುತ್ತವೆ. ಇಂಡೆಕ್ಸ್ ಫಂಡುಗಳು “ಪಾಸ್ಸಿವ್’ ಫಂಡುಗಳಾಗಿ ಇರುತ್ತವೆ. ಅವುಗಳಲ್ಲಿ ಮಾರುಕಟ್ಟೆ ಏರಿಳಿದಂತೆ ಫಂಡ್ ಮ್ಯಾನೇಜರರು ಕೊಡಕೊಳ್ಳುವಿಕೆ ನಡೆಸುವುದಿಲ್ಲ. ತೆಪ್ಪಗಿರುತ್ತಾರೆ. ಹಾಗಾಗಿ ಇವುಗಳ ಫಂಡ್ ಫೀ ಕೂಡಾ ಸುಮಾರು ಅರ್ಧದಷ್ಟು ಕಡಿಮೆ. 3. ಸೆಕ್ಟರ್ ಫಂಡ್
ಈ ಫಂಡುಗಳ ಉದ್ದೇಶ ಪೂರ್ವ ನಿಯೋಜಿತ ಆರ್ಥಿಕ ಕ್ಷೇತ್ರ ಅಥವ ಸೆಕ್ಟರುಗಳಲ್ಲಿ ಮಾತ್ರ ಹೂಡುವುದು. ಉದಾ: ಸಾಫೆಫ್ಟ್ವೇರ್ ಫಂಡ್, ಇನ್‌ಫ್ರಾಸ್ಟ್ರಕ್ಚರ್ ಫಂಡ್, ಬ್ಯಾಂಕಿಂಗ್ ಫಂಡ್ ಇತ್ಯಾದಿ. ಒಮ್ಮೆ ಆರಂಭಗೊಂಡರೆ ಹೂಡಿಕೆ ಆ ಸೆಕ್ಟರ್‌ಗೆ ಮಾತ್ರ ಸೀಮಿತ; ಬದಲಾಯಿಸುವಂತಿಲ್ಲ. ಇದರಲ್ಲಿ ರಿಸ್ಕ್ ಜಾಸ್ತಿ. ಉತ್ತಮ ಬೆಳವಣಿಗೆಯ ಸೆಕ್ಟರ್‌ಗಳು ಸಿಕ್ಕಿಬಿಟ್ಟರೆ ಉತ್ತಮ ಇಲ್ಲದಿದ್ದರೆ ಕಷ್ಟ. ಒಂದೇ ಸೆಕ್ಟರ್‌ನ ಭವಿಷ್ಯದಿಂದ ನಾವು ಬಾಧಿತರಾಗುತ್ತೇವೆ. 4. ಡೈವರ್ಸಿಫೈಡ್ ಈಕ್ವಿಟಿ ಫಂಡ್
ಈ ಫಂಡು ಯಾವುದೇ ನಿರ್ದಿಷ್ಟ ಕ್ಷೇತ್ರಕ್ಕೆ ಸೀಮಿತವಾಗದೆ ವೈವಿದ್ಯಮಯವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹೂಡುತ್ತವೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಅವುಗಳ ಬೆಳವಣಿಗೆಯನ್ನು ಹೊಂದಿಕೊಂಡು ಬೇಕಾದಂತೆ ಹೂಡುವ ಮತ್ತು ಅದನ್ನು ಬೇಕಾದಂತೆ ಬದಲಾಯಿಸುವ ಈ ಸೌಕರ್ಯಕ್ಕಾಗಿಯೇ ಇವುಗಳು ಇಂದು ಅತ್ಯಂತ ಜನಪ್ರಿಯವಾಗಿವೆ. 5. ಲಾರ್ಜ್ ಕ್ಯಾಪ್/ಮಿಡ್ ಕ್ಯಾಪ್/ಸ್ಮಾಲ್ ಕ್ಯಾಪ್ ಫಂಡ್
ಯಾವುದೇ ಒಂದು ಕಂಪೆನಿಯ ಒಟ್ಟು ಮಾರುಕಟ್ಟೆ ಮೌಲ್ಯವನ್ನು ಮಾರ್ಕೆಟ್ ಕ್ಯಾಪಿಟಲೈಸೇಶನ್ ಅನ್ನುತ್ತಾರೆ. ಈ ರೀತಿ ಕಂಪೆನಿಗಳನ್ನು ಲಾರ್ಜ್ ಕ್ಯಾಪ್ ( ರೂ. 2500 ಕೋಟಿಗೆ ಮೀರಿ) , ಮಿಡ್ ಕ್ಯಾಪ್ (ರೂ. 500 ರಿಂದ ರೂ. 2500 ಕೋಟಿ) ಹಾಗೂ ಸ್ಮಾಲ್ ಕ್ಯಾಪ್ (ರೂ. 500 ಕೋಟಿಗಿಂತ ಕಡಿಮೆ) ಎಂದು ವಿಂಗಡಿಸಬಹುದು. ಹಲವು ಫಂಡುಗಳು ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಶೇರುಗಳಲ್ಲಿ ಮಾತ್ರವೇ ಅದೇ ಹೆಸರಿನಿಂದ ಹೂಡಿಕೆ ಮಾಡುತ್ತವೆ. 6. ಈಕ್ವಿಟಿ ಓರಿಯೆಂಟೆಡ್ ಮ್ಯೂಚುವಲ್ ಫಂಡ್
ಆದಾಯಕರ ಇಲಾಖೆಯ ಶಬ್ದಕೋಶದಲ್ಲಿ ಕೆಲವು ಕ್ಯಾಪಿಟಲ್ ಗೈನ್ಸ್ ಕರ ವಿನಾಯತಿಗಳಿಗೆ ಅರ್ಹವಾಗಬೇಕಾದರೆ ಒಂದು ಮ್ಯೂಚುವಲ್ ಫಂಡ್ ಈಕ್ವಿಟಿ ಓರಿಯೆಂಟೆಡ್ ಮ್ಯೂಚುವಲ್ ಫಂಡ್ ಆಗಿರಬೇಕಾದದ್ದು ಅತಿಮುಖ್ಯ. ಅಂದರೆ ಆ ಫಂಡಿನ ಧನದ ಕನಿಷ್ಟ ಶೇ.65 ಈಕ್ವಿಟಿಯಲ್ಲಿ ಹೂಡಿರಬೇಕು. ಅಂತಹ ಅರ್ಹ ಫಂಡುಗಳಿಗೆ ಇತರ ಶೇರುಗಳಂತೆಯೇ 1 ವರ್ಷಕ್ಕೆ ಮೀರಿದ ದೀರ್ಘಕಾಲಿಕ ಕ್ಯಾಪಿಟಲ್ ಗೈನ್ ಶೂನ್ಯ ಹಾಗೂ 1 ವರ್ಷಕ್ಕೆ ಕಡಿಮೆ ಹೂಡಿದ ಅಲ್ಪಕಾಲಿಕ ಕ್ಯಾಪಿಟಲ್ ಗೈನ್ಸ್ ಶೇ.15 ಮಾತ್ರ ಆಗಿರುತ್ತದೆ. ಇದು ನಾರ್ಮಲ್ ಕ್ಯಾಪಿಟಲ್ ಗೈನ್ಸ್‌ಗಿಂತ ಕಡಿಮೆ. 7. ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್
ಆದಾಯಕರದ ಶಬ್ದಕೋಶದಲ್ಲಿ ಎಲ್ಲಾ ಮ್ಯೂಚುವಲ್ ಫಂಡುಗಳಿಗೂ ಸೆಕ್ಷನ್ 80 ಸಿ ಅಡಿಯಲ್ಲಿ ರೂ. 1 ಲಕ್ಷದವರೆಗೆ ಹೂಡಿಕೆಯ ಆಧಾರದಲ್ಲಿ ಕರ ವಿನಾಯತಿ ಇರುವುದಿಲ್ಲ. ಉಔಖಖಎಂದು ಕರೆಯಲ್ಪಡುವ, ಆ ರೀತಿ ನೋಟಿಫೈ ಆಗಿರುವ ಫಂಡುಗಳು ಮಾತ್ರ ಈ ವಿನಾಯತಿಗೆ ಅರ್ಹ. ಕರ ವಿನಾಯತಿಯಲ್ಲಿ ಆಸಕ್ತರು ಹೂಡುವ ಮೊದಲು ಈ ಮಟ್ಟಿಗೆ ಜಾಹೀರಾತುಗಳನ್ನು ಸರಿಯಾಗಿ ಗಮನಿಸಿಕೊಳ್ಳಬೇಕು. 8. ಥಿಮಾಟಿಕ್ ಫಂಡ್/ಅಪಾರ್ಚುನಿಟಿ ಫಂಡ್
ಆರ್ಥವ್ಯವಸ್ಥೆಯಲ್ಲಿ ಯಾವುದಾದರೊಂದು ಥೀಮ್ ಅಥವ ಅವಕಾಶವನ್ನು ನೋಡಿಕೊಂಡು ಹೂಡಿಕೆಯನ್ನು ಮಾಡುವಂತಹ ಫಂಡುಗಳಿಗೆ ಅಪಾರ್ಚುನಿಟಿ ಫಂಡ್ ಅಂತಲೂ ಹೆಸರಿದೆ. ದೇಶದ ಆರ್ಥಿಕ ಆಗುಹೋಗುಗಳನ್ನು ಪೂರ್ವಭಾವಿಯಾಗಿ ಊಹಿಸಿ ಅದರಿಂದ ಉಂಟಾಗಬಹುದಾದ ಮಾರುಕಟ್ಟೆಯ ಏರಿಳಿತಗಳ ಲಾಭ ಪಡೆಯುವುದು ಈ ಫಂಡುಗಳ ಉದ್ದೇಶವಾಗಿದೆ. ಉದಾ, ಮಾನ್ಸೂನ್ ಚೆನ್ನಾಗಿದೆ, ಬೆಳೆ ಚೆನ್ನಾಗಿ ಬರಬಹುದು, ಆದ್ದರಿಂದ ಆ ಸಂದರ್ಭದಲ್ಲಿ ಕೀಟನಾಶಕ ಕಂಪೆನಿಗಳ ಶೇರುಗಳನ್ನು ಖರೀದಿಸುವುದು ಅಥವಾ ಸೋಪ್, ಶಾಂಪೂ ಕಂಪೆನಿಗಳ ಶೇರುಗಳನ್ನು ಖರೀದಿಸುವುದು ಇತ್ಯಾದಿ ಥಿಮಾಟಿಕ್ ಫಂಡುಗಳು ಮಾಡುವ ಕೆಲಸ. 9. ಕಾಂಟ್ರಾ ಫಂಡ್
ಇದೂ ಕೂಡಾ ಒಂದು ಡೈವರ್ಸಿಫೈಡ್ ಫಂಡ್. ಆದರೆ ಮಾರುಕಟ್ಟೆಯಲ್ಲಿ ತನ್ನ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಸಿಗುವ ಶೇರುಗಳಲ್ಲಿ ಹೂಡುವ ಫಂಡ್. ಕ್ರಮೇಣ ಮಾರುಕಟ್ಟೆ ಈ ಶೇರುಗಳ ಆಂತರಿಕ ಮೌಲ್ಯ ಗುರುತಿಸಿದಾಗ ಅವುಗಳ ಬೆಲೆಯೇರುತ್ತವೆ ಎಂಬುದು ಇದರ ಹಿಂದಿರುವ ತತ್ವ. ಇದು ವ್ಯಾಲ್ಯೂ ಇನ್ವೆಸ್ಟಿಂಗ್ ಸೂತ್ರವನ್ನು ಅವಲಂಬಿಸಿದೆ. 10. ಇ.ಟಿ.ಎಫ್
ಮಾರುಕಟ್ಟೆಯಲ್ಲಿ ಇತರ ಶೇರುಗಳಂತೆ ಮಾರಾಟವಾಗಬಹುದಾದ ಇಂಡೆಕ್ಸ್ ಫಂಡುಗಳೇ ಇವು. ಬರೀ ಇಂಡೆಕ್ಸ್ ಫಂಡ್ ಅನ್ನು ಈ ರೀತಿ ಮಾರಾಟ ಮಾಡಲು ಬರುವುದಿಲ್ಲ. ಅವುಗಳನ್ನು ದಿನಾಂತ್ಯದ ಎನ್.ಎ.ವಿ ಗೆ ಮರು ಖರೀದಿಗೆ ಹಾಕಬೇಕಷ್ಟೆ. ಆದರೆ ಇ.ಟಿ.ಎಫ್ನಲ್ಲಿ ಯಾವುದೇ ಕ್ಷಣಕ್ಕೆ ಬೇಕಾದರೂ ಮಾರುಕಟ್ಟೆಯಲ್ಲಿ ಇನ್ನೊಬ್ಬರಿಗೆ ಪ್ರಚಲಿತ ಬೆಲೆಯಲ್ಲಿ ಮಾರಾಟ ಮಾಡಬಹುದು. ಡೆಟ್ ಫಂಡ್ಸ್
1.ಇನ್‌ಕಮ್ ಫಂಡ್/ಡೆಟ್ ಓರಿಯೆಂಟೆಡ್ ಫಂಡ್
ಈ ಫಂಡುಗಳ ಉದ್ದೇಶ ರೆಗ್ಯುಲರ್ ಹಾಗೂ ಸ್ಥಿರ ಆದಾಯವನ್ನು ನೀಡುವುದೇ ಆಗಿದೆ. ಹಾಗಾಗಿ ಅಂತಹ ಫಂಡುಗಳು ಬಹುತೇಕ ನಿಗದಿತ ಆದಾಯದ ಸಾಲಪತ್ರಗಳಲ್ಲಿ (ಡೆಟ್) ಹೂಡಿಕೆ ಮಾಡುತ್ತವೆ. ಸರಕಾರಿ ಸಾಲಪತ್ರಗಳು (ಗವರ್ನಮೆಂಟ್ ಸೆಕ್ಯುರಿಟೀಸ್ ಅಥವ ಜಿ ಸೆಕ್) ಸರಕಾರಿ ಕ್ಷೇತ್ರದ ಬಾಂಡುಗಳು (ಪಿ.ಎಸ್.ಯು ಬಾಂಡ್) ಖಾಸಗಿ ಕ್ಷೇತ್ರದ ಡಿಬೆಂಚಗರ್‌ಗಳು, ಮನಿ ಮಾರ್ಕೆಟ್ ಪತ್ರಗಳು ಇತ್ಯಾದಿಗಳಲ್ಲಿ ಈ ರೀತಿ ನಿಯಮಿತವಾಗಿ ಆದಾಯ ಬರುತ್ತವೆ. ಕೆಲವೆಡೆ ರಿಸ್ಕ್ ಏನೇನೂ ಇಲ್ಲವಾದರೆ ಕೆಲವೆಡೆ ಕಡಿಮೆ ರಿಸ್ಕ್. 2. ಮಂತ್ಲಿ ಇನ್‌ಕಮ್ ಪ್ಲಾನ್
ಪ್ರತಿ ತಿಂಗಳೂ ಆದಾಯ ನೀಡಬೇಕೆಂಬ ಉದ್ದೇಶದಿಂದ ಆರಂಭಗೊಳ್ಳುವ ಈ ಸ್ಕೀಮುಗಳು ಮೂಲತಃ ಒಂದು ಡೆಟ್ ಫಂಡ್. ಆದಷ್ಟು ಭದ್ರವಾಗಿ ನಿರಂತರ ಆದಾಯಕ್ಕಾಗಿ ಜಾಸ್ತಿ ಡೆಟ್ ಇರುವ ಫಂಡುಗಳು. ಇವುಗಳಲ್ಲಿ ಪ್ರತಿ ತಿಂಗಳೂ ಆದಾಯ ಬರುವ ಯಾವುದೇ ಗ್ಯಾರಂಟಿ ಇರುವುದಿಲ್ಲ. ಪ್ರತಿಫಲ ಮಾರುಕಟ್ಟೆಯಲ್ಲಾಗುವ ಸಾಧನೆಯನ್ನು ಅವಲಂಭಿಸಿರುತ್ತದೆ. 3. ಲಿಕ್ವಿಡ್ ಫಂಡ್/ಮನಿ ಮಾರ್ಕೆಟ್ ಫಂಡ್
ದ್ರವ್ಯತೆ ಅಥವ ಬೇಕಾದಂತೆ ನಗದೀಕರಿಸಿಕೊಳ್ಳಲು ದುಡ್ಡನ್ನು ಅಲ್ಪಕಾಲಿಕ ಮನಿ ಮಾರ್ಕೆಟ್ ಸಲಕರಣೆಗಳಲ್ಲಿ ಹಾಕಬೇಕಾಗುತ್ತದೆ. ಟ್ರೆಜರಿ ಬಿಲ್ಟ್, ಸರ್ಟಿಫಿಕೇಟ್ ಆಫ್ ಡೆಪಾಸಿಟ್, ಕಮರ್ಶಿಯಲ್ ಪೇಪರ್, ಅಂತರ್‌ಬ್ಯಾಂಕ್ ಕಾಲ್ ಮನಿ, ಇವೇ ಅಂತಹ ಮನಿ ಮಾರ್ಕೆಟ್ ಸಲಕರಣೆಗಳು. ಇವುಗಳಲ್ಲಿ ರಿಸ್ಕ್ ಅಥವ ಏರುಪೇರು ಕಡಿಮೆ ಆದರೆ ಪ್ರತಿಫಲವೂ ಕಡಿಮೆ. ಹೆಚ್ಚಾಗಿ ಕಂಪೆನಿಗಳು ಮತ್ತು ಧನವಂತ ವ್ಯಕ್ತಿಗಳು ತಮ್ಮ ಹೆಚ್ಚಿನ ದುಡ್ಡನ್ನು ಅಲ್ಪ ಕಾಲಕ್ಕಾಗಿ ಇಂತಹ ಫಂಡುಗಳಲ್ಲಿ ಹೂಡುತ್ತಾರೆ. 4. ಗಿಲ್ಟ್ ಫಂಡ್
ಗಿಲ್ಟ್ ಅಂದರೆ ಗವರ್ನಮೆಂಟ್ ಸೆಕ್ಯೂರಿಟಿ ಅಂದರೆ ಜಿ ಸೆಕ್ ಅಥವ ಸರಕಾರೀ ಸಾಲ ಪತ್ರಗಳು ಅತ್ಯಂತ
ಭದ್ರವಾದವುಗಳು. ಇದರಲ್ಲಿ ಸರಕಾರ ಹಿಂದಿರುಗಿಸದೆ ಇರುವ ರಿಸ್ಕ್ ಇಲ್ಲವೆ ಇಲ್ಲ. ಆದರೆ ಬಡ್ಡಿದರ ಏರಿಳಿದಂತೆ ಇದರಲ್ಲಿ
ಪ್ರತಿಫಲವು ಏರಿಳಿಯುತ್ತದೆ. ಬಡ್ಡಿದರ ಏರಿದರೆ ಈ ಫಂಡುಗಳ ಮಾರುಕಟ್ಟೆಯ ಬೆಲೆ ಇಳಿಯುತ್ತದೆ ಹಾಗೂ ಬಡ್ಡಿದರ ಇಳಿದರೆ ಇವುಗಳ ಬೆಲೆ ಏರುತ್ತದೆ. 5. ಫಿಸ್ಡ್ ಮೆಚುರಿಟಿ ಪ್ಲಾನ್
ಒಂದು ಓಪನ್ ಎಂಡೆಡ್ ಗಿಲ್ಟ್ ಫಂಡ್ ಬಡ್ಡಿದರಗಳ
ಏರಿಳಿತಕ್ಕೆ ಸಿಲುಕಿ ಹಾಕಿಕೊಳ್ಳುವುದರಿಂದ ಒಂದು ನಿರ್ದಿಷ್ಟ
ಅವಧಿಗೆ ಅಂತ್ಯಗೊಳ್ಳುವ ಫಂಡುಗಳು ಈಗೀಗ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿವೆ. ಇವು ನಿರ್ದಿಷ್ಟ ಅವಧಿಗೆ (3,6,12,36 ಇತ್ಯಾದಿ ತಿಂಗಳುಗಳು) ಅಂತ್ಯಗೊಳ್ಳುವ ಕ್ಲೋಸ್ಡ್ ಎಂಡೆಡ್ ಫಂಡುಗಳು. ಹೈಬ್ರಿಡ್ ಫಂಡ್ಸ್
1.ಬ್ಯಾಲನ್ಸ್ ಫಂಡ್
ಬೆಳವಣಿಗೆ ಮತ್ತು ನಿರಂತರ ಆದಾಯಗಳೆರಡೂ (ಗ್ರೋಥ್ ಮತ್ತು ಇನ್‌ಕಂ) ಈಕ್ವಿಟಿ ಮತ್ತು ಸಾಲಪತ್ರಗಳೆರಡರಲ್ಲೂ
ಮಿಶ್ರವಾಗಿ ಹೂಡಿಕೆ ಮಾಡುವುದೇ ಹೈಬ್ರಿಡ್ ಫಂಡುಗಳ ಉದ್ದೇಶ. ಶೇರು ಮತ್ತು ಸಾಲಪತ್ರಗಳ ಮಿಶ್ರಣದ ಅನುಪಾತ ಫಂಡ್ ಆರಂಭದ ಮೊದಲೇ ನಿಕ್ಕಿಯಾಗಿರುತ್ತದೆ. ಅದನ್ನು ಹೊಂದಿಕೊಂಡು ಅವುಗಳ ರಿಸ್ಕ್ ಮತ್ತು ರಿಟರ್ನ್ ಹೆಚ್ಚುಕಡಿಮೆಯಾಗುತ್ತದೆ. ಜಾಸ್ತಿ ಈಕ್ವಿಟಿ ಇದ್ದಷ್ಟು ಜಾಸ್ತಿ ರಿಸ್ಕ್ ಮತ್ತು ಪ್ರತಿಫಲದ ಸಾಧ್ಯತೆ, ಕಡಿಮೆ ಇದ್ದಷ್ಟು ಭದ್ರತೆ ಜಾಸ್ತಿ, ಪ್ರತಿಫಲವೂ ಕಡಿಮೆ. ಒಂದು
ಬ್ಯಾಲನ್ಸ್ ಫಂಡ್ ಸರಿಸುಮಾರು ಮಧ್ಯಮ ರಿಸ್ಕ್ ಮತ್ತು ಪ್ರತಿಫಲದ ಉದ್ದೇಶ ಹೊಂದಿದ್ದು ಹೆಚ್ಚಾಗಿ ಶೇ. 40 ಈಕ್ವಿಟಿ ಮತ್ತು ಶೇ. 60 ಸಾಲಪತ್ರಗಳಲ್ಲಿ ತೊಡಗಿಸಿಕೊಳ್ಳುತ್ತದೆ. ಸ್ಪೆಶಲ್ ಫಂಡುಗಳು
ಇವೆಲ್ಲ ಅಲ್ಲದೆ ಇನ್ನೂ ಕೆಲವು ಸ್ಪೆಶಲ್ ಫಂಡುಗಳಿವೆ. ಮೂಲಧನವನ್ನು ಕಾಪಿಡುವ ಕ್ಯಾಪಿಟಲ್ ಪೊ›ಟೆಕ್ಷನ್ ಫಂಡ್, ಚಿನ್ನದಲ್ಲಿ ಮಾತ್ರವೇ ಹೂಡುವ ಗೋಲ್ಡ್ ಇ.ಟಿ.ಎಫ್, ಹೊರದೇಶಗಳಲ್ಲಿ ಹೂಡುವ ವಿದೇಶಿ ಫಂಡ್, ಬೇರೆ ಬೇರೆ ಫಂಡುಗಳಲ್ಲಿ ಹೂಡುವ ಫಂಡ್ ಆಫ್ ಫಂಡ್ಸ್ ಇತ್ಯಾದಿ ಇತ್ಯಾದಿ. . . . ಜಯದೇವ ಪ್ರಸಾದ ಮೊಳೆಯಾರ