Advertisement

150 ಜನರಿದ್ದ ಇಥಿಯೋಪಿಯಾ ವಿಮಾನ ಪತನ

09:46 AM Mar 10, 2019 | |

ನವದೆಹಲಿ: ಇಥಿಯೋಪಿಯಾದ ರಾಜಧಾನಿ ಅಡೀಸ್‌ ಅಬಾಬಾದಿಂದ ನೈರೋಬಿಗೆ ಸಾಗುತ್ತಿದ್ದ ಬೋಯಿಂಗ್‌ 737 -800 ಮ್ಯಾಕ್ಸ್‌ ಇಥಿಯೋಪಿಯನ್‌ ಪ್ರಯಾಣಿಕರ ವಿಮಾನವೊಂದು ಪತನಗೊಂಡಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ. ಈ ವಿಮಾನದಲ್ಲಿ 150 ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಗಳಿದ್ದರೆಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಈ ಪ್ರಯಾಣಿಕರ ವಿಮಾನವು ಪತನಗೊಂಡಿರುವುದನ್ನು ಇಥಿಯೋಪಿಯಾದ ಪ್ರಧಾನಮಂತ್ರಿಗಳ ಕಾರ್ಯಾಲಯವು ದೃಢಪಡಿಸಿದೆ ಮತ್ತು ವಿಮಾನದಲ್ಲಿ ಪ್ರಯಾನಿಸುತ್ತಿದ್ದವೆರೆಲ್ಲಾ ಸಾವಿಗೀಡಾಗಿರಬಹುದಾದ ಭೀತಿಯನ್ನು ಅದು ವ್ಯಕ್ತಪಡಿಸಿದೆ.

Advertisement

ಇಥಿಯೋಪಿಯಾದ ರಾಜಧಾನಿಯಿಂದ 62 ಕಿಲೋಮೀಟರ್‌ ಗಳಷ್ಟು ದೂರದಲ್ಲಿರುವ ಬಿಶೋಫ್ತು ಎಂಬಲ್ಲಿ ಈ ವಿಮಾನವು ಪತನಗೊಂಡಿದೆ ಎನ್ನಲಾಗುತ್ತಿದೆ. ‘ಅಡೀಸ್‌ ಅಬಾಬಾದಿಂದ ಸ್ಥಳೀಯ ಕಾಲಮಾನ 8.38ಕ್ಕೆ ಪ್ರಯಾಣ ಬೆಳೆಸಿದ್ದ ಬೋಯಿಂಗ್‌ 737 -800 ಮ್ಯಾಕ್ಸ್‌ ವಿಮಾನವು 8.44ರ ಸುಮಾರಿಗೆ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ಈ ವಿಮಾನದಲ್ಲಿ 149 ಪ್ರಯಾಣಿಕರು ಮತ್ತು 8ಜನ ಸಿಬ್ಬಂದಿಗಳಿದ್ದರೆಂದು ನಂಬಲಾಗುತ್ತಿದೆ. ದುರ್ಘ‌ಟನಾ ಸ್ಥಳದಲ್ಲಿ ಪರಿಹಾರ ಮತ್ತು ಹುಡುಕಾಟ ಕಾರ್ಯಾಚರಣೆ ಭರದಿಂದ ಸಾಗಿದೆ’ ಎಂದು ಇಥಿಯೋಪಿಯನ್‌ ಏರ್‌ ಲೈನ್ಸ್‌ ತಾನು ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next