Advertisement

Moral Police: ಯುವಕನ ಮೇಲೆ ಹಲ್ಲೆ: ಬೆಳಗಾವಿಯಲ್ಲಿ ಪೊಲೀಸ್ ನೈತಿಕಗಿರಿ

11:01 PM Jan 06, 2024 | Team Udayavani |

ಬೆಳಗಾವಿ: ನಗರದ ಕೋಟೆ ಕೆರೆ ಆವರಣದಲ್ಲಿ ಕುಳಿತಿದ್ದ ಹುಡುಗ ಹುಡುಗಿಯನ್ನು ನೋಡಿ ಅನ್ಯ ಕೋಮಿನ ಕೆಲ ಪುಂಡರು ಮೂರು ಗಂಟೆಗಳ ಕಾಲ ಶನಿವಾರ ಹಲ್ಲೆ ಮಾಡುವ ಮೂಲಕ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ದಾರೆ.

Advertisement

ಯುವನಿಧಿ ಅರ್ಜಿ ಹಾಕಲು ಹುಡುಗ ಹುಡುಗಿ ಬಂದಿದ್ದರು. ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ಕಿಲ್ಲಾ ಕೆರೆಯಲ್ಲಿ‌ ಕುಳಿತಿದ್ದರು. ಸುಮಾರು 15ಕ್ಕೂ ಅಧಿಕ ಪುಂಡರು ದಾಳಿ ಮಾಡಿ ಪ್ರಶ್ನಿಸಿದ್ದಾರೆ. ಆಗ ಅಲ್ಲಿಂದ ಈ ಇಬ್ಬರನ್ನು ಬಲವಂತವಾಗಿ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ.

ಯುವಕ ಸಮೀಪದ ಯಮನಾಪುರ ಬಳಿಯ ಗೌಂಡವಾಡ ಗ್ರಾಮದವನು ಎಂದು ತಿಳಿದು ಬಂದಿದ್ದು, ಪೋಷಕರು 112ಗೆ ಕರೆ ಮಾಡಿ ಮಾಹಿತಿ ನೀಡಿ ಪೊಲೀಸರು ಲೋಕೇಶನ ಟ್ರೇಸ್ ಮಾಡಿ ಸ್ಥಳಕ್ಕೆ ಬಂದಿದ್ದಾರೆ.

ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಾತ್ರಿ ವರೆಗೂ ಪ್ರಕರಣ ದಾಖಲಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next