Advertisement

ಶೀಘ್ರದಲ್ಲೇ Ethanol ಚಾಲಿತ ವಾಹನಗಳು ಮಾರುಕಟ್ಟೆಗೆ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಾಹಿತಿ

09:42 PM Jun 26, 2023 | Team Udayavani |

ಮುಂಬೈ: ಸಂಪೂರ್ಣವಾಗಿ ಎಥೆನಾಲ್‌ನಿಂದಲೇ ಚಲಿಸುವ ವಾಹನಗಳನ್ನು ಪರಿಚಯಿಸಬೇಕೆಂಬ ಕೇಂದ್ರ ಸರ್ಕಾರದ ಆಶಯ ಸದ್ಯದಲ್ಲೇ ಸಾಕಾರಗೊಳ್ಳಲಿದೆ. ಹೀಗೆಂದು ಸ್ವತಃ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರೇ ಹೇಳಿದ್ದಾರೆ.

Advertisement

ಸದ್ಯದಲ್ಲೇ ಎಥೆನಾಲ್‌ನಿಂದಲೇ ಸಂಪೂರ್ಣವಾಗಿ ಸಂಚರಿಸಬಲ್ಲಂಥ ವಾಹನಗಳನ್ನು ಭಾರತದ ಮಾರುಕಟ್ಟೆಗೆ ಬಿಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ನಾವು ಈಗ ಎಥೆನಾಲ್‌ನಿಂದಲೇ ಚಲಿಸುವ ಹೊಸ ವಾಹನಗಳನ್ನು ಪರಿಚಯಿಸಲಿದ್ದೇವೆ. ಬಜಾಜ್‌, ಟಿವಿಎಸ್‌ ಮತ್ತು ಹೀರೋ ಸ್ಕೂಟರ್‌ಗಳು ಶೇ.100ರಷ್ಟು ಎಥೆನಾಲ್‌ನಿಂದಲೇ ಸಂಚರಿಸಲಿವೆ. ಆಗಸ್ಟ್‌ನಲ್ಲಿ ನಾನು ಸಂಪೂರ್ಣವಾಗಿ ಎಥೆನಾಲ್‌ ಮೂಲಕ ಚಲಿಸುವ ಟೊಯೊಟಾ ಕಂಪನಿಯ ಕ್ಯಾಮ್ರಿ ಕಾರನ್ನು ಬಿಡುಗಡೆ ಮಾಡುತ್ತೇನೆ. ಅದು ಶೇ.40ರಷ್ಟು ವಿದ್ಯುತ್ಛಕ್ತಿಯನ್ನೂ ಉತ್ಪತ್ತಿ ಮಾಡುತ್ತದೆ ಎನ್ನುವುದು ವಿಶೇಷ’ ಎಂದಿದ್ದಾರೆ.

ಎಥೆನಾಲ್‌ನ ದರ 60ರೂ.ಗಳಾದರೆ, ಲೀ.ಪೆಟ್ರೋಲ್‌ ದರ 120 ರೂ.ಗಳು. ಅಲ್ಲದೆ, ಎಥೆನಾಲ್‌ ವಾಹನ ಶೇ.40ರಷ್ಟು ವಿದ್ಯುತ್ಛಕ್ತಿಯನ್ನೂ ಉತ್ಪತ್ತಿ ಮಾಡುತ್ತದೆ ಎಂದೂ ಗಡ್ಕರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next