Advertisement

ಗಂಟಲು ದ್ರವ ಪರೀಕ್ಷೆ ಕೇಂದ್ರ ಸ್ಥಾಪನೆ

04:22 PM Apr 14, 2020 | mahesh |

ಮಹಾಲಿಂಗಪುರ: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ| ಗುರುನಾಥ ಕಗಲಗೊಂಬ ತಿಳಿಸಿದ್ದಾರೆ. ಸೋಮವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಇಲ್ಲಿ ಪಡೆದ ಗಂಟಲು ದ್ರವವನ್ನು ಬಾಗಲಕೋಟೆ ಕೇಂದ್ರಕ್ಕೆ ಕಳುಹಿಸಲಾಗುವುದು. ಅಲ್ಲಿಂದ ಬೆಂಗಳೂರಿಗೆ ಕಳುಹಿಸುವರು. ಈ ಮುಂಚೆ ರಾಜಸ್ಥಾನಕ್ಕೆ ಹೋಗಿ ಬಂದಿದ್ದ ಮಹಾಲಿಂಗಪುರದ 11 ಜನರು ಹಾಗೂ ಕೆಂಗೇರಿಮಡ್ಡಿಯ ಮದರಸಾದಲ್ಲಿದ್ದ 11 ಜನರ ಗಂಟಲು ದ್ರವ ಮುಧೋಳ ಕೇಂದ್ರದಲ್ಲಿ ಪರೀಕ್ಷೆ ಮಾಡಿ ಬಾಗಲಕೋಟೆಗೆ ಕಳುಹಿಸಲಾಗಿತ್ತು. ಇಲ್ಲಿಯವರೆಗೂ ಮಹಾಲಿಂಗಪುರ ಭಾಗದಿಂದ ಸುಮಾರು 50 ಜನರ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಅವೆಲ್ಲವೂ ನೆಗೆಟಿವ್‌ ವರದಿ ಬಂದಿವೆ ಎಂದರು.

Advertisement

ಕಂಪ್ಲಿಟ್‌ ಲಾಕ್‌ಡೌನ್‌: ರಬಕವಿ-ಬನಹಟ್ಟಿ ತಹಶೀಲ್ದಾರ್‌
ಪ್ರಶಾಂತ ಚನಗೊಂಡ ಆದೇಶದಂತೆ ಮಹಾಲಿಂಗಪುರ ಸಂಪೂರ್ಣ ಲಾಕ್‌ಡೌನ್‌ ಆಗಿ ಮೂರನೇ ದಿನಕ್ಕೆ ಮುಂದುವರಿದಿದೆ. ಬೆಳಗ್ಗೆ ಅಗತ್ಯ ವಸ್ತುಗಳಿಗಾಗಿ ಸಡಿಲಿಕೆ ಬಿಟ್ಟರೆ ಉಳಿದಂತೆ ಸಂಪೂರ್ಣ ಲಾಕ್‌ಡೌನ್‌ ಆಗಿದೆ. ಸೋಮವಾರ ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಗ್ರೇಡ್‌ 2 ತಹಶೀಲ್ದಾರ್‌ ಎಚ್‌.ಬಿ .ಕಾಂಬಳೆ ಸ್ಥಳೀಯ ಕೊರೊನಾ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯಾಧಿಕಾರಿ ಬಿ.ಆರ್‌.ಕಮತಗಿ ಇದ್ದರು.

ಮಹಾಲಿಂಗೇಶ್ವರ ಐದೇಶಿ ರದ್ದು: ಕೊರೊನಾ ಮುಂಜಾಗ್ರತೆಗಾಗಿ ಅಧಿಕಾರಿಗಳು ಮತ್ತು ಪಟ್ಟಣದ ಹಿರಿಯರ ಸಭೆ ನಡೆಸಿ ಏ. 16ರ ಐದೇಶಿ ಕಾರ್ಯಕ್ರಮ
ರದ್ದು ಪಡಿಸಲಾಗಿದೆ. ಭಕ್ತರು ಮನೆಯಲ್ಲಿಯೇ ಮಲ್ಲಯ್ಯನಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಕೊರೊನಾ ವೈರಸ್‌ ಹಾವಳಿ ಕಡಿಮೆಯಾಗಲಿ ಎಂದು ಮಹಾಲಿಂಗೇಶ್ವರ ಮತ್ತು ಮಲ್ಲಿಕಾರ್ಜುನನಲ್ಲಿ ಪ್ರಾರ್ಥಿಸಿ, ಮನೆಯಲ್ಲಿಯೇ ಇದ್ದು ಕೊರೊನಾ ತಡೆಗಟ್ಟಿರಿ ಎಂದು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸದ್ಭಕ್ತರಲ್ಲಿ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next