Advertisement

ಆರ್‌ಟಿಪಿಸಿಆರ್‌ ಲ್ಯಾಬ್‌ ಸ್ಥಾಪನೆ

10:00 AM Jul 12, 2020 | Suhan S |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರ ತವರು ಕ್ಷೇತ್ರ ಚಿಕ್ಕಬಳ್ಳಾಪುರ ಕೋವಿಡ್‌-19 ಆಸ್ಪತ್ರೆಯಲ್ಲಿ ಅತ್ಯಾಧನಿಕವಾಗಿ ಸಿದ್ಧಪಡಿಸಿರುವ ಜಿಲ್ಲಾ ವೈರಾಣು ಸಂಶೋಧನಾ ಕೇಂದ್ರ ಹಾಗೂ ರೋಗ ನಿರ್ಣಯ ಪ್ರಯೋಗಾಲಯ (ಆರ್‌ ಟಿಪಿಸಿಆರ್‌) ಸ್ಥಾಪಿಸಲಾಗಿದೆ.

Advertisement

ಏನು ಇದರ ವಿಶೇಷತೆ?: ಆರ್‌ಟಿಪಿಸಿಆರ್‌ ಪ್ರಯೋಗಾಲಯದಲ್ಲಿ 36 ಬಾರಿ ಗಾಳಿ ಬದಲಾಗುತ್ತದೆ. ಒಳಗಿರುವ ಗಾಳಿ ವಿವಿಧ ಫಿಲ್ಟರ್‌ಗಳ ಮೂಲಕ ಹೊರಗೆ ಹೋಗುತ್ತದೆ ಹಾಗೂ ಹೊರಗಿನ ತಾಜಾ ಗಾಳಿಯನ್ನು ಪ್ರಯೋಗಾಲಯ ಒಳಗೆ ಬರಲು ವಿವಿಧ ಫಿಲ್ಟರ್‌ಗಳನ್ನು ಬಳಸಲಾಗಿದೆ. ಇಲ್ಲಿನ ತಾಂತ್ರಿಕ ಸಿಬ್ಬಂದಿಗೆ ಯಾವುದೇ ರೀತಿಯಲ್ಲಿ ಸೋಂಕಿತ ಪರೀಕ್ಷೆ ನಡೆಸುವಾಗ ಸೋಂಕು ಕಾಣಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ವಿಶೇಷ. ಆರ್‌ಟಿಪಿಸಿಆರ್‌ ಲ್ಯಾಬ್‌ನಲ್ಲಿ ಪ್ರತಿ ನಾಲ್ಕು ಗಂಟೆಗೆ 100 ಹಾಗೂ ಪ್ರತಿ ದಿನಕ್ಕೆ ಕನಿಷ್ಠ 500 ಜನರಿಗೆ ಕೋವಿಡ್‌-19 ಪರೀಕ್ಷೆ ಮಾಡುವ ಸಾಮರ್ಥ್ಯವಿದೆ.

ಆರ್‌ಟಿಪಿಸಿಆರ್‌ ಪ್ರಯೋಗಾಲಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು ಕೋವಿಡ್‌-19 ಹೋರಾಟದಲ್ಲಿ ತೊಡಗಿರುವ ಜಿಲ್ಲೆಗೆ ಹೆಚ್ಚಿನ ಬಲ ಸಿಕ್ಕಿದೆ. ಪ್ರಯೋಗಾಲಯ ಸಿಬ್ಬಂದಿ ನಿರಾಂತಕವಾಗಿ ಕೆಲಸ ಮಾಡಬಹುದು. ಡಾ.ಕೆ.ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ

ಎಲ್ಲಾ ಕಡೆ ಆರ್‌ಟಿಪಿಸಿಆರ್‌ ಪ್ರಯೋಗಾಲ ಇದೆ. ಆದರೆ ಗಾಳಿಯನ್ನು ಸ್ವಚ್ಛಗೊಳಿಸುವಂತಹ ವಿನೂತನವಾದ ಪ್ರಯೋಗಾಲಯ ರಾಜ್ಯದಲ್ಲಿ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿತವಾಗಿದೆ. ಇದರಿಂದ ಪ್ರಯೋಗಾಯದಲ್ಲಿ ಸೋಂಕು ಹರಡಲು ಸಾಧ್ಯವಿಲ್ಲ ಡಾ.ರಮೇಶ್‌, ಕೋವಿಡ್‌-19 ಆಸ್ಪತ್ರೆ ಉಸ್ತುವಾರಿ.

Advertisement

Udayavani is now on Telegram. Click here to join our channel and stay updated with the latest news.

Next