Advertisement

ಗುರು ತಿಪ್ಪೇರುದ್ರಸ್ವಾಮಿರಥಕ್ಕೆ ಕಲಶ ಸ್ಥಾಪನೆ

10:52 AM Mar 19, 2019 | Team Udayavani |

ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ಜಾತ್ರೆ ಅಂಗವಾಗಿ ಸೋಮವಾರ ರಥಕ್ಕೆ ಕಲಶ ಸ್ಥಾಪನೆ ಮಾಡಲಾಯಿತು. ಮಾ. 22 ರಂದು ಜರುಗಲಿರುವ ಜಾತ್ರೆಗೆ ರಥವನ್ನು ಸಿದ್ಧಗೊಳಿಸುವ ಕಾರ್ಯದಲ್ಲಿ ಕಲಶ ಸ್ಥಾಪನೆ ಮೊದಲ ಸಾಂಪ್ರದಾಯಿಕ ಕಾರ್ಯವಾಗಿದೆ. ಈ
ಬಾರಿ ರಥದ ಹಿಂಬದಿಯ ಒಂದು ಗಾಲಿಯನ್ನು ದುರಸ್ತಿಗೊಳಿಸಲಾಗಿದೆ. ಕಳೆದ ವರ್ಷ ರಥದ ಎಲ್ಲ ಒಂಭತ್ತು ಅಂತಸ್ತುಗಳನ್ನು ಪುನರ್‌ ಜೋಡಿಸಲಾಗಿತ್ತು.

Advertisement

ಸಂಜೆ ಒಳಮಠದಿಂದ ಐದು ಅಡಿ ಎತ್ತರದ ಕಲಶವನ್ನು ಮೆರವಣಿಗೆಯ ಮೂಲಕ ತರಲಾಯಿತು. ದೇವಾಲಯದ ಸಾಂಪ್ರದಾಯಿಕ ವಾದ್ಯಗಳು, ನಂದಿಧ್ವಜ ಮೆರವಣಿಗೆಯಲ್ಲಿದ್ದವು. ಆಯಗಾರರು, ರಥವನ್ನು ಮುನ್ನಡೆಸುವವರು ಹಾಗೂ ಸಾರ್ವಜನಿಕರು ಕಲಶಕ್ಕೆ ಪೂಜೆ ಸಲ್ಲಿಸಿದರು. ಕಲಶದ ಮೇಲ್ಭಾಗ ಹಾಗೂ ಕೆಳಭಾಗವನ್ನು ಹಗ್ಗದಿಂದ ಬಿಗಿಯಲಾಗಿತ್ತು. ನಿಧಾನವಾಗಿ ಕಲಶವನ್ನು ರಥದ
ಮೇಲ್ಭಾಗಕ್ಕೆ ಒಯ್ದು ಪ್ರತಿಷ್ಠಾಪಿಸಲಾಯಿತು. ಕಲಶ ರಥದ ಮೇಲೇರುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. 

ಕಲಶ ಸ್ಥಾಪನೆಯ ಮೊದಲ ದಿನ ನಾಲ್ಕು ಸಾಲು ಬಾವುಟಗಳನ್ನು ಕಟ್ಟಲಾಯಿತು. ಕಲಶಕ್ಕೆ ಬೃಹತ್‌ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್‌, ಸದಸ್ಯರಾದ ರುದ್ರಮುನಿ, ಗೋವಿಂದರಾಜ್‌, ನಾಗಪ್ಪ, ಮುನಿಯಪ್ಪ, ಸಿಬ್ಬಂದಿ ಸತೀಶ್‌ ಮತ್ತಿತರರು ಇದ್ದರು 

Advertisement

Udayavani is now on Telegram. Click here to join our channel and stay updated with the latest news.

Next