Advertisement

ಧನ್ವಂತರಿ ಮೂರ್ತಿ ಪ್ರತಿಷ್ಠಾಪನೆ

10:44 AM Jan 13, 2019 | |

ಗೋಕರ್ಣ: ಪಂಚ ತತ್ವ, ಪಂಚ ಭೂತಗಳಿಂದ ನಾವೆಲ್ಲ ಈಭೂಮಿಗೆ ಬಂದಿದ್ದೇವೆ. ಭೂಮಿಯ ಮೇಲಿನ ಒಡೆತನ ಕೇವಲ ನಮಗಷ್ಟೇ ಸೀಮಿತ ಎಂಬ ಸ್ವಾರ್ಥ ಬೇಡ. ಬಾಳಿ ಬದುಕುವ ಎಲ್ಲ ಕುಲ ಸಂತತಿಗೂ ಎಂಬ ನಿಸ್ವಾರ್ಥತೆ ಮೂಡಿದಾಗ ಮಾತ್ರ ‘ಸರ್ವೇ ಜನಾಃ ಸುಖೀನೋ ಭವಂತುಃ’ ಎನ್ನುವ ಋಷಿಮುನಿಗಳ ತತ್ವದ ಅರಿವು ಮೂಡಲು ಸಾಧ್ಯ ಎಂದು ಶ್ರೀ ಯೋಗಾತ್ಮಾನಂದ ಸ್ವಾಮೀಜಿ ನುಡಿದರು.

Advertisement

ಇಲ್ಲಿನ ಅಶೋಕಾವನದ ‘ಸಸ್ಯ ಸಂಜೀವಿನಿ ಪಂಚಕರ್ಮ ಕೇಂದ್ರ’ದ ದೈವರಾತ ಸಭಾಭವನದಲ್ಲಿ ‘ಬ್ರಹ್ಮರ್ಷಿ ದೈವರಾತ ಜಯಂತಿ’ ಅಂಗವಾಗಿ ಶ್ರೀ ಪಶುಪತಿನಾಥ ಹಾಗೂ ಧನ್ವಂತರಿ ದೇವರ ಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು.

ಭೂಮಿ ಮೇಲಿನ ಪ್ರಕೃತಿದತ್ತವಾದ ಗಾಳಿ, ನೀರು, ಬೆಳಕು, ಹಸಿರು ಕೇವಲ ನಮಗಷ್ಟೇ ಸೀಮಿತವಲ್ಲ. ಅದು ಮುಂದಿನ ಪಶು-ಪಕ್ಷಿ ಸೇರಿದಂತೆ ಎಲ್ಲ ಜೀವಕೋಟಿಗೂ ಅವಶ್ಯ. ಇದನ್ನು ಅರಿತು ಅದನ್ನೇ ಶ್ರೀಗಳು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಹಾಗಾಗಿಯೇ ಬ್ರಹ್ಮರ್ಷಿಗಳಾದರು ಎಂದರು. ಹೊನ್ನಾವರ ಆಯುರ್ವೇದ ತಜ್ಞ ಡಾ| ಮಹೇಶ ಪಂಡಿತ ಮಾತನಾಡಿ, ಆಯುರ್ವೇದ ನಮ್ಮ ಭಾರತದ ಜೀವಾಳ. ಅದು ಇಂದು ನಶಿಸುತ್ತಿರುವ ಸಂದರ್ಭದಲ್ಲಿ ಡಾ| ಪತಂಜಲಿ ಶರ್ಮ ಉಳಿಸಿ, ಬೆಳೆಸುವಲ್ಲಿ ಬಹಳ ಶ್ರಮಿಸಿದ್ದಾರೆ. ಅದು ಜನರಿಗೆ ತಲುಪುವಂತಾದರೆ ಅವರ ಕನಸು, ಕಾಯಕ ಸಾರ್ಥಕತೆ ಪಡೆದಂತೆ ಎಂದರು.

ಬೆಂಗಳೂರಿನ ಅಶ್ವಿ‌ನಿ ಕ್ಲಿನಿಕ್‌ನ ಪ್ರಾಧ್ಯಾಪಕಿ, ದಂತವೈದ್ಯ ವಿಶಾರದೆ ಡಾ| ಕವಿತಾ, ಬೆಂಗಳೂರಿನ ಮಾನಸಾ ಆಯುರ್ವೇದ ನಿರ್ದೇಶಕಿ ಡಾ| ಅರ್ಚನಾ ಸಿ. ಹಾಗೂ ಸಾಗರದ ಆಯುರ್ವೇದ ಮಾನಸಿಕ ತಜ್ಞ ಡಾ| ನಿರಂಜನ ಹೊಸಬಾಳೆ, ಪರಿಸರ ಪ್ರೇಮಿ ಶಿವಾನಂದ ಕಳವೆ, ದೇವಶ್ರವ ಶರ್ಮ ಮಾತನಾಡಿದರು.

ಡಾ| ಸೌಮ್ಯಶ್ರೀ ಶರ್ಮ ಸ್ವಾಗತಿಸಿದರು. ಶಿಕ್ಷಕಿ ವೀಣಾ ಅಶೋಕ ಜೋಷಿ ನಿರೂಪಿಸಿದರು. ಸಸ್ಯ ಸಂಜೀವಿನಿಯ ಡಾ| ವೇದಶ್ರವ ಶರ್ಮ ಪ್ರಾಸ್ತಾವಿಕ ಮಾತನಾಡಿದರು. ಅಶ್ವಿ‌ನಿ ಕುಮಾರ ಶರ್ಮ, ವಾಗೇಶ್ವರಿ ಸಭಾಹಿತ, ರಮೇಶ ಪ್ರಸಾದ, ಶೀಲಾ, ಸುಬ್ರಹ್ಮಣ್ಯ ಮುಂತಾದವರು ಗಣ್ಯರಿಗೆ ನೆನಪಿನ ಕಾಣಿಕೆ ನೀಡಿದರು. ಡಾ| ಪತಂಜಲಿ ಶರ್ಮ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next