Advertisement

ರಬಕವಿ-ಬನಹಟ್ಟಿಯಲ್ಲಿ ಸಿಇಟಿ ಪರೀಕ್ಷಾ ಕೇಂದ್ರ ಸ್ಥಾಪಿಸಿ

09:26 AM May 26, 2020 | Suhan S |

ಬನಹಟ್ಟಿ: ರಬಕವಿ-ಬನಹಟ್ಟಿಯಲ್ಲಿ ಪಿಯು ಸಿಇಟಿ ಪರೀಕ್ಷಾ ಕೇಂದ್ರ ಸ್ಥಾಪಿಸುವುದರಿಂದ ಈ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆ ಗಮನ ನೀಡಬೇಕು ಎಂದು ಸ್ಥಳೀಯ ಮುಖಂಡ ಧರೆಪ್ಪ ಉಳ್ಳಾಗಡ್ಡಿ ಆಗ್ರಹಿಸಿದರು.

Advertisement

ಪಿಯು ಸಿಇಟಿ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿ ಶಾಸಕ ಸಿದ್ದು ಸವದಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಕೋವಿಡ್‌-19 ಈ ಸಂದರ್ಭದಲ್ಲಿ ಈ ಭಾಗದ ವಿದ್ಯಾರ್ಥಿಗಳು ಜಮಖಂಡಿಗೆ ಹೋಗಿ ಪರೀಕ್ಷೆ ಬರೆಯಬೇಕಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಮಾನಸಿಕವಾಗಿ ತೊಂದರೆ ಅನುಭವಿಸುತ್ತಾರೆ. ಅವಳಿ ನಗರದಲ್ಲಿ ಸಿಇಟಿ ಕೇಂದ್ರ ಸ್ಥಾಪಿಸಿದರೆ ಸಾಮಾಜಿಕ ಅಂತರ ಮತ್ತು ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಅನುಕೂಲವಾಗುತ್ತದೆ ಎಂದರು.

ಉದ್ದಿಮೆದಾರ ಗೋಪಾಲ ಭಟ್ಟಡ ಮಾತನಾಡಿ, ರಬಕವಿ-ಬನಹಟ್ಟಿಯಲ್ಲಿ ಸಿಇಟಿ ಕೇಂದ್ರ ಸ್ಥಾಪಿಸುವುದರಿಂದ ಮಹಾಲಿಂಗಪುರ ಮತ್ತು ತೇರದಾಳ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇಲ್ಲಿಯೂ ಕೂಡಾ ಸುಸಜ್ಜಿತ ಕಾಲೇಜುಗಳು ಇರುವುದರಿಂದ ಪರೀಕ್ಷೆ ನಡೆಸಲು ತೊಂದರೆಯಾಗುವುದಿಲ್ಲ ಎಂದರು.

ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ, ಶ್ರೀಶೈಲ ಯಾದವಾಡ, ವಿಶ್ವಜ ಕಾಡದೇವರ, ಕಿರಣ ಆಳಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next