Advertisement
ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು, ಪ್ರತಿ ಹಳ್ಳಿಗೆ ನೀರು, ವಿದ್ಯುತ್, ಡಾಂಬರ್ ರಸ್ತೆ ಬೇಕು. ಚಿಕ್ಕ ಮತ್ತು ದೊಡ್ಡ ನಗರಗಳಿಗೆ ಸಂಪರ್ಕ ನೀಡಬೇಕೆಂದು ವಾಜಪೇಯಿ ಕನಸಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಏನೂ ಅಭಿವೃದ್ಧಿಯಾಗಲಿಲ್ಲ. ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿದ್ದರಿಂದ ಕೋಟ್ಯಂತರ ನಕಲಿ ಬಿಪಿಎಲ್ ಕಾರ್ಡ್‌ಗಳು ರದ್ದಾಗಿವೆ. 2.5 ಕೋಟಿ ಗ್ಯಾಸ್ ಸಂಪರ್ಕ ಸಿಕ್ಕಿದೆ. ವಾಜಪೇಯಿ ಪೆಂಡಿಂಗ್ ಇಟ್ಟಿದ್ದನ್ನು ಮೋದಿ ಕ್ಲಿಯರ್ ಮಾಡಿದರು. 5 ಲಕ್ಷ ಜನರಿಗೆ ಮೆಡಿಕಲ್ ಇನ್ಷೊರೆನ್ಸ್ ಸಿಕ್ಕಿದೆ. ಪ್ರಾಕೃತಿಕ ವಿಕೋಪದಿಂದಾದ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ತೆಂಗು ಬೆಳೆಯಲಾಗುತ್ತಿದ್ದು ಆರ್ಥಿಕ ಭದ್ರತೆ ಒದಗಿಸುವ ಉದ್ಯಮಿಗೆ ಒತ್ತು ನೀಡಬೇಕು.
ಮುಖಂಡರಿಂದ ಪ್ರಚಾರ ನಡೆಸುತ್ತಿದ್ದೇವೆ. ತಮಿಳು ಭಾಷಿಕರು ಹೆಚ್ಚಿರುವುದರಿಂದ ರಾಧಾಕೃಷ್ಣ ಅವರನ್ನು ತಮಿಳುನಾಡಿನಿಂದ ಕರೆಸಿದ್ದೇವೆ ಜೈನ್, ಪಟೇಲ್ ಸೇರಿದಂತೆ ಮತ್ತಿತರ ಉತ್ತರ ಭಾರತದ ಜನತೆ ನಗರದಲ್ಲಿ ನೆಲೆಸಿದ್ದು ಅವರೊಟ್ಟಿಗೆ ಉತ್ತರ ಪ್ರದೇಶದ ಸಂಸದ ಶರತ್ ತ್ರಿಪಾಠಿ ನಾಲ್ಕೈದು ಸಭೆಗಳನ್ನು ಮಾಡಿದ್ದಾರೆ ಎಂದರು. ಉತ್ತರ ಪ್ರದೇಶದ ಗೋರಖ್ ಸಂತ ಕಬೀರ್ ಕ್ಷೇತ್ರದ ಸಂಸದ ಶರತ್ ತ್ರಿಪಾಠಿ ಸುದ್ದಿಗೋಷ್ಠಿಯಲ್ಲಿದ್ದರು.