Advertisement

ಶಾಲೆಯಲ್ಲಿ ಜೈವಿಕ ಗೊಬ್ಬರ ತಯಾರಿಕೆ ಘಟಕ ಸ್ಥಾಪನೆ

04:37 PM Nov 24, 2019 | Suhan S |

ಶಿರೂರ: ಸ್ಥಳೀಯ ಶ್ರೀ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯತ್‌ ವತಿಯಿಂದ ಜೈವಿಕ ಗೊಬ್ಬರ ತಯಾರಿಕೆಯ ತ್ಯಾಜ್ಯ ಘಟಕ ಸ್ಥಾಪನೆ ಮಾಡಲಾಯಿತು. ಜೈವಿಕ ಗೊಬ್ಬರ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಪಿಡಿಒ ಅಮರೇಗೌಡ ಜಾರಡ್ಡಿ, ಶಾಲಾ ಆವರಣದ ಆಳೆತ್ತರ ಗುಂಡಿ ತೆಗೆದು ಪ್ಲಾಸ್ಟಿಕ್‌ ಪೈಪ್‌ ಹಾಕಿ ಮೊದಲು ಸ್ವಲ್ಪ ಪ್ರಮಾಣದಲ್ಲಿ ಬೆಲ್ಲದ ನೀರು ಹಾಗೂ ಸಗಣಿ ನೀರು ಹಾಕಬೇಕು. ನಂತರ ಬಿಸಿಯೂಟದ ನಂತರ ಉಳಿದ ಆಹಾರ ಪದಾರ್ಥಗಳನ್ನು ಪೈಪ್‌ ಮೂಲಕ ಕಾಂಪೋಸ್ಟ್‌ನಲ್ಲಿ ತಪ್ಪದೆಹಾಕಬೇಕು. ಮೂರು ತಿಂಗಳವರೆಗೆ ಅದನ್ನು ಗುಂಡಿಯಲ್ಲಿ ಬಿಟ್ಟಾಗ ಜೈವಿಕ ಗೊಬ್ಬರ ತಯಾರಾಗುತ್ತದೆ. ಅದನ್ನು ಗಿಡ-ಮರಗಳ ಬೆಳವಣಿಗೆಗೆ ಬಳಸಿಕೊಳ್ಳಬಹುದು ಎಂದರು.

Advertisement

ಗ್ರಾಮದ ಎಲ್ಲ ಶಾಲಾ ಕಾಲೇಜಗಳ ಆವರಣದಲ್ಲಿ ಗ್ರಾಪಂ ವತಿಯಿಂದ ಜೈವಿಕ ಗೊಬ್ಬರದ ಘಟಕ ಸ್ಥಾಪನೆ ಮಾಡಲಾಗುವುದು. ರೈತರು ಸಹ ಕೃಷಿ ಭೂಮಿಯಲ್ಲಿ ಇಂಥ ತ್ಯಾಜ್ಯ ಘಟಕಗಳನ್ನು ಸ್ಥಾಪನೆಗೆ ಮುಂದಾಗಬೇಕು ಎಂದರು. ಗ್ರಾಪಂ ಉಪಾಧ್ಯಕ್ಷೆ ಗಿರಿಜಾ ಎಮ್ಮಿಮಠ, ಪ್ರಭಾರಿ ಮುಖ್ಯ ಗುರು ಎಚ್‌.ಎನ್‌. ತಳವಾರ, ಶಾಲಾ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next