ಯಳಂದೂರು: ಚಾಮರಾಜನಗರ ಜಿಲ್ಲೆಯ ಎಡಬೆಟ್ಟದಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ಭಿಕ್ಷುಕರ ಪುನರ್‌ವಸತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ರಾಮಚಂದ್ರು ತಿಳಿಸಿದರು.
ತಾಲೂಕಿನ ಕಂದಹಳ್ಳಿ ಗ್ರಾಮದ ಮಹದೇಶ್ವರ ದೇಗುಲಕ್ಕೆ ಭೇಟಿ ನೀಡಿ ಸುದ್ದಿಗಾರರ ಜೊತೆಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ 5 ಜಿಲ್ಲೆಗಳಲ್ಲಿ ಭಿಕ್ಷುಕರಿಗೆ ಪುನರ್‌ವಸತಿ ಕೇಂದ್ರ ಸ್ಥಾಪಿಸಲಾಗುವುದು. ಇದರಲ್ಲಿಚಾಮರಾಜನಗರ ಜಿಲ್ಲೆಯ ಎಡಬೆಟ್ಟದಸಮೀಪದಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ಕಟ್ಟಡಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು. ಗಡಿ ಜಿಲ್ಲೆಯಲ್ಲಿ ಭಿಕ್ಷುಕರ ಸಂಖ್ಯೆ ಅಧಿಕವಾಗಿದೆ. ನೆರೆ ರಾಜ್ಯಗಳಿಂದ ಬರುವ ವಾಹನಗಳಲ್ಲಿಇವರನ್ನು ತಂದು ರಸ್ತೆಯಲ್ಲೇ ಬಿಟ್ಟು ಹೋಗುವ ಪರಿಪಾಠ ಹೆಚ್ಚಾಗಿದೆ.
ಹಾಗಾಗಿ ಇವರಿಗೆಉತ್ತಮ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಸರ್ಕಾರ ಹೊಸಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದರಲ್ಲಿ ಪುನರ್‌ವಸತಿ ಕೇಂದ್ರವೂಒಂದಾಗಿದೆ. ಇದರಲ್ಲಿ ವಿವಿಧ ಕೆಲಸಗಳ ನೈಪುಣ್ಯತಾ ತರಬೇತಿ ನೀಡಲಾಗುತ್ತದೆ. ಇವರೊಂದಿಗೆ ನಿರ್ಗತಿಕರು, ಅನಾಥರಿಗೂ ಕೂಡ ಇಲ್ಲಿ ಊಟ, ವಸತಿ, ಆಶ್ರಯ ನೀಡಲಾಗುವುದು ಎಂದರು.
ಈ ವೇಳೆ ಪಪಂ ಸದಸ್ಯ ಮಹೇಶ್, ನಿಂಗರಾಜು ಟಿಎಪಿಸಿಎಂಎಸ್ ನಿರ್ದೇಶಕರಾದ ಕಂದಹಳ್ಳಿ ಮಹೇಶ್, ವೈ.ಎಸ್. ನಂಜಶೆಟ್ಟಿ, ಪ್ರತಾಪ್ ಇತರರಿದ್ದರು.