Advertisement

ಬಸವೇಶ್ವರ ಪ್ರತಿಮೆ ಸ್ಥಾಪನೆ ಕಾಮಗಾರಿ ನನೆಗುದಿಗೆ

04:36 PM Feb 16, 2021 | Team Udayavani |

ಶಹಾಬಾದ: ನಗರದ ಬಸವವೃತ್ತದ ಸಮೀಪ ಸ್ಥಾಪಿಸಲು ಉದ್ದೇಶಿಸಿದ್ದ ಅಶ್ವಾರೂಢ ಬಸವೇಶ್ವರ ಪ್ರತಿಮೆ ಕಾಮಗಾರಿ ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. 2015-16ರ ಎಸ್‌ಎಫ್‌ಸಿ ಯೋಜನೆ ಯಡಿ 15 ಲಕ್ಷ ರೂ. ಅನುದಾನದಲ್ಲಿ ಪುಣೆಯಲ್ಲಿ ಪ್ರತಿಮೆ ಸ್ಥಾಪಿಸಲು ನಗರಸಭೆಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರುಒಪ್ಪಿಗೆ ಸೂಚಿಸಿದ್ದರು. ಅದರಂತೆ ಅಡಿಗಲ್ಲುನಿರ್ಮಾಣಕ್ಕೆ ಸುಮಾರು 5 ಲಕ್ಷ ರೂ.ಅನುದಾನದಲ್ಲಿ ಚಾಲನೆ ನೀಡಲಾಗಿತ್ತು. ಆಗ ಲೋಕೋಪಯೋಗಿ ಇಲಾಖೆ ತಮ್ಮ ವ್ಯಾಪ್ತಿಯಲ್ಲಿ ಈ ಸ್ಥಳ ಬರುತ್ತದೆ ಎಂದು ಹೇಳಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

Advertisement

ಕಾಮಗಾರಿ ಸ್ಥಗಿತವಾಗಿ ಆರು ವರ್ಷಗಳಾದರೂ ಮತ್ತೆ ಚಾಲನೆ ದೊರಕಿಲ್ಲ.ನಗರಸಭೆ ಅಂದಿನ ಅಧ್ಯಕ್ಷರಾಗಿದ್ದ ಗಿರೀಶಕಂಬಾನೂರ ಅವಧಿಯಲ್ಲಿ ಇದಕ್ಕಾಗಿಯೇಅನುದಾನ ಕಾಯ್ದಿರಿಸಲಾಗಿತ್ತು. ಈಗ ಅವರ ಧರ್ಮಪತ್ನಿ ಅಂಜಲಿ ಕಂಬಾನೂರ ನಗರಸಭೆ ಅಧ್ಯಕ್ಷರಾಗಿದ್ದಾರೆ. ಈಗಲಾದರೂ ಅಂದಿನ ಕನಸು ನನಸು ಮಾಡುವಲ್ಲಿ ಅಧ್ಯಕ್ಷರು ಗಮನಹರಿಸಬೇಕು ಎನ್ನುವುದು ಸಾರ್ವಜನಿಕರಆಗ್ರಹವಾಗಿದೆ.ಅಂದು ಕಾಯ್ದಿರಿಸಿದ ಅನುದಾನದಲ್ಲಿ ಈಗ ಪ್ರತಿಮೆ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಸುಮಾರು 35 ಲಕ್ಷ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. 14 ಅಡಿ ಎತ್ತರದ ಪಂಚಲೋಹದ ಅಶ್ವಾರೂಢ ಪ್ರತಿಮೆ ನಿರ್ಮಿಸಲು ನಗರಸಭೆಯ ಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮಡು ಸಮ್ಮುಖದಲ್ಲಿಯೇಹೆಚ್ಚುವರಿಯಾಗಿ ಸುಮಾರು 20 ಲಕ್ಷ ರೂ.ಅನುದಾನ ಕಾಯ್ದಿರಿಸಲಾಗಿದೆ. ಆದರೂಕಾಮಗಾರಿಗೆ ವಿಳಂಬವೇಕೆ ಎನ್ನುವುದು ಬಸವ ಅನುಯಾಯಿಗಳ ಪ್ರಶ್ನೆಯಾಗಿದೆ.

ಬಸವೇಶ್ವರ ಮೂರ್ತಿ ಪ್ರತಿಷ್ಠಾನೆಗೆ ಅನುದಾನದ ಕೊರತೆಯಿದೆಎಂದು ಗಮನಕ್ಕೆ ತಂದಾಗ, ನಗರಸಭೆಸಾಮಾನ್ಯ ಸಭೆಯಲ್ಲಿ ಚರ್ಚೆಮಾಡಲಾಗಿತ್ತು. ಆಗ ನಗರಸಭೆಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ನಗರಸಭೆಅನುದಾನದಲ್ಲಿ ಸುಮಾರು 20 ಲಕ್ಷರೂ. ಅನುದಾನ ಕಾಯ್ದಿರಿಸಲಾಗಿದೆ. ಅಧಿಕಾರಿಗಳನ್ನು ಭೇಟಿ ಮಾಡಿ, ಕೆಲಸ ಪ್ರಾರಂಭಿಸಲು ಸಮಾಜದ ಮುಖಂಡರು ಮುಂದಾದಬೇಕು. –ಬಸವರಾಜ ಮತ್ತಿಮಡು, ಶಾಸಕ, ಕಲಬುರಗಿ ಗ್ರಾಮೀಣ ಮತಕ್ಷೇತ್ರ

ನಗರಸಭೆ ಅನುದಾನದಲ್ಲಿ ಹೆಚ್ಚುವಾರಿಯಾಗಿ 20 ಲಕ್ಷರೂ. ಅನುದಾನ ಕಾಯ್ದಿರಿಸಲಾಗಿದೆ.ಒಂದು ವಾರದಲ್ಲಿ ಸಮಾಜದಮುಖಂಡರ ನಿಯೋಗದೊಂದಿಗೆ ಮೂರ್ತಿ ವೀಕ್ಷಿಸಲು ಪುಣೆಗೆ ತೆರಳಲಿದ್ದೇವೆ. ಆದಷ್ಟು ಶೀಘ್ರ ಕಾಮಗಾರಿ ಆರಂಭಿಸಲಾಗುವುದು. – ಡಾ| ಕೆ. ಗುರಲಿಂಗಪ್ಪ

Advertisement

Udayavani is now on Telegram. Click here to join our channel and stay updated with the latest news.

Next