ನರಗುಂದ: ಬೆಂಗಳೂರು-ಹುಬ್ಬಳ್ಳಿ ಮತ್ತು ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಪ್ರದೇಶದಲ್ಲಿ ಮೂರು ವರ್ಷಗಳಲ್ಲಿ 10 ಸಾವಿರ ಕೋಟಿರೂ. ವೆಚ್ಚದ ಕೈಗಾರಿಕೆಗಳ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮತಿ ನೀಡಿದ್ದಾರೆ ಎಂದು ಸಣ್ಣ ಕೈಗಾರಿಕೆ,ವಾರ್ತಾ ಮತ್ತು ಸಾರ್ವಜನಿಕಸಂಪರ್ಕ ಇಲಾಖೆ ಸಚಿವಸಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಕಲಕೇರಿಗ್ರಾಮದಲ್ಲಿ ಗ್ರಾಮೀಣಕುಡಿಯುವ ನೀರುಸರಬರಾಜು ಮತ್ತುನೈರ್ಮಲ್ಯ ಇಲಾಖೆಆಶ್ರಯದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಮತ್ತು 233 ಮನೆಗಳಿಗೆ2020/21ನೇ ಸಾಲಿನ ಜಲಜೀವನ ಮಿಷನ್ ಯೋಜನೆಯಡಿ 61.82 ಲಕ್ಷ ರೂ.ವೆಚ್ಚದ ನಳಗಳಜೋಡಣೆ ಕಾಮಗಾರಿಗೆ ಚಾಲನೆ ನೀಡಿದ ನಂತರ ನಡೆದ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ಈ ವರ್ಷ 3 ಸಾವಿರ ಕೋಟಿ ರೂ. ವೆಚ್ಚದ ಯೋಜನೆಸ್ಥಾಪಿಸಲಾಗುವುದು. ಉದ್ದಿಮೆಗಳ ಸ್ಥಾಪನೆಗೆ ಸರ್ಕಾರ ಅನುಮತಿ ನೀಡುವ ಮೂಲಕ ಅಸಂಖ್ಯಾತನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಅವಕಾಶ ಒದಗಿಸಿದೆ ಎಂದು ಹೇಳಿದರು.
ಪೀಣ್ಯ ಕೈಗಾರಿಕೆ ಅಭಿವೃದ್ಧಿ: ಪೀಣ್ಯ ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಕೈಗಾರಿಕೆ ಕೇಂದ್ರವಾಗಿದೆ. ಆ ಪ್ರದೇಶದಸುಧಾರಣೆಗೆ ಹಿಂದಿನ ಯಾವುದೇ ಸರ್ಕಾರ ನೈಯಾಪೈಸೆಅನುದಾನ ಒದಗಿಸಿಲ್ಲ. ಇದೀಗ ಪೀಣ್ಯ ಕೈಗಾರಿಕೆ ಪ್ರದೇಶಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂ. ಬಿಡುಗಡೆಮಾಡಿದ್ದು, ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.
ಗ್ರಾಪಂ ಅಧ್ಯಕ್ಷ ಕೆ.ಬಿ.ಕುರಿ ಅಧ್ಯಕ್ಷತೆ ವಹಿಸಿದ್ದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಪಾಟೀಲ, ಬಿಜೆಪಿನರಗುಂದ ಮಂಡಲ ಅಧ್ಯಕ್ಷ ಗುರಪ್ಪ ಆದೆಪ್ಪನವರ,ಹನಮವ್ವ ಮರಿಯಣ್ಣವರ, ಶಿವನಗೌಡ ಹೆಬ್ಬಳ್ಳಿ,ಮಹಾದೇವಪ್ಪ, ಶಿವನಗೌಡ ಪಾಟೀಲ, ಶಾಂತವ್ವ ದೇವಕ್ಕಿ,ಗೋವಿಂದರಡ್ಡಿ ಸಿದ್ನಾಳ, ಹನಮಂತಗೌಡ ಕೆಂಚನ ಗೌಡ್ರ, ಮಲ್ಲಪ್ಪ ಮೇಟಿ, ಮಂಜುಳಾ ಪರಮೇಶ್ವರ,ಸಾವಕ್ಕ ಮ್ಯಾಗೇರಿ, ಪ್ರಕಾಶಗೌಡ ತಿರಕನಗೌಡ್ರ ಮುಂತಾದವರಿದ್ದರು.