Advertisement

ರಾಜ್ಯದಲ್ಲಿ ಇನ್ನೂ ಮೂರು ಸೋಲಾರ್‌ ಪಾರ್ಕ್‌ ಸ್ಥಾಪನೆ

06:45 AM Mar 29, 2018 | Team Udayavani |

ಬೆಂಗಳೂರು: ಪಾವಗಡದ ಸೋಲಾರ್‌ ಪಾರ್ಕ್‌ ಮಾದರಿಯಲ್ಲೇ ಇನ್ನೂ ಮೂರು ಸೋಲಾರ್‌ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

ಪ್ರಸ್ತುತ ಪಾವಗಡದ ಸೋಲಾರ್‌ ಪಾರ್ಕ್‌ ಇರುವ ಜಾಗದ ಸಮೀಪದಲ್ಲೇ ಮತ್ತೂಂದು ಸೋಲಾರ್‌ ಪಾರ್ಕ್‌ ಹಾಗೂ ಗದಗ ಜಿಲ್ಲೆಯ ರೋಣಾ ವಿಧಾನಸಭಾ ಕ್ಷೇತ್ರದಲ್ಲಿ ಅಷ್ಟೇ ಸಾಮರ್ಥ್ಯದ ಸೋಲಾರ್‌ ಪಾರ್ಕ್‌ ನಿರ್ಮಿಸಲು 20 ಸಾವಿರ ಕೋಟಿ ಹೂಡಿಕೆ ಮಾಡಲು ಖಾಸಗಿಯವರು ಮುಂದೆ ಬಂದಿದ್ದಾರೆ ಎಂದರು.

ಪಾವಗಡದ ಸೋಲಾರ್‌ ಪಾರ್ಕ್‌ ಸಮೀಪದಲ್ಲೇ ಏಳು ಸಾವಿರ ಎಕರೆ ಪ್ರದೇಶದಲ್ಲಿ ಒಂದು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಲು ಗ್ರೀನ್‌ಕೋ ಸಂಸ್ಥೆ ಮುಂದಾಗಿದ್ದು, 5 ಸಾವಿರ ಕೋಟಿ ಹೂಡಿಕೆ ಮಾಡಲಿದೆ. ರೈತರು ಜಮೀನು ನೀಡಲು ಮುಂದೆ ಬಂದಿದ್ದಾರೆ. ಅದೇ ರೀತಿ ರೋಣಾ ವಿಧಾನಸಭಾ ಕ್ಷೇತ್ರದಲ್ಲೂ ಒಂದು ಸಾವಿರ ಮೆಗಾವ್ಯಾಟ್‌  ಸೋಲಾರ್‌ ವಿದ್ಯುತ್‌ ಉತ್ಪಾದಿಸಲು ಇದೇ ಸಂಸ್ಥೆ 5 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಇದಲ್ಲದೆ, ಬೆಳಗಾವಿಯಲ್ಲಿ ಗ್ರೀನ್‌ ಕೋ ಕಂಪೆನಿ ಜಲ, ಪವನ ಹಾಗೂ ಸೌರ ವಿದ್ಯುತ್‌ ಉತ್ಪಾದನೆಗೆ ಸುಮಾರು 10 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದು, 2 ಸಾವಿರ ಮೆಗಾವ್ಯಾಟ್‌ ತ್ಪಾದನೆಯಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಂಡವಾಳ ಹೂಡಿಕೆ ದೃಷ್ಟಿಯಿಂದ ಸೋಲಾರ್‌ ಪಾರ್ಕ್‌ಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದ್ದು, ಈ ವಿದ್ಯುತ್‌ ಖರೀದಿಗೆ ಖಾಸಗಿ ಸಂಸ್ಥೆಯೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಳ್ಳುತ್ತಿಲ್ಲ. ಬೇರೆ ರಾಜ್ಯಗಳ ವಿದ್ಯುತ್‌ ಸ್ಥಾವರಗಳಿಗೆ ಅವರು ವಿದ್ಯುತ್‌ ಒದಗಿಸಲು ಅವಕಾಶವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next