Advertisement

ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು ಆಗ್ರಹ

06:04 PM Dec 04, 2021 | Shwetha M |

ಬಸವನಬಾಗೇವಾಡಿ: ಇಂಗಳೇಶ್ವರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿ ಗ್ರಾಮದ ಮಹಿಳೆಯರು ಶುಕ್ರವಾರ ಪ್ರತಿಭಟನೆ ನಡೆಸಿ ತಾಲೂಕು ಆರೋಗ್ಯಾಧಿಕಾರಿ ಡಾ| ಶಶಿಧರ ಓತಗೇರಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಜಮಾಯಿಸಿದ ಮಹಿಳೆಯರು ವಿಜಯಪುರ ರಸ್ತೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಆಸ್ಪತ್ರೆಗೆ ತೆರಳಿದರು. ಮಲ್ಲಮ್ಮ ಬಾಗೇವಾಡಿ, ಗೀತಾ ಸಜ್ಜನ, ಶಶಿಕಲಾ ಪಾಟೀಲ ಮಾತನಾಡಿ, ಇಂಗಳೇಶ್ವರ 15 ಸಾವಿರ ಜನಸಂಖ್ಯೆಯುಳ್ಳ ದೊಡ್ಡ ಗ್ರಾಮವಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದು ಅಗತ್ಯ ಎಂದರು.

ಗ್ರಾಮದ ಜನರ ಆರೋಗ್ಯದಲ್ಲಿ ಏರುಪೇರಾದರೆ ಪಕ್ಕದ ಕುದರಿಸಾಲವಾಡಗಿ ಇಲ್ಲವೇ ಬಸವನಬಾಗೇವಾಡಿ ಆಸ್ಪತ್ರೆಗೆ ತೆರಳಬೇಕು. ಸಕಾಲಕ್ಕೆ ವಾಹನ ಸಿಗದೇ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ಇಂಗಳೇಶ್ವರ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿದರೆ ಗ್ರಾಮಸ್ಥರು ಹಾಗೂ ಸುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ತಕ್ಷಣ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಒತ್ತಾಯಿಸಿದರು.

ಈ ವೇಳೆ ರೈತ ಮುಖಂಡ ಅರವಿಂದ ಕುಲಕರ್ಣಿ, ಶಾಂತಾಬಾಯಿ ಸಜ್ಜನ, ಚಂದ್ರಬಾಗ ಬಡಿಗೇರ, ಸುವರ್ಣಾ ಪಾಟೀಲ, ಲಾಲಬಿ ಅತ್ತಾರ, ಬೋರಮ್ಮ ಮನಹಳ್ಳಿ, ಸರೋಜನಿ ಪಾಟೀಲ, ಸಾಬವ್ವ ಡೋಣೂರ, ಶಾಂತಾಬಾಯಿ ಬಿರಾದಾರ, ಭಾರತಿ ಅವಟಿ, ಜಯಕ್ಕ ಪತ್ತಾರ, ಶಾರಾದಾ ಸಜ್ಜನ, ನೀಲಮ್ಮ ಕಟಗಿ, ನಾಗಮ್ಮ ಬಾಗೇವಾಡಿ, ರತ್ನಾಬಾಯಿ ಮೀಸಿ, ಭಾರತಿ ಅವಟಿ, ರತ್ನಾಬಾಯಿ, ಬಮ್ಮನಹಳ್ಳಿ, ಲಕ್ಕವ ಕುರಣದ, ಕಲ್ಪನಾ ಬಾಗೇವಾಡಿ, ಮಹಾದೇವಿ ಅವಟಿ, ಸವಿತಾ ಅವಟಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next