Advertisement

ಶಿಕ್ಷಕರು, ವಿದ್ಯಾರ್ಥಿಗಳ ಶ್ರಮದಿಂದ ಎಸ್ಸೆಸ್ಸೆಲ್ಸಿ ಉತ್ತಮ ಫ‌ಲಿತಾಂಶ

09:04 PM May 04, 2019 | Lakshmi GovindaRaj |

ಅರಸೀಕೆರೆ: ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ಜಿಲ್ಲೆಯಲ್ಲಿ 5 ನೇಸ್ಥಾನದಲ್ಲಿದ್ದ ಅರಸೀಕೆರೆ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಬಂದಿದೆ. 18 ಅಂಶಗಳ ಕಾರ್ಯಕ್ರಮಗಳು ಮತ್ತು ಶಿಕ್ಷಕ ವೃಂದದ ವಿಶೇಷ ಕಾಳಜಿ ಹಾಗೂ ವಿದ್ಯಾರ್ಥಿಗಳ ಆಸಕ್ತಿಯೇ ಕಾರಣ ಎಂದು ಅರಸೀಕೆರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ ಕುಮಾರ್‌ ತಿಳಿಸಿದ್ದಾರೆ.

Advertisement

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಮುದಾಯ ನಿರೀಕ್ಷೆಯಂತೆ ನಾವು ಶೇ.85 ಫಲಿತಾಂಶವನ್ನು ಪಡೆಯುವಲ್ಲಿ ಸಫಲರಾಗಿದ್ದೇವೆ ಎಂದು ಹೇಳಿದರು.

ಶಿಕ್ಷಕರ ವಿಶೇಷ ಕಾಳಜಿ: ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 3,273 ವಿದ್ಯಾರ್ಥಿಗಳ ಪೈಕಿ 2,934 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು, ಶೇ.85 ಫಲಿತಾಂಶ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಶಾಲಾ ಶಿಕ್ಷಕರು ಶಾಲಾ ಅವಧಿಯ ನಂತರವೂ ವಿಶೇಷ ಕಾಳಜಿ ವಹಿಸಿ ತರಗತಿಗಳನ್ನು ತೆಗೆದು ಕೊಂಡು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಅಂತಹ ವಿದ್ಯಾರ್ಥಿಗಳು ಉನ್ನತ ಶ್ರೇಣಿಗಳಲ್ಲಿ ತೇರ್ಗಡೆ ಹೊಂದಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಕೂಡ ಹೆಚ್ಚಿನ ಆಸಕ್ತಿಯಿಂದ ಪಾಠ ಮನನ ಮಾಡಿಕೊಂಡು ಶಿಕ್ಷಕರ ಪರಿಶ್ರಮವನ್ನು ಸಾರ್ಥಕಗೊಳಿಸಿದ್ದಾರೆ. ಶಿಕ್ಷಕ ಸಮೂಹದ ಸಹಕಾರಕ್ಕೆ ತಾವು ಆಭಾರಿಯಾಆಗಿರುವುದಾಗಿ ಹೇಳಿದರು.

ಫ‌ಲಿತಾಂಶ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮ: ಶಿಕ್ಷಕರಿಗೆ ವಿಷಯವಾರು ತರಬೇತಿ, ತಾಯಂದಿರ ಸಭೆ, ಗಣಿತ, ಇಂಗ್ಲಿಷ್‌, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಬಗ್ಗೆ ಶಿಕ್ಷಕರ ಕಾರ್ಯಾಗಾರ, ಮತ್ತು ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ತರಬೇತಿ ಅಂತರ ಶಾಲಾ ಶಿಕ್ಷಕರಿಂದ ಮಕ್ಕಳ ಓದಿನ ಮಟ್ಟ ತಿಳಿಯುವ ಪ್ರಯತ್ನ, ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳ ದತ್ತು ನೀಡಿಕೆ, ಸೇರಿದಂತೆ 18 ಅಂಶಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.

ಗುಣಮಟ್ಟಕ್ಕೆ ಆದ್ಯತೆ: ಕೇವಲ ತೇರ್ಗಡೆಗೆ ಮಹತ್ವ ನೀಡದೇ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿತ್ತು . ತಾಲೂಕಿನ 88 ಶಾಲೆಗಳಲ್ಲಿ 21 ಶಾಲೆಗಳು ಶೇ.100 ಫಲಿತಾಂಶ ನೀಡಿವೆ. ಇವುಗಳಲ್ಲಿ ಸರ್ಕಾರಿ ಶಾಲೆಗಳು 13, ಅನುದಾನಿತ ಶಾಲೆಗಳು 2, ಅನುದಾನ ರಹಿತ ಶಾಲೆಗಳು 6, ಶೇ.100 ಫಲಿತಾಂಶ ಪಡೆದುಕೊಂಡಿದ್ದು,

Advertisement

ಚಿಂದೇನಹಳ್ಳಿ ಗಡಿ ಸರ್ಕಾರಿ ಶಾಲೆ ಶೇ.98, ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು 2 ಮತ್ತು ಕೊಳಗುಂದ ಸರ್ಕಾರಿ ಶಾಲೆ ಶೇ.97 ಫಲಿತಾಂಶ ಪಡೆದುಕೊಂಡಿದೆ. ಶಿಕ್ಷಣ ಇಲಾಖೆ ಉನ್ನತಮಟ್ಟದ ಅಧಿಕಾರಿಗಳು ನೀಡಿದ ಸಲಹೆ ಸೂಚನೆಗಳು ಹಾಗೂ ಮಾರ್ಗದರ್ಶನ ಈ ಸಾಧನೆಗೆ ಕಾರಣವಾಗಿದೆ ಎಂದು ಬಿಇಒ ಮೋಹನ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next