Advertisement

ಅಗತ್ಯ ಸೇವೆ ಬೆಳಗ್ಗೆ 6 ರಿಂದ 10 ರವರೆಗೆ

06:19 PM Apr 28, 2021 | Team Udayavani |

ಹಾಸನ: ಕೋವಿಡ್ ನಿಯಂತ್ರಣಕ್ಕಾಗಿ ಜನತಾಲಾಕ್‌ಡೌನ್‌ ಜಾರಿಯಲ್ಲಿದ್ದು ಈ ಅವಧಿಯಲ್ಲಿಸರ್ಕಾರದ ನಿರ್ದೇಶನದಂತೆ ಅಗತ್ಯಸೇವೆಗಳಿಗೆ ಬೆಳಗ್ಗೆ 6 ರಿಂದ 10 ರವರೆಗೆಮಾತ್ರ ಅವಕಾಶ ಕಲ್ಪಿಸಬೇಕು ಎಂದುಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅಧಿಕಾರಿಗಳಿಗೆಸೂಚನೆ ನೀಡಿದರು.

Advertisement

ಲಾಕ್‌ಡೌನ್‌ ಅನುಷ್ಠಾನಗೊಳಿಸುವಕುರಿತು ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರ್‌ ಹಾಗೂ ಇತರೆ ಅಧಿಕಾರಿಗ ಳೊಂದಿಗೆಮಂಗಳವಾರ ವಿಡಿಯೋ ಸಂವಾದ ನಡೆಸಿ,ಕೊರೊನಾ ಲಾಕ್‌ಡೌನ್‌ ವೇಳೆ ಸರ್ಕಾರದಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕುಎಂದು ಸೂಚನೆ ನೀಡಿದರು.

ಆರೋಗ್ಯ ವಿಚಾರಿಸಿ: ಕೆಲವು ದಿನಗಳ ಮಟ್ಟಿಗೆಸೋಂಕಿತರ ಕುಟುಂಬ ಸದಸ್ಯರನ್ನು ಮಾತ್ರಕೊರೊನಾ ಪ್ರಾಥಮಿಕ ಸಂಪರ್ಕಿತರನ್ನಾಗಿಪರಿಗಣಿಸಿ ತಪಾಸಣೆ ನಡೆಸಬೇಕು ಎಂದುನಿರ್ದೇಶನ ನೀಡಿದ ಅವರು, ತಾಲೂಕುಕೇಂದ್ರದ ಸರ್ಕಾರಿ ಆಸ್ಪತ್ರೆ ಹಾಗೂ ಕೊರೊನಾಕೇರ್‌ ಕೇಂದ್ರಗಳಲ್ಲಿರುವ ಸೋಂಕಿತರಿಗೆಗುಣಮಟ್ಟದ ಪೌಷ್ಟಿಕ ಆಹಾರವನ್ನುಕಡ್ಡಾಯವಾಗಿ ನೀಡಬೇಕು.

ಹೋಂಐಸೋಲೇಶನ್‌ ಹಾಗೂ ಕ್ವಾರಂಟೈನ್‌ನಲ್ಲಿರುವ ಸೋಂಕಿತರ ಮನೆಗಳಿಗೆ ಪ್ರತಿನಿತ್ಯಕಡ್ಡಾಯವಾಗಿ ಭೇಟಿ ನೀಡಿ ಆರೋಗ್ಯವಿಚಾರಿಸಿ ಅಗತ್ಯ ಸಲಹೆ, ಸೂಚನೆ ನೀಡಬೇಕುಎಂದು ಅಧಿಕಾರಿಗಳಿಗೆ ಸೂಚಿಸಿದರು.ದಂಡ ವಿಧಿಸಿ: ತಾಲೂಕು ಆಸ್ಪತ್ರೆಗಳಲ್ಲಿಕೊರೊನಾ ಸೋಂಕಿತರಿಗೆ ಹಾಸಿಗೆ ಹೆಚ್ಚಿಸಬೇಕು.

ರೆಮ್‌ಡೆಸಿವಿಯರ್‌ ಚುಚ್ಚುಮದ್ದನ್ನುಅಗತ್ಯವಿದ್ದವರಿಗೆ ಮಾತ್ರ ನೀಡಬೇಕು. ನಗರಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ಧರಿಸದೇ ಓಡಾಡುವವರಿಗೆ ಆಯಾ ಸ್ಥಳೀಯಸಂಸ್ಥೆಗಳ ಮಟ್ಟದಲ್ಲಿ ಕಡ್ಡಾಯವಾಗಿ ದಂಡವಿಧಿಸಬೇಕು ಎಂದು ಹೇಳಿದರು.

Advertisement

ನಿರ್ದೇಶನ: ಕಟ್ಟಡ ಹಾಗೂ ಕೃಷಿಚಟುವಟಿಕೆಗಳಲ್ಲಿ ತೊಡಗುವ ರೈತರುಹಾಗೂ ಕಾರ್ಮಿಕರಿಗೆ ಲಾಕ್‌ ಡೌನ್‌ ವೇಳೆಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸೂಚಿಸಿದ ಅವರು, ಅರಸೀಕೆರೆಹಾಗೂ ಚನ್ನರಾಯಪಟ್ಟಣ ತಾಲೂಕುಗಳಕೊರೊನಾ ಸೋಂಕಿತರು ಚಿಕಿತ್ಸೆಗೆಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೂದಾಖಲಿಸಬಹು ದಾಗಿದೆ.

ಅಗತ್ಯವಿದ್ದಲ್ಲಿಸಮಾಜ ಕಲ್ಯಾಣ ಹಾಗೂ ಹಿಂದುಳಿದವರ್ಗಗಳ ಇಲಾಖೆ ವಸತಿ ನಿಲಯಗಳನ್ನುಕೊರೊನಾ ಕೇರ್‌ಗಳನ್ನಾಗಿ ಪರಿವರ್ತಿಸುವಂತೆನಿರ್ದೇಶನ ನೀಡಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಬಿ.ಎ.ಪರಮೇಶ್‌, ಅಪರ ಜಿಲ್ಲಾಧಿಕಾರಿಕವಿತಾ ರಾಜಾರಾಂ, ಜಿಲ್ಲಾ ಹೆಚ್ಚುವರಿಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌.ನಂದಿನಿ,ಉಪವಿಭಾಗಾಧಿಕಾರಿಗಳಾದ ಬಿ.ಎ.ಜಗದೀಶ್‌, ಆರ್‌.ಗಿರೀಶ್‌ ನಂದನ್‌ ಮತ್ತಿತರಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next