Advertisement
ಪರೀಕ್ಷೆ ಬರೆದವರಲ್ಲಿ 158 ಬಾಲಕರು ಮತ್ತು 125 ಬಾಲಕಿಯರಿದ್ದರು. ಇವರಲ್ಲಿ 134 ವಿದ್ಯಾರ್ಥಿಗಳು ಎ ಪ್ಲಸ್, 40 ಮಂದಿ ಎ, 42 ಮಂದಿ ಬಿ ಪ್ಲಸ್, 40 ಮಂದಿ ಬಿ, 12 ಮಂದಿ ಸಿ ಪ್ಲಸ್ 15 ಮಂದಿ ಸಿ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಪುತ್ತೂರು ತಾಲೂಕಿನ ಕೊಂಬೆಟ್ಟು ಸರಕಾರಿ ಪ್ರೌಢಶಾಲೆ – 30, ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆ – 61, ಸುಳ್ಯಪದವು ಸರ್ವೋದಯ ಪ್ರೌಢಶಾಲೆ – 36, ಕಬಕ ಸರಕಾರಿ ಪ್ರೌಢಶಾಲೆ – 15, ಸವಣೂರು ಸರಕಾರಿ ಪ್ರೌಢಶಾಲೆ – 25, ಪಾಪೆಮಜಲು ಸರಕಾರಿ ಪ್ರೌಢಶಾಲೆ – 5, ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ – 20, ಕಾಣಿಯೂರು ಪ್ರಗತಿ ಕನ್ನಡ ಮಾಧ್ಯಮ ಶಾಲೆ – 23, ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ – 14, ಬಂಟ್ವಾಳ ತಾಲೂಕಿನ ವಿಟ್ಲ ವಿಠಲ ಪ್ರೌಢಶಾಲೆ – 29, ಸರಪಾಡಿ ಸರಕಾರಿ ಪ್ರೌಢಶಾಲೆ – 17, ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಸರಕಾರಿ ಪ್ರೌಢಶಾಲೆ – 8 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ಎಲ್ಲರೂ ಉತ್ತೀರ್ಣರಾಗಿದ್ದಾರೆ. 25ರಿಂದ 283ಕ್ಕೆ ಏರಿಕೆ: 2015-16ರಲ್ಲಿ ತುಳು ಪಠ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ-25. ಪುತ್ತೂರು ತಾಲೂಕಿನ 3 ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದರು. ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಉತೀರ್ಣರಾಗಿ ಶೇ. 100 ಫಲಿತಾಂಶ ಬಂದಿತ್ತು. ಓರ್ವ ವಿದ್ಯಾರ್ಥಿನಿ 100ಕ್ಕೆ 100 ಅಂಕ ಪಡೆದಿದ್ದರೆ,4 ಮಂದಿ ವಿದ್ಯಾರ್ಥಿಗಳು 95 ಶೇ. ಅಧಿಕ ಅಂಕ ಗಳಿಸಿದ್ದರು. 2016-17ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 283ಕ್ಕೆ ಏರಿತ್ತು. 3 ಶಾಲೆಗಳಿಂದ 12 ಶಾಲೆಗೆ ವಿಸ್ತರಣೆಗೊಂಡಿತ್ತು.
Related Articles
ದ.ಕ. ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪುತ್ತೂರು ತಾಲೂಕಿನ 9 ಶಾಲೆಗಳಿಂದ 229, ಬೆಳ್ತಂಗಡಿ ತಾಲೂಕಿನ 1 ಶಾಲೆಯಿಂದ 8, ಬಂಟ್ವಾಳ ತಾಲೂಕಿನ 2 ಶಾಲೆಯಿಂದ 46 ವಿದ್ಯಾರ್ಥಿಗಳಿದ್ದರು. ಉಪ್ಪಿನಂಗಡಿ ಸ.ಪ.ಪೂ. ಪ್ರೌಢ ಶಾಲೆಯ 63 ವಿದ್ಯಾರ್ಥಿ ಸಂಖ್ಯೆ ಶಾಲಾವಾರು ಮಟ್ಟದ ಗರಿಷ್ಠ ಸಂಖ್ಯೆ. ತಾಲೂಕುವಾರು ಮಟ್ಟದಲ್ಲಿ ಪುತ್ತೂರು ತಾಲೂಕಿನಿಂದ ಗರಿಷ್ಠ ವಿದ್ಯಾರ್ಥಿಗಳು ತುಳು ಪಠ್ಯ ಆಯ್ದುಕೊಂಡಿದ್ದರು.
Advertisement
ಈ ಬಾರಿ ಪರೀಕ್ಷೆ ಬರೆದ 283 ವಿದ್ಯಾರ್ಥಿಗಳು ಉತೀರ್ಣರಾಗಿ ಶೇ. 100 ಫಲಿತಾಂಶ ಬಂದಿದೆ. ಇದರಲ್ಲಿ 38 ವಿದ್ಯಾರ್ಥಿಗಳು ತುಳು ಪಠ್ಯದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ. 138 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಏರಲಿದೆ. – ಚಂದ್ರಹಾಸ ರೈ,
ರಿಜಿಸ್ಟ್ರಾರ್, ತುಳು ಅಕಾಡೆಮಿ