Advertisement

ನಪುಂಸಕರಿಗೆ ಮಾತ್ರ ನಪುಂಸಕ ಎಂದರೆ ಏನು ಎಂಬುದು ಗೊತ್ತು: ಸಿದ್ದುಗೆ ಈಶ್ವರಪ್ಪ ಟಾಂಗ್

06:46 PM May 29, 2022 | Team Udayavani |

ಶಿವಮೊಗ್ಗ : ವಿರೋಧ‌ ಪಕ್ಷದ‌ ನಾಯಕ ಎಂಬುದನ್ನು ಮರೆತು ಸಿದ್ದರಾಮಯ್ಯ ಅವರು ಆರ್ ಎಸ್‌ಎಸ್‌ ಅನ್ನು ನಪುಂಸಕ‌ ಸಂಘ ಎಂದು ಕರೆದಿದ್ದಾರೆ.ನಪುಂಸಕರಿಗೆ ಮಾತ್ರ ನಪುಂಸಕ ಎಂದರೆ ಏನು ಎಂಬುದು ಗೊತ್ತು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಪುಂಸಕವಾಗಿದೆ. ಆರ್ ಎಸ್ ಎಸ್ ಹುಲಿ ಸಿಂಹಗಳಂತ ದೇಶ ಭಕ್ತರನ್ನು ತಯಾರಿಸುವ ಸಂಘಟನೆ. ಸಿದ್ದರಾಮಯ್ಯ ಅವರು ನನಗೆ ಮೆದುಳಿಗೆ ನಾಲಿಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.ನಾನು ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಕರೆದಾಗ ನನ್ನನ್ನು ಪ್ರಾಣಿ ಎನ್ನುತ್ತಾರೆ. ಸಿದ್ದರಾಮಯ್ಯ ಅವರು‌ ಮೋದಿ, ಯಡಿಯೂರಪ್ಪ ಅವರನ್ನು ಏಕ ವಚನದಲ್ಲಿ ಬೈದಿದ್ದರು‌.ಈಗ ಹೇಳಲಿ ಸಿದ್ದರಾಮಯ್ಯ ಅವರು ಯಾವಾಗ ಪ್ರಾಣಿಯಾದರು ಎಂದು ಪ್ರಶ್ನಿಸಿದರು.

ಸಿಂಹದ ಮರಿ ನರೇಂದ್ರ‌ ಮೋದಿ ಅವರು ಪ್ರಧಾನಿಯಾದ ನಂತರ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿದ್ದಾರೆ.ನಪುಂಸಕರಾದ ಕಾಂಗ್ರೆಸ್ಸಿಗರು 75 ವರ್ಷ ಅಧಿಕಾರ‌ ನಡೆಸಿದರೂ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಲಿಲ್ಲ.ಸಿದ್ದರಾಮಯ್ಯ ಅವರನ್ನು ಪ್ರಾಣಿಗೆ ಹೋಲಿಸಿದರೇ ಆ ಪ್ರಾಣಿಗೆ ಅವಮಾನ ಮಾಡಿದಂತೆ. 1925 ರ ವಿಜಯದಶಮಿ ದಿನ ಆರ್ ಎಸ್ ಎಸ್ ಹುಟ್ಟಿದ್ದು.ದೇಶದೊಳಗೆ ಬ್ರಿಟೀಷರು ಆರು ನೂರು ವರ್ಷದ ಹಿಂದೆ ಬರಲು ಆರ್ ಎಸ್ ಎಸ್ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಇದನ್ನು‌ನೋಡಿದರೆ ಸಿದ್ದರಾಮಯ್ಯ ಅವರ ತಲೆಯಲ್ಲಿ‌ ಸಗಣಿ ಬಿಟ್ಟರೆ ಏನೂ ಇಲ್ಲ ಎಂಬುದು ತಿಳಿಯುತ್ತದೆ ಎಂದು ಕಿಡಿ ಕಾರಿದರು.

ನಾವಾಗಿ ಯಾರನ್ನೂ ಹೊಡೆಯಲು ಹೋಗುವುದಿಲ್ಲ. ಯಾರಾದರೂ ನಮಗೆ ಹೊಡೆದರೆ ಅವರು ಯಾವುದರಲ್ಲಿ ಹೊಡೆದರೋ ಅದರಲ್ಲೇ ತಿರುಗಿಸಿ ಹೊಡೆಯುತ್ತೇವೆ. ಸಿದ್ದರಾಮಯ್ಯ ಅವರು ಕೋರ್ಟ್ ತೀರ್ಪನ್ನು ಸ್ವಾಗತಿಸಬೇಕಿತ್ತು. ಆದರೆ ಸಿದ್ದರಾಮಯ್ಯ ಅವರು ದೇಶದ್ರೋಹಿ ಓವೈಸಿ ಜೊತೆ ಕೈ ಜೋಡಿಸಿದ್ದಾರೆ.

ಸಿದ್ದರಾಮಯ್ಯ ಮೋದಿ ಹಾಗೂ ಯಡಿಯೂರಪ್ಪ ಅವರನ್ನು ಏಕವಚನದಲ್ಲಿ‌ ನಿಂದಿಸುತ್ತಾರೆ.ಖರ್ಗೆ ಹೆಗಡೆವಾರ್ ಅವರನ್ನು‌ ಏಕ ವಚನದಲ್ಲಿ ನಿಂದಿಸುತ್ತಾರೆ. ಇವರುಗಳು ಯಾವ ಪ್ರಾಣಿ ಎಂದು ಸ್ಪಷ್ಟಪಡಿಸಲಿ.

Advertisement

ಕಾಂಗ್ರೆಸ್‌ ವಿದೇಶಿ ವ್ಯಕ್ತಿಗಳ ಕೈಯಲ್ಲಿ ಸಿಲುಕಿಕೊಂಡಿದೆ.ಸೋನಿಯಾಗಾಂಧಿ ಭಾರತೀಯರಾ ಎಂಬುದನ್ನು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಲಿ. ಇಂದಿರಾಗಾಂಧಿ ಪತಿ ಫಿರೋಜ್ ಗಾಂಧಿ ಸ್ವಾತಂತ್ರ್ಯ ಹೋರಾಟಗಾರರ.ಫಿರೋಜ್ ಗಾಂಧಿ ಭಾರತೀಯರ ಎಂಬುದನ್ನು ಸ್ಪಷ್ಟಪಡಿಸಿ.ಹೆಗಡೆವಾರ್ ಅವರನ್ನು ಯಾವನ್ರೀ ಅವನು ಎಂದು ಕರೆದಿದ್ದು ಇಡೀ‌ ದೇಶದ‌ ಜನರಿಗೆ ನೋವಾಗಿದೆ.ಖರ್ಗೆ ಅವರು ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆ ಕೇಳಿ ದೊಡ್ಡವರಾಗಬೇಕು ಎಂದರು.

ಕಾಂಗ್ರೆಸ್ಸಿಗರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ರಾಷ್ಟ್ರಧ್ವಜ ಬಳಸಿಕೊಳ್ಳುತ್ತಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಸುಳ್ಳುಹೇಳುವ ಡಿ.ಕೆ.ಶಿವಕುಮಾರ್ ದೇಶದ್ರೋಹಿ. ಭಗವಾಧ್ವಜಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಅದು ತ್ಯಾಗದ ಸಂಕೇತ. ಭಗವಾಧ್ವಜ ಇನ್ಯಾವುದೋ ಸಮಯದಲ್ಲಿ ರಾಷ್ಟ್ರಧ್ವಜವಾಗಬಹುದು.ತ್ರಿವರ್ಣ ಧ್ವಜ ನಮ್ಮ ಸಂವಿಧಾತ್ಮಕ ಧ್ವಜ. ಅದಕ್ಕೆ ಗೌರವ ಕೊಡಲೆಬೇಕು.ಆರ್ ಎಸ್ ಎಸ್ ನಮ್ಮ ತಾಯಿ. ನಮ್ಮ ತಾಯಿಗೆ ಬೈದರೆ ಸಿಟ್ಟು ಬರುವುದು ಸಹಜ.ಯಾರಾದರೂ ಸುಮ್ಮನೆ ಕುಳಿತುಕೊಳ್ಳುತ್ತಾರೆಯೇ ? ಎಂದು ಪ್ರಶ್ನಿಸಿದರು.

ಇಂದಿರಾಗಾಂಧಿ, ನೆಹರೂ ನೆ ಆರ್ ಎಸ್ ಎಸ್ ಅನ್ನು ಏನು ಮಾಡಲು ಆಗಿಲ್ಲ.ಇನ್ನು ಜುಜುಬಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದ‌ ಏನು ಮಾಡಲು ಆಗುತ್ತದೆ ಎಂದರು.

ಸಿದ್ದರಾಮಯ್ಯ ಮೈಯಲ್ಲಿ ಅಹಲ್ಯಬಾಯಿ ಹೋಳ್ಕರ್‌ ರಕ್ತ ಹರಿಯುತ್ತಿದೆಯೋ ಅಥವಾ ಔರಂಗಜೇಬ್ ರಕ್ತ ಹರಿಯುತ್ತದೆಯೋ ಸ್ಪಷ್ಟಪಡಿಸಲಿ. ಅಧಿಕಾರ ದಾಹಿ ಸಿದ್ದರಾಮಯ್ಯ. ಅದಕ್ಕಾಗಿ ಇದೀಗ ಓವೈಸಿ ಜೊತೆ ಸೇರಿದ್ದಾರೆ. ದೇಶಭಕ್ತ‌ ಮುಸಲ್ಮಾನರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸೇರಬಾರದು ಎಂದರು.

ದೇಶದಲ್ಲಿ ಎಲ್ಲಡೆಯೂ ಮಸೀದಿಗಳಲ್ಲಿ ಐತಿಹಾಸಿಕ ದೇವಾಲಯಗಳು ಪತ್ತೆಯಾಗುತ್ತಿವೆ. ಹೀಗಾಗಿ ಈ ವಿಷಯವನ್ನು ಡೈವರ್ಟ್ ಮಾಡಲು ಆರ್ಯ, ದ್ರಾವಿಡ, ನಪುಂಸಕತ್ವ ಎಂಬ ವಿಷಯದ ಬಗ್ಗೆ ಚರ್ಚೆ ತಿರುಗಿಸುವ ಯತ್ನ‌ ಕಾಂಗ್ರೆಸ್ಸಿಗರು ಮಾಡುತಿದ್ದಾರೆ. ಕುವೆಂಪು ಅವರ ನಾಡಗೀತೆ ಬಗ್ಗೆ ಯಾರೂ ಅಪಮಾನ ಮಾಡಬಾರದು. ಯಾರಾದರೂ ಅಪಮಾನ‌ ಮಾಡಿದರೆ ಅವರ ವಿರುದ್ಧ‌‌ ಸಿಎಂ ಕ್ರಮ ಕೈಗೊಳ್ಳುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next